More

    ಸುಶಾಂತ್ ಪ್ರಕರಣದ ಸುದ್ದಿನೇ ಇಲ್ಲ, ಬರೀ ಡ್ರಗ್ಸ್​ ವಿಚಾರ; ನಟನ ಕುಟುಂಬದ ಅಳಲು

    ಮುಂಬೈ: ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಬಾಲಿವುಡ್​ನಲ್ಲಿ ದೊಡ್ಡ ಸಂಚಲನವನ್ನೇ ಮಾಡಿತ್ತು. ಆದರೆ ಈಗಲ್ಲ ಎಂಬುದು ಸದ್ಯದ ಬೆಳವಣಿಗೆಗಳ ಮೂಲಕ ಸಾಬೀತಾಗುತ್ತಿದೆ. ಡ್ರಗ್​ ಮಾಫಿಯಾದ್ದೇ ದೊಡ್ಡ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಶಾಂತ್​ ಪ್ರಕರಣದ ತನಿಖೆಯ ಹಾದಿಯೇ ಬದಲಾಗುತ್ತಿದೆ ಎಂದು ನಟನ ಕುಟುಂಬದವರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಟ್ವೀಟಿಗರಿಂದ ಬೆನ್ನು ತಟ್ಟಿಸಿಕೊಂಡರು ಶಾನ್ವಿ … ಯಾಕೆ ಹೇಳಿ?

    ಜೂನ 14ರಂದು ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಎರಡು ತಿಂಗಳು ಆ ಸಾವಿನ ಸುತ್ತ ತನಿಖೆ ನಡೆಯುತ್ತಿತ್ತು. ಇದೀಗ ಆ ಸಾವಿನ ಹಿನ್ನೆಲೆ ಬದಿಗಿಟ್ಟು, ಎಲ್ಲರ ಗಮನ ಡ್ರಗ್​ ಮಾಫಿಯಾದತ್ತ ನೆಟ್ಟಿದೆ. ತನಿಖಾ ತಂಡದ ಈ ಕಡೆಗಣನೆಯನ್ನು ಸುಶಾಂತ್​ ಕುಟುಂಬ ಖಂಡಿಸುತ್ತಿದೆ.

    ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದಕರ ಜತೆ ಸಮಂತಾ ನಂಟಿದೆಯೇ?; ಕೆಲ ಮೂಲಗಳಿಂದ ಮಾಹಿತಿ ಬಹಿರಂಗ

    ಈ ಸಂಬಂಧ ಪ್ರತಿಕ್ರಿಯಿಸಿರುವ ಸುಶಾಂತ್​ ಸಿಂಗ್​ ಕುಟುಂಬದ ಪರ ವಕೀಲ ವಿಕಾಸ್​ ಸಿಂಗ್​, ‘ಕುಟುಂಬದ ದೃಷ್ಟಿಯಲ್ಲಿ ಇನ್ನೇನು ಸತ್ಯ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ಇದೀಗ ಎನ್​ಸಿಬಿ ವಿಚಾರಣೆ ಮುಂಬೈ ಪೊಲೀಸ್​ ವಿಚಾರಣೆಯನ್ನೇ ಹೋಲುತ್ತಿದೆ. ಡ್ರಗ್​ ಪ್ರಕರಣವನ್ನೇ ಮುನ್ನೆಲೆಗೆ ತಂದು ತನಿಖೆ ನಡೆಸುತ್ತಿದ್ದಾರೆಯೇ ಹೊರತು, ಸುಶಾಂತ್​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಿಕಾಸ್​ ಸಿಂಗ್​ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ನ್ಯಾಯಾಲಯದ ಮಾತು ಕೇಳಿ ಕಂಗನಾ ಕಣ್ಣಲ್ಲಿ ನೀರು ಬಂತಂತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts