More

    ರಾಜಮೌಳಿ ಚಾಲೆಂಜ್ ಒಪ್ಪಿದ ತಾರಕ್ … ಕಸ ಗುಡಿಸಿ ರಿಯಲ್ ಹೀರೋ ಆದ ಜ್ಯೂನಿಯರ್ ಎನ್.ಟಿ.ಆರ್

    ಲಾಕ್‌ಡೌನ್ ಯಾವಾಗ ಮುಗಿಯುತ್ತದೆ ಗೊತ್ತಿಲ್ಲ. ಸಿನಿಮಾ ಶೂಟಿಂಗ್ ಯಾವತ್ತಿನಿಂದ ಪ್ರಾರಂಭ ಎಂಬುದೂ ಗೊತ್ತಿಲ್ಲ. ಈ ಮಧ್ಯೆ ಚಿತ್ರರಂಗದವರು ಓದುತ್ತಾ, ಸಿನಿಮಾ ನೋಡುತ್ತಾ, ಮನೆಗೆಲಸ ಮಾಡುತ್ತಾ ಬ್ಯುಸಿಯಾಗಿದ್ದಾರೆ. ತೆರೆಯ ಮೇಲೆ ನೂರಾರು ಜನರನ್ನು ಪುಡಿಪುಡಿ ಮಾಡುವ ತೆಲುಗಿನ ಸೂಪರ್‌ಸ್ಟಾರ್ ಜ್ಯೂನಿಯರ್ ಎನ್.ಟಿ.ಆರ್ ಸಹ ಇದಕ್ಕೆ ಹೊರತಲ್ಲ. ಅವರು ಮನೆ ಕೆಲಸ ಮಾಡಿ, ‘ರಿಯಲ್ ಹೀರೋ’ ಆಗಿದ್ದಾರೆ.

    ಜ್ಯೂನಿಯರ್ ಎನ್.ಟಿ.ಆರ್ ಇತ್ತೀಚೆಗೆ ಮನೆಯಲ್ಲಿ ಒಂದಿಷ್ಟು ಕೆಲಸ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಮನೆ ಕೆಲಸಕ್ಕೆ ಹಲವಾರು ಮಂದಿ ಇರುವಾಗ, ತಾರಕ್ ಯಾಕೆ ಹೀಗೆ ಮಾಡಿದರು ಎಂದರೆ, ಅದಕ್ಕೊಂದು ಕಾರಣವಿದೆ. ಅವರಿಗೆ ಈ ಚಾಲೆಂಜ್ ಹಾಕಿದವರು ನಿರ್ದೇಶಕ ರಾಜಮೌಳಿ. ಸೋಮವಾರ ರಾಜಮೌಳಿ ಇದೇ ತರಹ ಮನೆ ಕೆಲಸ ಮಾಡಿ, ವೀಡಯೋ ಪೋಸ್ಟ್ ಮಾಡಿದ್ದರು. ಅದರ ಜತೆಗೆ, ತಾರಕ್‌ಗೆ ಚಾಲೆಂಜ್ ಮಾಡಿದ್ದರು. ಆ ಸವಾಲನ್ನು ಯಶಸ್ವಿಯಾಗಿ ಪೂರೈಸಿರುವ ತಾರಕ್, ಅದನ್ನು ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಕೊರಟಾಲ ಶಿವ ಮುಂತಾದವರಿಗೆ ಪಾಸ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಕೊರಟಾಲ ಶಿವ ಮುಂತಾದವರೆಲ್ಲಾ ಮನೆ ಕೆಲಸ ಮಾಡುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದರೆ ಆಶ್ಚರ್ಯವಿಲ್ಲ.

    ಈ ಸವಾಲಿನ ಹೆಸರು ‘ಬಿ ದಿ ರಿಯಲ್ ಮ್ಯಾನ್’. ರಾಜಮೌಳಿ ಅವರಿಗೆ ಇಂಥದ್ದೊಂದು ಸವಾಲು ಹಾಕಿದ್ದು ನಿರ್ದೇಶಕ ಸಂದೀಪ್ ವಂಗಾ. ತೆರೆಯ ಮೇಲೆ ಹೀರೋ ಆಗುವುದಷ್ಟೇ ಅಲ್ಲ, ಮನೆಯಲ್ಲೂ ಹೀರೋಗಳಾಗಿ, ಮನೆಯವರಿಗೆ ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಎಂದನಿಸಿಕೊಳ್ಳಿ ಎಂಬ ಉದ್ದೇಶದಿಂದ ಸಂದೀಪ್ ಈ ಸವಾಲು ಶುರು ಮಾಡಿದ್ದರು. ‘ಬೀ ದಿ ರಿಯಲ್ ಮ್ಯಾನ್’ ಚಾಲೆಂಜ್ ಈಗ ಟಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ವುಡ್‌ಗಳಿಗೆ ಹಬ್ಬಿದರೆ ಆಶ್ಚರ್ಯವಿಲ್ಲ.

    ಅಮೆಜಾನ್​ ಪ್ರೈಮ್​ಗೆ ಬಂದೇ ಬಿಡ್ತು ಕನ್ನಡ ಈ ಸಸ್ಪೆನ್ಸ್ ಥ್ರಿಲ್ಲರ್​ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts