More

    ಬಾಂಗ್ಲಾದೇಶ ಪ್ರಧಾನಿ ಮಧ್ಯಪ್ರವೇಶ; ನಿವೃತ್ತಿ ಹಿಂಪಡೆದ ತಮೀಮ್​ ಇಕ್ಬಾಲ್​

    ಢಾಕಾ: ಗುರುವಾರವಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯವನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದ ಬಾಂಗ್ಲಾದೇಶ ಏಕದಿನ ತಂಡದ ಮಾಜಿ ನಾಯಕ ತಮೀಮ್​ ಇಕ್ಬಾಲ್​ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ.

    ಶುಕ್ರವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರನ್ನು ಪತ್ನಿ ಆಯೇಷಾ, ಮಾಜಿ ನಾಯಕ/ಸಂಸದ ಮುಶ್ರಫೆ ಮೊರ್ಟಾಜಾ, ಬಿಸಿಬಿ ಅಧ್ಯಕ್ಷ ನಜ್ಮುಲ್​ ಹಸನ್​ರೊಂದಿಗೆ ಭೇಟಿ ಮಾಡಿ ಚರ್ಚಿಸಿದ ಬಳಿಕ ತಮೀಮ್​ ತಮ್ಮ ನಿವೃತ್ತಿಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

    ಪ್ರಧಾನಿ ಮಧ್ಯಪ್ರವೇಶ

    34 ವರ್ಷದ ತಮೀಮ್​ ಇಕ್ಬಾಲ್​ ಏಕದಿನ ವಿಶ್ವಕಪ್​ಗೆ ಮೂರು ತಿಂಗಳುಗಳು ಬಾಕಿ ಇರುವಾಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯವನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದರು. ಈ ಕುರಿತು ಗುರುವಾರ ತಡೆರಾತ್ರಿ ಸಭೆ ಬಿಸಿಬಿಯೊಂದಿಗೆ ಸಭೆ ನಡೆಸಿದ ಪ್ರಧಾನಿ ಶೇಖ್​ ಹಸೀನಾ ನಿರ್ಧಾರವನ್ನು ಹಿಂಪಡೆಯುವಂತೆ ಹೇಳಿದ್ದರು.

    Tamim Iqbal

    ಇದನ್ನೂ ಓದಿ: ವಿಶ್ವಕಪ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿ ಬಾಂಗ್ಲಾದೇಶ ತಂಡಕ್ಕೆ ಆಘಾತ ಮೂಡಿಸಿದ ತಮೀಮ್​ ಇಕ್ಬಾಲ್

    ಅದರಂತೆ ಶುಕ್ರವಾರ ಸ್ವತಃ ಶೇಖ್​ ಹಸೀನಾ ತಮೀಮ್​ ಇಕ್ಬಾಲ್​​ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಕ್ರಿಕೆಟ್​ಗೆ ಮರಳುವುದಾಗಿ ಘೋಷಿಸಿದ್ದಾರೆ. ಹಾಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಭಾಗಿಯಾಗುವುದಿಲ್ಲ. ಆಗಷ್ಟ್​​ 31ರಿಂದ ನಡೆಯಲಿರುವ ಏಷ್ಯಾಕಪ್​ನಲ್ಲಿ ಭಾಗಿಯಾಗುವುದಾಗಿ ತಮೀಮ್​ ಪ್ರಧಾನಿ ಭೇಟಿ ಬಳಿಕ ತಿಳಿಸಿದ್ದಾರೆ.

    ಲಿಟನ್​ ದಾಸ್​ ನಾಯಕ

    ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಇ ಬಾಂಗ್ಲಾದೇಶ ಸೋತ ಬಳಿಕ ತಮೀಮ್ ಇಕ್ಬಾಲ್​ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಂಡದ ನಾಯಕತ್ವವನ್ನು ವಿಕೆಟ್​ ಕೀಪರ್​ ಬ್ಯಾಟ್ಸ್​ಮ್ಯಾನ್​ ಲಿಟನ್​ ದಾಸ್​ಗೆ ವಹಸಿಲಾಗಿದೆ. ಮುಂದಿನ ನಎರಡು ಪಂದ್ಯಗಳಲ್ಲಿ ತಂಡವನ್ನು ಲಿಟನ್​ ದಾಸ್​​ ಮುನ್ನಡೆಸಲಿದ್ದಾರೆ ಎಂದು ಬಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts