ಚೀನಾದ ಕಳಪೆ ಟೆಸ್ಟ್​ ಕಿಟ್​ನಿಂದ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

ನವದೆಹಲಿ: ಚೀನಾದ ಎರಡು ಕಂಪನಿಗಳು ಪೂರೈಸಿದ್ದ ರ‍್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ ಕಿಟ್​ಗಳನ್ನು ಕಳಪೆಯಾಗಿದ್ದು, ಅವುಗಳನ್ನು ಬಳಸದಂತೆ ತಿರಸ್ಕರಿಸಲಾಗಿದ್ದರೂ ಸರ್ಕಾರಕ್ಕೆ ಒಂದು ರೂಪಾಯಿ ಕೂಡ ನಷ್ಟವಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರ‍್ಯಾಪಿಡ್​ ಆ್ಯಂಟಿಬಾಡಿ ಟೆಸ್ಟ್​ನ ಚೀನಿ ಮಾಲು ಕಳಪೆಯಾಗಿದ್ದು, ಅವನ್ನು ಬಳಸದಂತೆ ಸರ್ಕಾರ ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್​ ಈ ಕಿಟ್​​ಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಲಾಗುತ್ತಿದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಇವುಗಳ ಖರೀದಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ … Continue reading ಚೀನಾದ ಕಳಪೆ ಟೆಸ್ಟ್​ ಕಿಟ್​ನಿಂದ ಭಾರತಕ್ಕೆ ಯಾವುದೇ ನಷ್ಟವಾಗಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ