More

    ಆಂಧ್ರ ಗಡಿಯಲ್ಲಿ ಗೋಡೆ ನಿರ್ಮಾಣ: ಅಂತಾರಾಜ್ಯ ವಾಹನ ಸಂಚಾರ ತಡೆಯಲು ತಮಿಳುನಾಡು ಸರ್ಕಾರದ ಕ್ರಮ

    ಹೈದರಾಬಾದ್​: ಅಂತಾರಾಜ್ಯ ವಾಹನ ಸಂಚಾರ ತಡೆಗಟ್ಟುವ ಜತೆಗೆ ಕೋವಿಡ್​ ಸೋಂಕು ಹರಡದಂತೆ ತಡೆಯಲು ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡ ಗಡಿಯಲ್ಲಿ ತಮಿಳುನಾಡು ಸರ್ಕಾರ ಬೃಹತ್​ ಗೋಡೆಯನ್ನು ನಿರ್ಮಿಸಿದೆ. ಇದರಿಂದಾಗಿ ಈ ಭಾಗದಲ್ಲಿನ ಜನ-ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.

    ಚಿತ್ತೂರು ಜಿಲ್ಲೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಡಿಯಟ್ಟಾಂನಲ್ಲಿ ತಮಿಳುನಾಡು ಸರ್ಕಾರ 3 ಅಡಿ ಎತ್ತರ, 4 ಅಡಿ ಅಗಲ ಮತ್ತು 30 ಅಡಿ ಉದ್ದದ ಗೋಡೆಯನ್ನು ನಿರ್ಮಿಸಿದೆ. ಅಂತಾರಾಜ್ಯ ತುರ್ತು ಸರಕು ಸಾಗಣೆ ವಿಷಯವಾಗಿ ಭಾರಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ವೆಲ್ಲೋರ್​ ಜಿಲ್ಲಾಡಳಿತದ ಗಮನಸೆಳೆಯುವ ಸಲುವಾಗಿ ತಮಿಳುನಾಡು ಸರ್ಕಾರ ಈ ಕ್ರಮ ಕೈಗೊಂಡಿದೆ.

    ಚಿತ್ತೂರು ಗಡಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ವೆಲ್ಲೋರ್​ ನಗರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಉಭಯ ಸರ್ಕಾರಗಳು ಚೆಕ್​ಪೋಸ್ಟ್​ಗಳನ್ನು ನಿರ್ಮಿಸಿವೆ. ಹೀಗಿರುವಾಗ ಈ ಭಾಗದಲ್ಲಿ ತಮಿಳುನಾಡು ಗೋಡೆ ನಿರ್ಮಿಸಿರುವ ಕ್ರಮ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಚಿತ್ತೂರು ಜಿಲ್ಲೆಯ ಜಂಟಿ ಕಲೆಕ್ಟರ್​ ಡಿ. ಮಾರ್ಕೆಂಡೇಯಲು ಹೇಳಿದ್ದಾರೆ.

    ವೆಲ್ಲೋರ್​ನಲ್ಲಿರುವ ಕ್ಯಾನ್ಸರ್​ ಆಸ್ಪತ್ರೆಗೆ ಆಂಧ್ರಪ್ರದೇಶದ ಸಾಕಷ್ಟು ಜನರು ಚಿಕಿತ್ಸೆ ತೆರಳುತ್ತಾರೆ. ಅಲ್ಲದೆ ಅಲ್ಲಿರುವ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಂಧ್ರದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ, ಗೋಡೆಯನ್ನು ಶೀಘ್ರವೇ ತೆರವುಗೊಳಿಸುವಂತೆ ತಮಿಳುನಾಡು ಸರ್ಕಾರದ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

    ಚೀನಾದ ಕಳಪೆ ಟೆಸ್ಟ್​ ಕಿಟ್​ನಿಂದ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts