More

    VIDEO: ನೆಟ್ ಬೌಲರ್ ಕೋಟಾದಲ್ಲಿ ಆಸೀಸ್‌ಗೆ ಹೋದವ…ಈಗ ಟೀಮ್ ಇಂಡಿಯಾದ ಭರವಸೆ..!

    ಬ್ರಿಸ್ಬೇನ್: ಆತನ ಕುಟುಂಬ ಜೀವನ ನಿರ್ವಹಣೆಗಾಗಿ ಕೂಲಿ ಮಾಡುತ್ತಿತ್ತು. ಒಂದು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದ ಕುಟುಂಬದ ಕುಡಿ ಈಗ ದೇಶದ ಕ್ರಿಕೆಟ್ ಪ್ರಿಯರ ಮನೆಮಾತಾಗಿದ್ದಾನೆ. ಸ್ಥಳೀಯ ಮಟ್ಟದ ಟೆನಿಸ್ ಬಾಲ್ ಟೂರ್ನಿಗಳಲ್ಲಿ ಸ್ಟಾರ್ ಆಟಗಾರನಾಗಿದ್ದ ಆತ, ಮುಂದೆ ಒಂದು ದಿನ ದೇಶ ಪ್ರತಿನಿಧಿಸುತ್ತಾನೆ ಎಂದು ಯಾರು ಊಹಿಸಿರಲಿಲ್ಲ. ಸ್ನೇಹಿತರ ಸಲಹೆ ಮೇರೆಗೆ ಲೆದರ್ ಬಾಲ್‌ನಲ್ಲಿ ಅಭ್ಯಾಸ ಮಾಡಿದ ನಟರಾಜನ್, ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ  (ಟಿಎನ್‌ಪಿಎಲ್) ಆಡುವ ಅವಕಾಶ ಗಿಟ್ಟಿಸಿಕೊಂಡರು. ಅಲ್ಲಿಂದ ಹಿಂದಿರುಗಿ ನೋಡಿದ್ದೆ ಇಲ್ಲ. ಯುಎಇಯಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಯಾರ್ಕರ್ ಎಸೆತಗಳ ಮೂಲಕವೇ ಗಮನಸೆಳೆದಿದ್ದ ನಟರಾಜನ್, ನೆಟ್ ಬೌಲರ್ ಕೋಟಾದಲ್ಲಿ ತಮಿಳುನಾಡಿನ ಬೌಲರ್‌ಗೆ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಮಣೆ ಹಾಕಿತು. ಆದರೆ, ಅದೃಷ್ಟದಾಟದಲ್ಲಿ ಮೂರು ಮಾದರಿ ಕ್ರಿಕೆಟ್‌ನಲ್ಲೂ ದೇಶ ಪ್ರತಿನಿಧಿಸುವ ಅಪರೂಪದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ನಟರಾಜನ್.

    ಇದನ್ನೂ ಓದಿ:ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಟಿ.ನಟರಾಜನ್, ಆಸ್ಟ್ರೇಲಿಯಾ ತಂಡಕ್ಕೆ ಲಬುಶೇನ್ ಆಸರೆ,

    29 ವರ್ಷದ ನಟರಾಜನ್, ಡಿ.2 ರಂದು ಕ್ಯಾನ್‌ಬೆರಾದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೆ, ಇದಾದ ಎರಡು ದಿನಗಳ ಬಳಿಕ ಟ20 ಕ್ರಿಕೆಟ್‌ನಲ್ಲೂ ಕಾಣಿಸಿಕೊಂಡರು. ಆಡಿದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 10 ಓವರ್ ಕೋಟಾದಲ್ಲಿ 70 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. 3 ಪಂದ್ಯಗಳ ಟಿ20 ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ‘ಒಂದೇ ಪ್ರವಾಸದಲ್ಲಿ ಮೂರು ಮಾದರಿಯಲ್ಲೂ ಪದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ..ಟೆಸ್ಟ್ ಕ್ರಿಕೆಟ್‌ಗೆ ಸ್ವಾಗತ ಎಂದು’ ಐಸಿಸಿ ಟ್ವೀಟ್ ಮಾಡಿದೆ.

    ಇದನ್ನೂ ಓದಿ: ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    ಆಡಿದ ಮೊದಲ ಇನಿಂಗ್ಸ್‌ನಲ್ಲೇ 2 ವಿಕೆಟ್ ಕಬಳಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ನಟರಾಜನ್ ಪಾಲಕರು ದಿನಗೂಲಿ ನೌಕಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೆಸ್ಟ್ ಪಂದ್ಯವಾಡುತ್ತಿರುವ ಭಾರತದ 300ನೇ ಕ್ರಿಕೆಟಿಗ. ಇದಕ್ಕಿಂತ ಉತ್ತಮ  ಸಾಧನೆ ಮತ್ತೊಂದು ಇಲ್ಲ. ನಟು ಈಗ ಮೂರು ಮಾದರಿಯ ಕ್ರಿಕೆಟಿಗ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts