More

    ಒಡಿಶಾ ರೈಲು ದುರಂತ; ಮೂವರು ಅಧಿಕಾರಿಗಳನ್ನು ಬಂಧಿಸಿದ ಸಿಬಿಐ

    ಓಡಿಶಾ: ಜೂನ್​ 02ರಂದು ಒಡಿಶಾದ ಬಾಲಾಸೋರ್​ನಲ್ಲಿ ಸಂಭವಿಸಿದ್ದ ತ್ರಿವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರಿಯಾ ತನಿಖಾ ಸಂಸ್ಥೆ(CBI) ಪ್ರಕರಣ ಸಂಬಂಧ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ.

    ಬಂಧಿತರು ಹಿರಿಯ ವಲಯ ಇಂಜಿನಿಯರ್​(ಸಿಗ್ನಲ್​) ಅರುಣ್​ ಕುಮಾರ್​ ಮಹಾಂತ, ಸೆಕ್ಷನ್​ ಇಂಜಿನಿಯರ್​ ಮೊಹಮ್ಮದ್​ ಅಮಿರ್​ ಖಾನ್​, ಟೆಕ್ನಿಷಿಯನ್​ ಪಪ್ಪು ಕುಮಾರ್​ ಎಂಬಾತನನ್ನು ಸಿಬಿಐ ವಶಕ್ಕೆ ಪಡೆದಿದೆ. ಮೂವರು ಅಧಿಕಾರಿಗಳನ್ನು ಭಾರತ ದಂಡ ಸಂಹಿತೆ(IPC Section) 304(ಕೊಲೆಯಲ್ಲದ ನರಹತ್ಯೆ), 201(ಸಾಕ್ಷ್ಯ ನಾಶ) ಅಡಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    ಇದನ್ನೂ ಓದಿ: ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು

    ಜೂನ್​ 02ರಂದು ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿರುವ ಬಾಲಾಸೋರ್​ ಬಳಿ ಇರುವ ಬಹನಾಗ ರೈಲ್ವೇ ನಿಲ್ದಾಣದ ಬಳಿ ಕೋರಮಂಡಲ್​ ಎಕ್ಸ್​ಪ್ರೆಸ್​, ಗೂಡ್ಸ್​ ರೈಲು ಹಾಗೂ ಬೆಂಗಳೂರು ಹೌರಾ ಟ್ರೈನ್​ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 300 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 1,000ಕ್ಕೂ ಹೆಚ್ಚಿನವರಿಗೆ ಗಂಭೀರ ಗಾಯಗಳಾಗಿತ್ತು.

    ಘಟನೆ ನಡೆದ 72 ಘಂಟೆಗಳ ಬಳಿಕ ಕೇಂದ್ರ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಮಾನವ ಲೋಪವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts