More

    ಆಟೋ ಚಾಲಕರಿಗೆ ಆಹಾರದ ಕಿಟ್​ ನೀಡಿ ನೆರವಾದ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​

    ಹೈದರಾಬಾದ್​: ಕರೊನಾ ಹಾವಳಿಯಿಂದಾಗಿ ದೇಶದ ಹೆಚ್ಚಿನ ಭಾಗ ಲಾಕ್​ಡೌನ್​ ಆಗಿರುವ ಸಮಯದಲ್ಲಿ ಹಲವು ಕ್ಷೇತ್ರದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆಟೋ ರಿಕ್ಷಾ ಚಾಲಕರು ಇದರಲ್ಲಿ ಪ್ರಮುಖವಾದವರು. ಹೀಗಾಗಿ ಅವರಿಗೆ ಆಹಾರದ ಕಿಟ್​ ನೀಡಿ ನೆರವಾಗುವ ಯೋಜನೆಯೊಂದನ್ನು ಭಾರತ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟುಗಾರ್ತಿ ಹಾಗೂ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್​ ಹಮ್ಮಿಕೊಂಡಿದ್ದಾರೆ. ಇದರಂತೆ ಅವರ ಗೈರಿನಲ್ಲಿ ತಂದೆ ದೊರೈ ರಾಜ್​, ಆಟೋ ಚಾಲಕರಿಗೆ ಆಹಾರದ ಕಿಟ್​ ವಿತರಿಸಿದ್ದಾರೆ.

    ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲು ಸದ್ಯ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿರುವ ಮಿಥಾಲಿ ರಾಜ್​, ತಮ್ಮ ತಂದೆ ಆಟೋ ಚಾಲಕರಿಗೆ ಆಹಾರದ ಕಿಟ್​ ವಿತರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ತಂದೆ ಸರಿಯಾಗಿ ಮಾಸ್ಕ್​ ಧರಿಸಿರದ ಬಗ್ಗೆಯೂ ತಮಾಷೆಯಾಗಿಯೇ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೆ ಭುವನೇಶ್ವರ್​ ಸಾರಥ್ಯದ ಭಾರತ ತಂಡ ಆರಿಸಿದ ಹರ್ಷ ಬೋಗ್ಲೆ!

    ಮಿಥಾಲಿ ರಾಜ್​ ಇನೀಶಿಯೇಟಿವ್​ ಅಂಗವಾಗಿ ಆಟೋ ಚಾಲಕರಿಗೆ ಆಹಾರದ ಕಿಟ್​ ಮತ್ತು ಸಣ್ಣ ಮೊತ್ತವನ್ನು ವಿತರಿಸಲಾಯಿತು. ಕಳೆದ ವರ್ಷ ಕೋವಿಡ್​ ಸಮಯದಲ್ಲಿ ಇದನ್ನು ಆರಂಭಿಸಿದ್ದೆವು. ನನ್ನ ಗೈರಿನಲ್ಲಿ ತಂದೆ ಈ ಕೆಲಸವನ್ನು ನಿರ್ವಹಿಸಿದರು. ಆದರೆ ಅವರ ಮಾಸ್ಕ್​ನದ್ದೇ ಸಮಸ್ಯೆಯಾಗಿದೆ ಎಂದು ಮಿಥಾಲಿ ರಾಜ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಪತ್ನಿಯ ಬ್ಲರ್​ ಚಿತ್ರಕ್ಕೆ ಟ್ರೋಲ್​, ಇರ್ಫಾನ್​ ಪಠಾಣ್​ ನೀಡಿದ ಉತ್ತರವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts