More

    ಮಿಥಾಲಿ ರಾಜ್ ಬಯೋಪಿಕ್​ಗಾಗಿ ಬ್ಯಾಟ್​ ಹಿಡಿಯಲು ಸಿದ್ಧರಾಗ್ತಿದ್ದಾರೆ ತಾಪ್ಸೀ ಪನ್ನು

    ನವದೆಹಲಿ: ಕ್ರಿಕೆಟ್ ತಾರೆಯರಾದ ಮೊಹಮದ್ ಅಜರುದ್ದೀನ್, ಎಂಎಸ್ ಧೋನಿ, ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾಗಳು ಈಗಾಗಲೆ ಬಾಲಿವುಡ್‌ನಲ್ಲಿ ತೆರೆಗೆ ಅಪ್ಪಳಿಸಿವೆ. ಇದೀಗ ಮಹಿಳಾ ಕ್ರಿಕೆಟರ್ ಸರದಿ. ಮಹಿಳೆಯರ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಆಧಾರಿತ ‘ಶಭಾಷ್ ಮಿಥು’ ಹೆಸರಿನ ಸಿನಿಮಾ ಬಾಲಿವುಡ್​ನಲ್ಲಿ ಸಿದ್ಧವಾಗುತ್ತಿದೆ. ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಇದೇ ಸಿನಿಮಾಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ವತಃ ತಾಪ್ಸೀ ನೀಡಿದ್ದಾರೆ.

    ಇದನ್ನೂ ಓದಿ: ಅವ್ರ ಸಿನ್ಮಾದಲ್ಲಿ ಇವ್ರು … ಇವ್ರ ಸಿನ್ಮಾದಲ್ಲಿ ಅವ್ರು

    ಲಾಕ್​ಡೌನ್​ಗೂ ಮುಂಚೆ ಶಭಾಷ್​ ಮಿಥು ಚಿತ್ರಕ್ಕಾಗಿ ಟ್ರೇನಿಂಗ್​ನಲ್ಲಿ ತೊಡಗಿಸಿಕೊಂಡಿದ್ದ ತಾಪ್ಸೀ, ಇನ್ನೇನು ಚಿತ್ರದ ಶೂಟಿಂಗ್​ ಶುರುವಾಗಬೇಕೆನ್ನುವಾಗ ಲಾಕ್​ಡೌನ್​ ಘೋಷಿಸಲಾಯಿತು. ಇದೀಗ ಮತ್ತೆ ಬ್ಯಾಟ್​ ಹಿಡಿದು ಮೈದಾನಕ್ಕಿಳಿಯಲು ತಾಪ್ಸೀ ತಯಾರಾಗುತ್ತಿದ್ದಾರೆ. ಚಿತ್ರಕ್ಕಾಗಿ ತರಬೇತಿ ಪಡೆದುಕೊಳ್ಳಲಿದ್ದು, ಮಾರ್ಚ್​ ವೇಳೆ ಶೂಟಿಂಗ್​ ಶುರುವಾಗಲಿದೆ.

    ‘ಚಿತ್ರದ ಸಲುವಾಗಿ ಮತ್ತೆ ಬ್ಯಾಟ್​ ಹಿಡಿದು ಟ್ರೇನಿಂಗ್​ ಪಡೆಯಬೇಕಿದೆ. ಮೂರು ತಿಂಗಳ ಕಾಲ ತರಬೇತಿಯಲ್ಲಿಯೇ ಕಾಲ ಕಳೆಯಬೇಕೆಂದುಕೊಂಡಿದ್ದೇನೆ. ಸಿನಿಮಾ ಶುರುವಾದ ಬಳಿಕವೂ ಆ ಟ್ರೇನಿಂಗ್ ಮುಂದುವರಿಯಲಿದೆ. ಸೆಟ್​ನಲ್ಲೂ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್​ ಆಡುತ್ತೇನೆ. ಒಟ್ಟಾರೆಯಾಗಿ ಇಡೀ ಸಿನಿಮಾ ಮುಗಿಯುವವರೆಗೂ ಕ್ರಿಕೆಟ್​ ಜಪ ಮಾಡಲಿದ್ದೇನೆ’ ಎಂಬುದು ತಾಪ್ಸೀ ಮಾತು.

    ಇದನ್ನೂ ಓದಿ: ‘ಆಚಾರ್ಯ’ಗಾಗಿ ಹನಿಮೂನ್​ ಮುಗಿಸಿ ವಾಪಸ್ಸಾದ ಕಾಜಲ್​ ಅಗರ್​ವಾಲ್​

    ಸದ್ಯ ರಶ್ಮಿ ರಾಕೆಟ್​ ಸಿನಿಮಾ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಡಿಸೆಂಬರ್​ ತಿಂಗಳಲ್ಲಿ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದ್ದು, ಜನವರಿಯಿಂದ ಕ್ರಿಕೆಟ್​ನಲ್ಲಿಯೇ ಮುಳುಗೇಳಲಿದ್ದಾರಂತೆ ತಾಪ್ಸೀ.  ಇತ್ತ ಈಗಾಗಲೇ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿರುವ 38 ವರ್ಷದ ಮಿಥಾಲಿ ಮುಂದಿನ ವರ್ಷ ಏಕದಿನ ಕ್ರಿಕೆಟ್ ಜೀವನಕ್ಕೂ ವಿದಾಯ ಹೇಳುವ ಮುನ್ನ ವಿಶ್ವಕಪ್ ಜಯಿಸುವ ಮಹದಾಸೆ ಹೊಂದಿದ್ದಾರೆ. 2005 ಮತ್ತು 2017ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡದ ಭಾಗವಾಗಿದ್ದ ಮಿಥಾಲಿ, 3ನೇ ಯತ್ನದಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts