More

    ಚೀನಾದ ಕಳಪೆ ಟೆಸ್ಟ್​ ಕಿಟ್​ನಿಂದ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

    ನವದೆಹಲಿ: ಚೀನಾದ ಎರಡು ಕಂಪನಿಗಳು ಪೂರೈಸಿದ್ದ ರ‍್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಕಿಟ್​ಗಳನ್ನು ಕಳಪೆಯಾಗಿದ್ದು, ಅವುಗಳನ್ನು ಬಳಸದಂತೆ ತಿರಸ್ಕರಿಸಲಾಗಿದ್ದರೂ ಸರ್ಕಾರಕ್ಕೆ ಒಂದು ರೂಪಾಯಿ ಕೂಡ ನಷ್ಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ರ‍್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ನ ಚೀನಿ ಮಾಲು ಕಳಪೆಯಾಗಿದ್ದು, ಅವನ್ನು ಬಳಸದಂತೆ ಸರ್ಕಾರ ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್​ ಈ ಕಿಟ್​​ಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಲಾಗುತ್ತಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಇವುಗಳ ಖರೀದಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದೆ.

    ಚೀನಾದ ಗುವಾಂಗ್​ಝೌನ ವೋಂಡ್​ಫೋ ಬಯೋಟೆಕ್​ ಮತ್ತು ಝುಹಾಯ್​ ಲಿವ್​ಜಾನ್​ ಡಯಾಗ್ನಾಸ್ಟಿಕ್ಸ್​ ಎಂಬ ಎರಡು ಕಂಪನಿಗಳಿಂದ ಇವನ್ನು ಖರೀದಿಸಲಾಗಿತ್ತು. ಐಸಿಎಂಆರ್​ನಲ್ಲಿ ಇವುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಇವುಗಳ ಪರೀಕ್ಷಾ ಫಲಿತಾಂಶಗಳಲ್ಲಿ ಸ್ಥಿರತೆ ಇಲ್ಲದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇವುಗಳನ್ನು ಬಳಸದಂತೆ ಸರ್ಕಾರ ಆಸ್ಪತ್ರೆಗಳಿಗೆ ಸೂಚನೆ ನೀಡಿತ್ತು.

    ಇವುಗಳ ಖರೀದಿಗೆ ಶೇ.100 ಮುಂಗಡ ನೀಡದಿರಲು ನಿರ್ಧರಿಸಲಾಗಿತ್ತು. ಹೀಗಾಗಿ, ಇವುಗಳ ಖರೀದಿಯಿಂದ ಭಾರತಕ್ಕೆ ಒಂದು ರೂಪಾಯಿ ಕೂಡ ನಷ್ಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಸರ್ಕಾರ ಐಸಿಎಂಆರ್​ ಮೂಲಕ ಮಾ.27ರಂದು 5 ಲಕ್ಷ ರ‍್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಕಿಟ್​ ಖರೀದಿಗೆ ಮುಂದಾಗಿತ್ತು. ಇವುಗಳ ಖರೀದಿಗಾಗಿ ಐಸಿಎಂಆರ್​ ಮತ್ತು ಆರ್ಕ್​ ಫಾರ್ಮಸ್ಯುಟಿಕಲ್ಸ್​ ನಡುವೆ ಒಪ್ಪಂದ ಏರ್ಪಟ್ಟಿತ್ತು. ಟೆಸ್ಟ್​ ಕಿಟ್​ಗಳ ಆಮದುದಾರ ಮ್ಯಾಟ್ರಿಕ್ಸ್​ ಸಂಸ್ಥೆ ಇವುಗಳನ್ನು 245 ರೂ.ಗೆ ಖರೀದಿಸಿ, ಐಸಿಎಂಆರ್​ಗೆ ತಲಾ 600 ರೂ.ನಂತೆ ಮಾರಾಟ ಮಾಡಿತ್ತು. ಇದರ ಮಾರಾಟದ ಬೆಲೆ ಮೂಲಬೆಲೆಗಿಂತ ಶೇ.60 ಹೆಚ್ಚಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

    ಈ ಬಗ್ಗೆ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​ ಪ್ರತಿಯೊಂದು ಕಿಟ್​ನ ಬೆಲೆಯನ್ನು ಗರಿಷ್ಠ 400 ರೂ.ಗೆ ನಿಗದಿಗೊಳಿಸಿ ಆದೇಶಿಸಿತ್ತು.

    ವಿದೇಶಿ ಪ್ರಯಾಣ ಮಾಡಿಲ್ಲವಾದರೆ ಕೋವಿಡ್​ ಪರೀಕ್ಷೆ ಇಲ್ಲ; ತೆಲಂಗಾಣ ವೈದ್ಯರ ಈ ಕ್ರಮಕ್ಕೆ ಭಾರಿ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts