More

    ಶಬರಿಮಲೆ ಅಯ್ಯಪ್ಪ ದೇಗುಲ ಪುನರಾರಂಭಕ್ಕೆ ತಂತ್ರಿ ಆಕ್ಷೇಪ

    ತಿರುವನಂತಪುರ: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜೂನ್ 14 ರಿಂದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಭಕ್ತರ ಪ್ರವೇಶಕ್ಕೆ ಶಬರಿಮಲೆ ತಂತ್ರಿ (ಮುಖ್ಯ ಅರ್ಚಕ) ಬುಧವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
    ಕೇರಳದ ಶಬರಿಮಲ ಅಯ್ಯಪ್ಪ ದೇವಸ್ಥಾನವನ್ನು ಜೂನ್ 14 ರಿಂದ ಪುನಃ ತೆರೆದು ಭಕ್ತರಿಗೆ ಪ್ರವೇಶಕ್ಕೆ ಅನುಮತಿಸಲು ನಿರ್ಧರಿಸಲಾಗಿತ್ತು. ಆದರೆ ಕರೊನಾ ಪ್ರಕರಣಗಳು ಹೆಚ್ಚುತ್ತಿರುವದರಿಂದ ದೇವಸ್ಥಾನದ ಬಾಗಿಲು ತೆರೆಯಲು ತಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…

    ಮುಖ್ಯ ತಂತ್ರಿ ಕಂದರಾರು ಮಹೇಶ್ ಮೋಹನಾರು ಅವರು ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದಿದ್ದು, ಕರೊನಾ ಹರಡುವ ಸಾಧ್ಯತೆಗಳನ್ನು ಪರಿಗಣಿಸಿ ಜೂನ್ 14 ರಿಂದ ಭಕ್ತರಿಗೆ ಪ್ರವೇಶಾವಕಾಶ ನೀಡುವ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.  ಕೇರಳ ಸರ್ಕಾರ ತಂತ್ರಿ ಮತ್ತು ಇತರ ದೇವಾಲಯಗಳ ಪ್ರತಿನಿಧಿಗಳೊಂದಿಗೆ ಈ ಕುರಿತು ಚರ್ಚಿಸಲು ಸಭೆ ಕರೆದಿದೆ.

    ಮಂಗಳವಾರದಿಂದ ಸಾರ್ವಜನಿಕರಿಗೆ ಪೂಜಾ ಕೇಂದ್ರಗಳಿಗೆ ಅವಕಾಶ ನೀಡುವ ಕೇರಳ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವ ಬಿಜೆಪಿ, ತಂತ್ರಿಯ ಬೇಡಿಕೆಯನ್ನು ಬಲವಾಗಿ ಬೆಂಬಲಿಸುತ್ತಿದ್ದರೆ, ತಂತ್ರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

    ಇದನ್ನೂ ಓದಿ: VIDEO ] ನೀವೂ ಯಶಸ್ಸು ಗಳಿಸಬೇಕೆ? ಇಲ್ಲಿದೆ ನೋಡಿ ಒಂದು ಪಾಠ

    ದೇಗುಲಕ್ಕೆ ಭಕ್ತರಿಗೆ ಪ್ರವೇಶಾವಕಾಶ ನೀಡುವ ನಿರ್ಧಾರವನ್ನು ದೇವಾಲಯಗಳಿಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗಿದೆ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

    ದೇವಾಲಯಗಳನ್ನು ಶೀಘ್ರದಲ್ಲೇ ತೆರೆಯಬೇಕು ಎಂಬ ಹಠಮಾರಿ ಧೋರಣೆಯನ್ನು ಸರ್ಕಾರ ಹೊಂದಿಲ್ಲ, ಭಕ್ತರ ಹಿತಾಸಕ್ತಿಯನ್ನೂ ಪರಿಗಣಿಸುತ್ತದೆ. ಶಬರಿಮಲ ತಂತ್ರಿ ಈಗ ಭಿನ್ನ ನಿರ್ಧಾರ ತೆಗೆದುಕೊಂಡಿರುವುದರಿಂದ, ಗುರುವಾರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಇದನ್ನೂ ಓದಿ: ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು

    ಸಬರಿಮಲ ದೇವಸ್ಥಾನವನ್ನು ಮಾಸಿಕ ಪೂಜೆಗೆ ಜೂನ್ 14 ರೊಳಗೆ ತೆರೆಯಲು ನಿರ್ಧರಿಸಲಾಗಿದ್ದು, ಜೂನ್ 19 ರಿಂದ ಪ್ರಾರಂಭವಾಗುವ ವಾರ್ಷಿಕ ಉತ್ಸವಕ್ಕಾಗಿ ಜೂನ್ 28 ರವರೆಗೆ ತೆರೆದಿರುತ್ತದೆ. ಇತರ ರಾಜ್ಯಗಳ ಭಕ್ತರು ಐಸಿಎಂಆರ್ ಅನುಮೋದಿತ ಪ್ರಯೋಗಾಲಯ ನೀಡುವ, COVID-19 ನೆಗೆಟಿವ್ ಎಂದು ಸಾಬೀತುಪಡಿಸುವ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
    ದೇವಾಲಯಗಳಲ್ಲಿ ಭಕ್ತರಿಗೆ ತರಾತುರಿಯಲ್ಲಿ ಅವಕಾಶ ನೀಡುವ ಎಡಪಕ್ಷ ಸರ್ಕಾರದ ನಿರ್ಧಾರವು ದೇವಾಲಯಗಳಿಂದ ಬರುವ ಆದಾಯವನ್ನು ಗುರಿಯಾಗಿರಿಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.

    ಏತನ್ಮಧ್ಯೆ, ಗುರುವಾಯೂರು ಶ್ರೀ ಕೃಷ್ಣ ದೇವಾಲಯದಂತಹ ಕೆಲವು ಪ್ರಮುಖ ದೇವಾಲಯಗಳು ಮಂಗಳವಾರದಿಂದ ಯಾತ್ರಾರ್ಥಿಗಳಿಗೆ ಪ್ರವೇಶಾವಕಾಶ ನೀಡಿದ್ದರೂ, ಯಾತ್ರಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇತ್ತು.

    ಕಾಣೆಯಾಗಿದ್ದ ಕರೊನಾ ರೋಗಿ ಶೌಚಾಲಯದಲ್ಲಿ ಶವವಾಗಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts