More

    ಸನಾತನ ಹಿಂದು ಧರ್ಮದ ಉಳಿವಿಗೆ ವಿವೇಕಾನಂದರೇ ಯುವಕರಿಗೆ ಆದರ್ಶ

    ಆನೇಕಲ್: ಸ್ವಾಮಿ ವಿವೇಕಾನಂದರು ಬದುಕಿದ್ದು ಸ್ವಲ್ಪವೇ ದಿನ, ಆದರೆ ಸನಾತನ ಹಿಂದು ಧರ್ಮವನ್ನು ಉಳಿಸಲು ಯುವಕರಿಗೆ ಅವರು ಮಾರ್ಗದರ್ಶಕರು ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಮೆಟ್ರೋ ಕಾಮಗಾರಿಯಿಂದ ತೆರವಾಗಿದ್ದ ಬೊಮ್ಮನಹಳ್ಳಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಬೊಮ್ಮನಹಳ್ಳಿ ಮಾರುತಿ ಯುವಕರ ಸಂಘದ ವತಿಯಿಂದ ಮರು ಸ್ಥಾಪನೆ ಮಾಡಿದ್ದು ಮಂಗಳವಾರ ಬೊಮ್ಮನಹಳ್ಳಿ ವೃತ್ತದಲ್ಲಿ ಅವರು ಲೋಕಾರ್ಪಣೆ ಮಾಡಿ ಮಾತನಾಡಿದರು.

    ಮೆಟ್ರೋ ಕಾಮಗಾರಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಮರುಸ್ಥಾಪನೆ ಮಾಡಬೇಕಾಯಿತು. ಇದಕ್ಕಾಗಿ ಸ್ಥಳೀಯ ಯುವಕರು ಸಾಕಷ್ಟು ಕೆಲಸಗಳನ್ನು ಮಾಡಿ ಉತ್ತಮವಾದ ಪುತ್ಥಳಿಯನ್ನು ಸ್ಥಾಪನೆ ಮಾಡಿದ್ದಾರೆ. ಪ್ರತಿದಿನ ಬೊಮ್ಮನಹಳ್ಳಿ ವೃತ್ತದಲ್ಲಿ ಸ್ವಾಮಿ ವಿವೇಕಾನಂದರನ್ನು ನೋಡುವ ಅದೃಷ್ಟ ಎಲ್ಲರಿಗೂ ಸಿಕ್ಕಿದೆ, ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬರೂ ಹಿಂದು ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದರು.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ನಾವು ಹಿಂದುತ್ವವನ್ನು ಮರೆಯಬಾರದು. ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಭವ್ಯ ಹಿಂದು ಭಾರತವನ್ನು ಕಟ್ಟಬೇಕು. ಇದಕ್ಕಾಗಿ ಯುವಶಕ್ತಿ ಒಂದಾಗಿ ನಮ್ಮ ದೇಶದಲ್ಲಿ ಹಿಂದು ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು. ಕೃಷ್ಣದೇವರಾಯರು ಹೇಗೆ ತಮ್ಮ ಕ್ಷೇತ್ರವನ್ನು ಪಾಲನೆ ಮಾಡಿದ್ದಾರೆ ಎನ್ನುವುದನ್ನು ನಾವು ಅರಿಯಬೇಕು. ದೇಶ ಮೊದಲು, ನಾವೆಲ್ಲ ಕ್ಷಣಿಕ. ಇಂದು ಇಡೀ ಪ್ರಪಂಚದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಯುತ್ತಿದೆ. ಅದಕ್ಕೆ ಅವರು ಹಾಕಿಕೊಟ್ಟ ಆದರ್ಶಗಳೇ ಕಾರಣ ಎಂದು ಹೇಳಿದರು.

    ಸನಾತನ ಹಿಂದು ಧರ್ಮದ ಉಳಿವಿಗೆ ವಿವೇಕಾನಂದರೇ ಯುವಕರಿಗೆ ಆದರ್ಶ
    ಬೊಮ್ಮನಹಳ್ಳಿ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಶಾಸಕ ಸತೀಶ್ ರೆಡ್ಡಿ ಅನಾವರಣ ಮಾಡಿದರು, ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ ರೆಡ್ಡಿ ಮತ್ತಿತರರು ಹಾಜರಿದ್ದರು.

    ವಿಜ್ಞಾನಿಗಳಿಗೆ ಧನ್ಯವಾದ: ನಮ್ಮ ದೇಶದಲ್ಲಿ ಕರೊನಾಗೆ ಲಸಿಕೆ ಕಂಡು ಹಿಡಿದಿದ್ದಾರೆ. ನಮ್ಮ ವಿಜ್ಞಾನಿಗಳು ಸಾಕಷ್ಟು ಮುಂದುವರಿದಿದ್ದು, ಎಲ್ಲ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡುತ್ತಿದ್ದಾರೆ ಎಂದರು.
    ಸದೃಢ ಭಾರತ ನಿರ್ಮಾಣ: ಕಷ್ಟದ ಸಂದರ್ಭದಲ್ಲಿ ಕೂಡ ನಮ್ಮ ಪ್ರಧಾನಿ ದೇಶವನ್ನು ಸಮರ್ಪಕವಾಗಿ ಮುನ್ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಸಮರ್ಪಕವಾಗಿ ಕರೊನಾ ನಿಯಂತ್ರಣ ಮಾಡುತ್ತಿದೆ. ಬಿಜೆಪಿ ಸದೃಢ ಭಾರತ ನಿರ್ಮಾಣ ಮಾಡುವುದರಲ್ಲಿ ಟೊಂಕಕಟ್ಟಿ ನಿಂತಿದೆ ಎಂದರು.

    ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ರೆಡ್ಡಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಹಿಂದು ಭಾರತ ನಮ್ಮೆಲ್ಲರ ಗುರಿ ಆಗಬೇಕು, ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಬೊಮ್ಮನಹಳ್ಳಿ ಯುವಕರು ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಭವ್ಯವಾಗಿ ನಿರ್ಮಾಣ ಮಾಡಿದ್ದು ಶ್ಲಾಘನೀಯ ಎಂದರು. ಬಿಜೆಪಿ ಮುಖಂಡ ಚಂದ್ರಶೇಖರ ರೆಡ್ಡಿ, ಆರ್​ಎಸ್​ಎಸ್​​ ಮುಖಂಡ ಕೃಷ್ಣೆಗೌಡ, ಅನೀಲ್, ರಘು ಮತ್ತಿತರರು ಇದ್ದರು.

    ಈ ಮನುಷ್ಯ ಕುಡಿಯದೇ ಟೈಟ್ ಆಗುತ್ತಾನೆ!; ಒಂಚೂರೂ ಮದ್ಯಪಾನ ಮಾಡದಿದ್ದರೂ ಇದ್ದಕ್ಕಿದ್ದಂತೆ ಕಿಕ್ಕೇರುತ್ತದೆ!

    ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts