More

    ಜನರಲ್ಲಿ ಬಾಂಬ್​ ಭೀತಿ ಮೂಡಿಸಿರುವ ಅನುಮಾನಾಸ್ಪದ ಸೂಟ್​​ಕೇಸ್​ಗಳು!

    ಬೆಂಗಳೂರು: ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಬೈಕ್​ ಒಂದರ ಮೇಲೆ ಹಾಗೂ ಗೂಡ್ಸ್​ ಆಟೋಗಳ ನಡುವೆ ಅನುಮಾನಾಸ್ಪದವಾಗಿ ಇಟ್ಟಿರುವ ಸೂಟ್​ಕೇಸ್​ಗಳು​ ಪತ್ತೆಯಾಗಿವೆ. ಹಬ್ಬದ ಹಿನ್ನೆಲೆಯಲ್ಲಿ ಜೋರಾಗಿ ನಡೆಯುತ್ತಿದ್ದ ಖರೀದಿಯ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಸಾರ್ವಜನಿಕರಲ್ಲಿ ಇವು ಬಾಂಬ್​ ಭೀತಿ ಮೂಡಿಸಿವೆ.

    ಬಟ್ಟೆ ವ್ಯಾಪಾರಿಯೊಬ್ಬರು ಎಂದಿನಂತೆ ನಿಲ್ಲಿಸಿದ್ದ ಬಿಳಿ ಬಣ್ಣದ ಆಕ್ಸಿಸ್ ಬೈಕಿನ ಮೇಲೆ ಯಾರದ್ದು ಎಂದು ತಿಳಿಯದ ಕಪ್ಪು ಬಣ್ಣದ ಸೂಟ್​​ಕೇಸ್ ಇರುವುದು ಕಂಡುಬಂದಿದೆ. ಈ ಬಗ್ಗೆ ಬೈಕ್​ ಮಾಲೀಕರು ಮತ್ತು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪಶ್ಚಿಮ ವಿಭಾಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಅದೇ ರಸ್ತೆಯಲ್ಲಿ ಮತ್ತೊಂದು ಕಪ್ಪು ಬಣ್ಣದ ಲೆದರ್​ ಸೂಟ್​​ಕೇಸ್ ಪತ್ತೆಯಾಗಿದೆ. ಬೈಕ್​ ಮೇಲೆ ಸೂಟ್​ಕೇಸ್ ಪತ್ತೆಯಾಗಿರುವ ಜಾಗದಿಂದ 10 ಮೀಟರ್ ಅಂತರದಲ್ಲಿ, ನಿಲ್ಲಿಸಲಾಗಿರುವ ಗೂಡ್ಸ್ ಆಟೋ ಪಕ್ಕದಲ್ಲಿ ನೆಲದ ಮೇಲಿರುವ ಎರಡನೇ ಸೂಟ್​​ಕೇಸ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ಜಮ್ಮು, ದೆಹಲಿ ಬಾಂಬ್​ ಸ್ಫೋಟ, ಸೈನಿಕರ ಹತ್ಯೆ – ಬಂಧಿತ ಪಾಕ್​ ಉಗ್ರ ಅಸ್ರಫ್​ ಕೈಗೊಂಡ ಕೃತ್ಯಗಳಿವು

    ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ KA 02 KG 7865 ನಂಬರಿನ ಬೈಕಿನಲ್ಲಿರೋ ಸೂಟ್​​ಕೇಸನ್ನು ಸ್ಥಳದಲ್ಲಿರುವ ಯಾರೂ ತಮ್ಮದು ಎಂದು ಹೇಳಿಲ್ಲ. ಬೈಕ್ ಮಾಲೀಕರಾದ ರಾಜಶೇಖರ್ ಎಂಬುವರು ಬೈಕ್​ ತಮ್ಮದೇ, ಆದರೆ ಆ ಸೂಟ್​ಕೇಸ್​ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. “ನಾನು 10.30 ಕ್ಕೆ ಬೈಕ್ ನಿಲ್ಲಿಸಿದೆ. ನಾನು ಬಟ್ಟೆ ವ್ಯಾಪಾರ ಮಾಡ್ತಾ ಇದ್ದೀನಿ. ಎಂದಿನಂತೆ ಇಂದು ಬೈಕ್ ನಿಲ್ಲಿಸಿದೆ. 12 ಗಂಟೆ ವೇಳೆಗೆ ಕಡಲೇಕಾಯಿ ವ್ಯಾಪಾರ ಮಾಡುವವನು ಸೂಟ್ ಕೇಸ್ ನಿಮ್ಮದಾ ಎಂದು ಕೇಳಿದ. ಆಗ ನಾನು ಬೈಕ್ ನನ್ನದು ಸೂಟ್ ಕೇಸ್ ನನ್ನದಲ್ಲ ಎಂದು ಹೇಳಿದೆ. 12.30ಕ್ಕೆ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಯಾರು ಸೂಟ್ ಕೇಸ್ ಇಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ” ಎಂದು ರಾಜಶೇಖರ್​ ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.

    ಈ ಸೂಟ್​ಕೇಸ್​ಗಳತ್ತ ಆತಂಕದಿಂದ ನೋಡ್ತಿರೋ ಸಾರ್ವಜನಿಕರನ್ನು ದೂರಕ್ಕೆ ನಿಲ್ಲಿಸಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಕ್ಕಪಕ್ಕದ ಅಂಗಡಿಮಳಿಗೆಗಳನ್ನು ಮುನ್ನೆಚ್ಚರಿಕೆಗಾಗಿ ಮುಚ್ಚಿಸುತ್ತಿದ್ದಾರೆ. ಬಾಂಬ್ ಡಿಟೆಕ್ಷನ್ ಸ್ಕ್ವಾಡ್​ ಮತ್ತು ಶ್ವಾನ ದಳವೂ ಸ್ಥಳಕ್ಕೆ ಆಗಮಿಸುತ್ತಿದೆ. (ದಿಗ್ವಿಜಯ ನ್ಯೂಸ್)

    ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿ ಆಗಿದ್ರಾ? ಯಡಿಯೂರಪ್ಪ ಹೇಳಿದ್ದೇನು?

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    Lakhimpur Kheri Case: ಅಂಕಿತ್ ದಾಸ್​ ಕಾರಿನ ಚಾಲಕ ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts