More

    ಬಾಂಬ್​ ಭೀತಿ ಮೂಡಿಸಿದ್ದ ಸೂಟ್​ಕೇಸ್​ಗಳು! ಒಳಗಿದ್ದದ್ದು ಏನು ಗೊತ್ತಾ?

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಬೈಕ್​ ಒಂದರ ಮೇಲೆ ಹಾಗೂ ಗೂಡ್ಸ್​ ಆಟೋಗಳ ನಡುವೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದ ಎರಡು ಸೂಟ್​ಕೇಸ್​ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.​ ಜನರಲ್ಲಿ ಬಾಂಬ್​ ಭೀತಿ ಮೂಡಿಸಿದ್ದ ಈ ಸೂಟ್​ಕೇಸ್​ಗಳನ್ನು ಬಾಂಬ್​ ಡಿಟೆಕ್ಷನ್​ ಸ್ಕ್ವಾಡ್​ನ ಮಾರ್ಗದರ್ಶನದಲ್ಲಿ ತೆರೆದು ನೋಡಲಾಗಿದ್ದು, ಅವುಗಳಲ್ಲಿ ಬಟ್ಟೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯಾರದ್ದು ಎಂಬ ಮಾಹಿತಿ ಇಲ್ಲದೆ ಜನನಿಬಿಡ ಸ್ಥಳದಲ್ಲಿ ಪತ್ತೆಯಾಗಿದ್ದ ಸೂಟ್​ಕೇಸುಗಳನ್ನು ಬಾಂಬ್​ ಭೀತಿಯ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್​ ಮೈದಾನಕ್ಕೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದರು. ಪಶ್ಚಿಮ ವಲಯದ ಪೊಲೀಸರು ಮತ್ತು ಶ್ವಾನದಳದ ಸಹಕಾರದೊಂದಿಗೆ ಬಾಂಬ್ ಒತ್ತೆ ಹಾಗೂ ನಿಷ್ಕ್ರಿಯ ದಳದಿಂದ ನಡೆದ ಪರಿಶೀಲನೆಯಲ್ಲಿ ಒಂದು ಸೂಟ್​ಕೇಸುಗಳಲ್ಲಿ ಸೀರೆಗಳು ಮತ್ತೊಂದು ಸೂಟ್​ಕೇಸ್​ನಲ್ಲಿ ಹೊಸ ಕೋಟು ಇರುವುದು ಕಂಡುಬಂದಿದೆ.

    ಇದನ್ನೂ ಓದಿ: ಜನರಲ್ಲಿ ಬಾಂಬ್​ ಭೀತಿ ಮೂಡಿಸಿರುವ ಅನುಮಾನಾಸ್ಪದ ಸೂಟ್​​ಕೇಸ್​ಗಳು!

    ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ ಪಾಟೀಲ್ ಅವರು, “ಮಧ್ಯಾಹ್ನ ವಿವಿ ಪುರಂ ಪೊಲೀಸ್ ಠಾಣೆಗೆ ಒಂದು ಮಾಹಿತಿ ಬಂತು – ಒಂದು ಸೂಟ್ ಕೇಸ್ ಬಿಟ್ಟು ಹೋಗಿದ್ದಾರೆ ಅಂತ. ಅದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿತ್ತು. ಆ ಸೂಟ್​​ಕೇಸ್ ಪರಿಶೀಲನೆ ವೇಳೆ 200 ಮೀಟರ್ ದೂರದಲ್ಲಿ ಮತ್ತೊಂದು ಸೂಟ್​​ಕೇಸ್ ಪತ್ತೆಯಾಗಿತ್ತು. ಪತ್ತೆಯಾದ ಎರಡೂ ಸೂಟ್​​ಕೇಸ್​​ಗಳನ್ನು ಪರಿಶೀಲನೆ ಮಾಡಲಾಯಿತು. ಒಂದು ಸೂಟ್​ಕೇಸ್​ನಲ್ಲಿ ಬಟ್ಟೆಗಳು ಹಾಗೂ ಒಂದು ಐಡಿ ಕಾರ್ಡ್ ಪತ್ತೆಯಾಗಿದೆ. ಇನ್ನೊಂದು ಸೂಟ್ಕೇಸಿನಲ್ಲಿ ಮೋದಿ ಜಾಕೆಟ್ ಪತ್ತೆಯಾಗಿದೆ. ಸದ್ಯ ತನಿಖೆ ಮುಂದುವರಿಸಿದ್ದೇವೆ” ಎಂದು ತಿಳಿಸಿದ್ದಾರೆ.

    ಈ ಅನುಮಾನಾಸ್ಪದ ಸೂಟ್​ಕೇಸ್​ಗಳಲ್ಲಿ ಬಟ್ಟೆಗಳು ಪತ್ತೆಯಾಗಿರುವುದು, ಬಾಂಬ್​ ಭೀತಿಗೆ ಒಳಗಾಗಿದ್ದ ಜನರು ನೆಮ್ಮದಿಯ ಉಸಿರಾಡುವಂತೆ ಮಾಡಿದೆ. ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿದ್ದ ಈ ಸೂಟ್​​ಕೇಸ್​ಗಳು ಯಾರದ್ದು? ಅಲ್ಲಿ ಯಾಕೆ ಬಿಟ್ಟು ಹೋದ್ರು? ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಹಲವು ಮುಖಗಳನ್ನು ಹೊಂದಿದ್ದ ಪಾಕಿಸ್ತಾನಿ ಉಗ್ರ… ಭಾರತೀಯ ಮಹಿಳೇನ ಮದುವೆ ಆಗಿದ್ದ!

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    Lakhimpur Kheri Case: ಅಂಕಿತ್ ದಾಸ್​ ಕಾರಿನ ಚಾಲಕ ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts