More

    ಯಾರೊಬ್ಬರೂ ನನ್ನನ್ನು ಟಾಪ್​ 3 ನಟಿಯರಲ್ಲಿ ಗುರುತಿಸೋದೇ ಇಲ್ಲ: ಹೀಗೆಂದು ಅಳಲುತೋಡಿಕೊಂಡ ನಟಿ ತಾಪ್ಸಿ ಪನ್ನು

    ಮುಂಬೈ: ದಕ್ಷಿಣ ಭಾರತ ಚಿತ್ರಗಳಲ್ಲಿ ಯಶಸ್ವಿ ಪಡೆದ ಬಳಿಕ ಬಾಲಿವುಡ್​ನತ್ತ ಮುಖ ಮಾಡಿರುವ ನಟಿ ತಾಪ್ಸಿ ಪನ್ನುಗೆ ಹೀಗೊಂದು ಕೊರಗು ಕಾಡುತ್ತಿದೆ. ಈ ಬಗ್ಗೆ ಸ್ವತಃ ನಟಿ ತಾಪ್ಸಿಪನ್ನು ಅವರೇ ಹೇಳಿಕೊಂಡಿದ್ದಾರೆ.ಮಹಿಳಾ ಕ್ರಿಕೆಟ್​​ ತಂಡದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮಿಥಾಲಿ ರಾಜ್​ ಕುರಿತ ಜೀವನಾಧಾರಿತ ಚಿತ್ರದಲ್ಲಿ ನಟಿಸಿರುವ ತಾಪ್ಸಿ, ಚಿತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ರೀತಿ ಹೇಳಿದ್ದಾರೆ.

    ಯಾರೊಬ್ಬರು ನನ್ನನ್ನು ಟಾಪ್​ 3 ನಟಿಯರಲ್ಲಿ ಗುರುತಿಸೋದೇ ಇಲ್ಲ, ಹೀಗೆ ಏಕೆ ಎಂದು ನಾನೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದೇನೆ ಎಂದಿರುವ ತಾಪ್ಸಿ, ನಾನೂ ಕೂಡ ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದೇನೆ. ಸಾಕಷ್ಟು ಉತ್ತಮ ಪಾತ್ರಗಳನ್ನೂ ನಿರ್ವಹಿಸಿದ್ದೇನೆ. ಆದರೂ ನಾನು ಜನರ ಮನಸ್ಸಿನಿಂದ ದೂರವಿರಬಹುದು ಎಂದು ನನಗೆ ಅನ್ನಿಸಿದೆ ಎಂದಿದ್ದಾರೆ.

    ಉದ್ಯಮದಲ್ಲಿ ಟಾಪ್​ 3 ನಾಯಕಿಯರು ಯಾರು ಎಂದು ನೀವು ಸಾಮಾನ್ಯರನ್ನು ಕೇಳಿದರೆ ನಾನು ಆ ಪಟ್ಟಿಯಲ್ಲಿ ಇರುವುದಿಲ್ಲ. ಅದರೆ ನಂಬರ್​ ಗೇಮ್​​ ತಿಳಿದಿರುವವರು ನಿರ್ಧಿಷ್ಟ ನಟನ ಮೇಲೆ ಹೂಡಿಕೆ ಮಾಡಿದ ಹಣದ ಮೊತ್ತ ಮತ್ತು ಅದರ ಆದಾಯವನ್ನು ತಿಳಿದಿರುವವರು ನನ್ನ ಹೆಸರನ್ನು ತೆಗೆದುಕೊಳ್ಳುತ್ತಾರೆ ಹೊರತು ಜನರು ಮಾತ್ರ ಟಾಪ್​ ನಟಿ ಎಂದು ಹೇಳುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಮುಖ್ಯಮಂತ್ರಿಗೆ ಕಳಪೆ ಟೀ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts