ಕ್ವಾರಂಟೈನ್​ನಲ್ಲಿ ಹೋಳಿಗೆಯೂಟ, ಮಾವಿನ ಸೀಕರಣೆ

HOLIGE
Published on

ರಾಯಚೂರು: ದೇವದುರ್ಗದ ಬಿ.ಗಣೇಕಲ್​ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರಿಗೆ ಇಂದು (ಶುಕ್ರವಾರ) ಹೋಳಿಗೆಯೂಟ ಬಡಿಸಲಾಗಿದೆ. ಕೆಲವೆಡೆ ಕ್ವಾರಂಟೈನ್​ಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಆರೋಪದ ನಡುವೆಯೂ ಇಲ್ಲಿನ ಗ್ರಾಪಂ ಸಿಹಿಯೂಟ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದೆ.

ಶುಕ್ರವಾರ ಅಮಾವಸ್ಯೆ. ಹಾಗಾಗಿ ತಾಲೂಕು ಆಡಳಿತದ ಅನುಮತಿ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರಾಮಸ್ಥರ ಸಹಕಾರದೊಂದಿಗೆ ಮಧ್ಯಾಹ್ನ ಹೋಳಿಗೆಯೂಟ, ಜತೆಗೆ ಮಾವಿನ ಹಣ್ಣಿನ ಸೀಕರಣೆ ಬಡಿಸಿದೆ.

ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ್​ನಲ್ಲಿರುವ 52 ಜನರಿಗೆ ಮನೆಯ ಮಾದರಿಯಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿತ್ಯ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ‌ ಸಾಂಬಾರು ನೀಡಲಾಗುತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net