More

    ಇಂದು ವರ್ಲ್ಡ್ ಓರಲ್ ಹೆಲ್ತ್ ಡೇ… ನಿಮ್ಮ ಬಾಯಿಯ ಬಗ್ಗೆ ಹುಷಾರು!

    ನವದೆಹಲಿ : ಪ್ರತಿವರ್ಷ ಮಾರ್ಚ್​ 20ನೇ ತಾರೀಖನ್ನು “ವರ್ಲ್ಡ್ ಓರಲ್ ಹೆಲ್ತ್ ಡೇ” ಆಗಿ ಆಚರಿಸಲಾಗುತ್ತದೆ. ಈ ದಿನ ಬಾಯಿಯ, ವಿಶೇಷವಾಗಿ ಅದರಲ್ಲಿರುವ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಅರಿವು ಮೂಡಿಸುವ ದಿನ. ಮುಖದಲ್ಲಿ ಒಳ್ಳೆಯ ನಗು ಅರಳಲು ಮತ್ತು ನಮ್ಮ ದೇಹದ ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.

    ನೀವು ಸಸ್ಯಾಹಾರಿಯಾಗಿರಲಿ, ಮಾಂಸಾಹಾರಿಯಾಗಿರಲಿ, ಆಹಾರವನ್ನು ಸರಿಯಾಗಿ ಸೇವಿಸಬೇಕೆಂದರೆ ಹಲ್ಲುಗಳು ಚೆನ್ನಾಗಿ ಕೆಲಸ ಮಾಡಬೇಕು. ಹೀಗಾಗಿ ನಿಮ್ಮ ಹಲ್ಲುಗಳು ಹೇಗಿವೆ ಎಂದು ಯೋಚಿಸಲು ಇಂದು ಸುಸಮಯ. ಜಾಹೀರಾತಿನಲ್ಲಿ ತೋರಿಸುವಂತೆ ಬರೀ ಒಳ್ಳೆಯ ಟೂತ್​ಪೇಸ್ಟ್ ಬಳಸಿದರೆ ಸಾಕಾಗೋಲ್ಲ. ಕಾಲಕಾಲಕ್ಕೆ ದಂತವೈದ್ಯರ ಸೂಕ್ತ ಸಹಾಯ ಕೂಡ ಪಡೆಯಬೇಕಾಗುತ್ತದೆ.

    ಇದನ್ನೂ ಓದಿ: 7.2 ತೀವ್ರತೆಯ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ

    ಸ್ವಲ್ಪ ಸ್ವಲ್ಪವೇ ಕಾಣಿಸಿಕೊಳ್ಳುತ್ತಿರುವ ಹಲ್ಲುನೋವು ಭಾರೀ ಹುಳುಕಲ್ಲಿನ ಸಂಕೇತವಾಗಿರಬಹುದು. ಸದಾ ಕಾಲ ಬಾಯಿ ವಾಸನೆ ಬರುವುದು ಸರಿಯಾಗಿ ಬ್ರಶ್ ಮಾಡದೇ ಇರುವುದನ್ನು ಸೂಚಿಸುತ್ತಿರಬಹುದು, ಅಥವಾ ವಸಡಿನ ಸಮಸ್ಯೆಯ ಸಂಕೇತವಾಗಿರಬಹುದು. ಪದೇ ಪದೇ ಮೂಡುವ ಬಾಯಿಹುಣ್ಣುಗಳು ಹಿರಿಯರು ಹೇಳುವಂತೆ ದೇಹಕ್ಕೆ ಉಷ್ಣವಾಗಿದೆ ಎಂದು ಸೂಚಿಸುತ್ತಿರಬಹುದು ಅಥವಾ ವಿಟಮಿನ್ ಬಿ ಕಾಂಪ್ಲೆಕ್ಸ್​ನ ಕೊರತೆಯನ್ನು ಸೂಚಿಸುತ್ತಿರಬಹುದು. ಈ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ವೈದ್ಯರ ಸಹಾಯವನ್ನು ಸಕಾಲಿಕವಾಗಿ ಪಡೆಯಿರಿ.

    ಓರಲ್ ಹೆಲ್ತ್​ ಡೇಗೆ 2021-2023 ರವರೆಗಿನ ಕ್ಯಾಂಪೇನ್ ಥೀಮ್ ಎಂದರೆ ‘ಬಿ ಪ್ರೌಡ್ ಆಫ್ ಯುವರ್ ಮೌತ್’. ಬಾಯಿಗೆ ಸರಿಯಾದ ಮಹತ್ವ ಕೊಟ್ಟು ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಅರಿವನ್ನು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೂಡಿಸುವುದಕ್ಕೆ ಈ ದಿನ ನಾಂದಿ ಹಾಡಲಿ.

    ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

    “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

    8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts