More

    ವಿಷ ಕಾರೋದು ಕಂಗನಾಗೆ ಅಭ್ಯಾಸವಾಗಿಬಿಟ್ಟಿದೆ: ಸ್ವರಾ ಭಾಸ್ಕರ್​

    ಮುಂಬೈ: ಬಾಲಿವುಡ್​ ನಟಿಯರಾದ ಕಂಗನಾ ರಣಾವತ್​ ಮತ್ತು ಸ್ವರಾ ಭಾಸ್ಕರ್​ ನಡುವಿನ ಜಗಳ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ, ಅವರಿಬ್ಬರ ನಡುವಿನ ಕಚ್ಚಾಟ ಒಂದಲ್ಲಾ ಒಂದು ಕಾರಣಕ್ಕೆ ಮುಂದುವರೆಯುತ್ತಿದ್ದು, ಅದು ಈಗ ಇನ್ನೊಂದು ಹಂತ ಮುಟ್ಟಿದೆ.

    ಇದನ್ನೂ ಓದಿ: ಲಿಟ್ಟಲ್​ ಸ್ಟಾರ್​ ಅಲ್ಲ, ರಿಯಲ್​ ಸ್ಟಾರ್​ ಗರಡಿಯಲ್ಲಿ ಪಳಗಿರೋ ಸೂಪರ್​ಸ್ಟಾರ್​ …

    ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಕಂಗನಾ ಅಪಹಾಸ್ಯ ಮಾಡಿದ್ದರು. ಅದರಲ್ಲೂ ವೃದ್ಧೆಯೊಬ್ಬರು 100 ರೂಪಾಯಿಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬಂತಹ ಹೇಳಿಕೆಗಳ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಟೀಕೆಗೊಳಗಾಗಿದ್ದವು. ಕಂಗನಾ ಅವರ ಹೇಳಿಕೆ ಮತ್ತು ನಿಲುವುಗಳನ್ನು ಖಂಡಿಸಿ, ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಮಾತನಾಡಿದ್ದುರ. ಈಗ ಈ ಸಾಲಿಗೆ ಸ್ವರಾ ಭಾಸ್ಕರ್​ ಸಹ ಸೇರಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಕಂಗನಾ ಮಾತುಗಳು ಅತಿಯಾಗುತ್ತಿವೆ. ಅದರಲ್ಲೂ ಇತ್ತೀಚೆಗೆ ಎಲ್ಲರ ಮೇಲೂ ವಿಷಯ ಕಾರೋದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಅವರು ಸೋಷಿಯಲ್​ ಮೀಡಿಯಾದಲ್ಲಿ ಏನೆಲ್ಲಾ ಬರೆಯುತ್ತಾರೋ ಅಥವಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ಅದರಲ್ಲಿ ಕಲ್ಪನೆಯೇ ಜಾಸ್ತಿ ಇರುತ್ತದೆ’ ಎಂದು ಸ್ವರಾ ಹೇಳಿದ್ದಾರೆ.

    ಇದನ್ನೂ ಓದಿ: ರಿಷಬ್​ ಶೆಟ್ಟಿ ಆಸೆ ಈಡೇರಿಸಿದ ದರ್ಶನ್​; ಡ್ರೀಮ್ ಕಾರಲ್ಲಿ ಚಾಲೆಂಜಿಂಗ್​ ಸ್ಟಾರ್ ಜತೆ ಸುತ್ತಾಟ

    ಹಿರಿಯರ ಬಗ್ಗೆ ಕಂಗನಾಗೆ ಸ್ವಲ್ಪವೂ ಗೌರವವಿಲ್ಲ ಎಂದು ಆರೋಪಿಸಿರುವ ಸ್ವರಾ, ‘ಇತ್ತೀಚೆಗೆ ಜಯಾ ಬಚ್ಚನ್​ ಮತ್ತು ಬೇರೆ ಹಿರಿಯ ನಟಿಯರ ಬಗ್ಗೆಯೂ ಕಂಗನಾ ಬಹಳ ಕೆಟ್ಟದಾಗಿ ಮಾತನಾಡಿದ್ದರು. ಇನ್ನು ಕೆಲವರ ಬಗ್ಗೆ ಅವರ ಮಾತುಗಳಂತೂ ಅತಿರೇಕವಾಗಿದೆ. ಅದರಲ್ಲೂ ದೆಹಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಂದರ್​ ಕೌರ್​ ಎಂಬ ಹಿರಿಯ ರೈತರ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳುವುದರ ಜತೆಗೆ, ನೂರು ರೂಪಾಯಿ ಕೊಟ್ಟರೆ ಪ್ರತಿಭಟನೆ ಬರುತ್ತಾರೆ ಎಂಬ ಮಾತುಗಳು ನಿಜಕ್ಕೂ ಅಕ್ಷಮ್ಯ. ಇಂಥವನ್ನೆಲ್ಲಾ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಸ್ವರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ‘ದುಬಾರಿ’ಗೆ ಶ್ರೀಲೀಲಾ … ಧ್ರುವಗೆ ನಾಯಕಿಯಾದ ‘ಕಿಸ್’ ಬೆಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts