More

    Lakhimpur Kheri Case: ಅಂಕಿತ್ ದಾಸ್​ ಕಾರಿನ ಚಾಲಕ ಪೊಲೀಸರ ವಶಕ್ಕೆ

    ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿ ಸಾವುನೋವುಗಳ ಪ್ರಕರಣದಲ್ಲಿ ರಾಜ್ಯದ ಪೊಲೀಸರು ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವೇಳೆ ರೈತರ ಮೇಲೆ ಹಾದುಹೋಯಿತೆನ್ನಲಾದ ಸಚಿವಪುತ್ರನ ಕಾರಿನ ಹಿಂದೆಯೇ ಹೋದ ಮತ್ತೊಂದು ಎಸ್​ಯುವಿಯ ಚಾಲಕ ಶೇಖರ್​ ಭಾರತಿ, ಬಂಧಿತ ವ್ಯಕ್ತಿ.

    ಅ.3 ರಂದು ನಡೆದ ಘಟನೆಯಲ್ಲಿ ಎಂಟು ಜನರು ಮೃತಪಟ್ಟಿದ್ದರು. ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೃಹ ಖಾತೆಯ ರಾಜ್ಯ ಸಚಿವ ಅಜಯ್​ ಮಿಶ್ರಾರ ಮಗ ಆಶಿಶ್​ ಮಿಶ್ರ ಕಾರು ಹಾಯಿಸಿದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸೂಕ್ತ ಉತ್ತರಗಳನ್ನು ನೀಡಿಲ್ಲ ಎಂದು ಅದಾಗಲೇ ಆಶಿಶ್​ರನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

    ಇದೀಗ ಮಿಶ್ರರ ಬಿಳಿ ಜೀಪಿನ ಹಿಂದೆಯೇ ತೆರಳಿತೆನ್ನಲಾದ ಬ್ಲ್ಯಾಕ್​ ಫಾರ್ಚೂನರ್​ ಕಾರಿನಲ್ಲಿ ರಾಜ್ಯಸಭಾ ಸಂಸದ ಅಖಿಲೇಶ್​ ದಾಸ್​ ಸೋದರಳಿಯ ಹಾಗೂ ಆಶಿಶ್​ ಮಿಶ್ರಾರ ಆಪ್ತ ಅಂಕಿತ್​ ದಾಸ್, ಸುಮಿತ್​ ಜೈಸ್ವಾಲ್ ಮತ್ತು ಬಂಧಿತ ಚಾಲಕ ಶೇಖರ್ ಭಾರತಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಶೇಖರ್​ ಭಾರತಿಯನ್ನು ಬಂಧಿಸಿರುವ ಯುಪಿ ಪೊಲೀಸರು, ಅಂಕಿತ್​ ದಾಸ್​ನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

    ಈ ಪ್ರಕರಣದಲ್ಲಿ ಯುಪಿ ಪೊಲೀಸರು ಬಂಧಿಸಿರುವ ಇತರ ಈರ್ವರೆಂದರೆ ಲವ್​ ಕುಶ್​ ಮತ್ತು ಆಶಿಶ್ ಪಾಂಡೆ. ಪ್ರಕರಣದಲ್ಲಿ ಇನ್ನೂ 15 ರಿಂದ 20 ಗುರುತಿಲ್ಲದ ಜನರೂ ಆರೋಪಿಗಳಾಗಿದ್ದಾರೆ. (ಏಜೆನ್ಸೀಸ್)

    ಆಧಾರ್​ ಕಾರ್ಡ್​ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ

    ಕೆರೆ ಕೋಡಿ ಬಿದ್ದು ಹರಿದುಹೋದ ಮೀನುಗಳು… ಗುತ್ತಿಗೆದಾರರ ಬದುಕು ಹೈರಾಣ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts