More

    ಯುವಕರು ದುಶ್ಚಟಗಳಿಂದ ದೂರವಿರಿ

    ಹೊಸಪೇಟೆ: ಮಾದಕ ದ್ರವ್ಯ ವ್ಯಸನದಿಂದ ನಾನಾ ರೋಗಗಳು ಬರುತ್ತವೆ. ದುಶ್ಚಟಗಳಿಂದ ಯುವಕರು ದೂರವಿರಬೇಕು. ವಿದ್ಯಾರ್ಥಿಗಳು, ಮಾದಕ ದ್ರವ್ಯ ಸೇವನೆ ಮಾಡದಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ,ಎಸ್.ದಿವಾಕರ ಹೇಳಿದರು.

    ಇದನ್ನೂ ಓದಿ: ಹೊಸಪೇಟೆಯಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ

    ಮಾದಕ ದ್ರವ್ಯ ವಿರೋಧಿ ದಿನ ನಿಮಿತ್ತ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಜನಜಾಗೃತಿ ವಾಕ್ ಮ್ಯಾರಾಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

    ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ. ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸ್ನೇಹಿತರಿಂದಲೇ ಈ ಮಾದಕ ವಸ್ತುಗಳ ಬಳಸುವುದು ಕಲಿಯುತ್ತರೆ. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

    ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಮಾದಕ ವಸ್ತುಗಳ ಹತೋಟಿಗೆ ತರಲು ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ನಮ್ಮ ಸಹಾಯವಾಣಿ 112 ಗೆ ಪೋನ್ ಮಾಡಿ ತಿಳಿಸಬೇಕಾಗಿದೆ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಮತ್ತು ಈ ದುಶ್ಚಟ ನಿಯಂತ್ರಣಕ್ಕೆ ಬರಬೇಕೆಂದರೆ ವಿದ್ಯಾರ್ಥಿಗಳ ಕಾರ್ಯ ಬಹಳ ಬೇಕಾಗಿದೆ ಎಂದು ಎಂದರು.

    ಮಾದಕವಸ್ತುಗಳ ವಿರುದ್ಧ ಜಾಗೃತಿಯ ಬೋರ್ಡ್ ಹಿಡಿದು ಸಾವಿರಾರು ವಿದ್ಯಾರ್ಥಿಗಳು, ಪುನೀತ್ ರಾಜ್‌ಕುಮಾರ್ ವೃತ್ತಿದಿಂದ ಮಾಡ್ರನ್ ಸರ್ಕಲ್, ಪುಣ್ಯಮೂರ್ತಿ ವೃತ್ತ, ಗಂಧಿಚೌಕು, ಮದಕರಿವೃತ್ತ, ವಾಲ್ಮೀಕಿ ವೃತ್ತ, ಮಾರ್ಕಂಡೇಯ ದೇವಸ್ಥಾನ, 100 ಹಾಸಿಗೆ ಆಸ್ಪತ್ರೆ, ಮೂಲಕ ಜಿಲ್ಲಾ ಕ್ರೀಡಾಂಗಣದ ವರೆಗೆ ಜಾತಾ ನಡೆಯಿತು.

    ಇದನ್ನೂ ಓದಿ: ಹೊಸಪೇಟೆ ನಗರಸಭೆ ನೌಕರರ ಅಘೋಷಿತ ಮುಷ್ಕರ?

    ವಿಜಯನಗರ ಎಎಸ್ಪಿ ಸಲಿಂಪಾಷಾ, ಆರ್‌ಟಿಒ ವಸಂತ್ ಚೌವ್ಹಾಣ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಪಿಐಗಳಾದ ಬಾಲನಗೌಡ, ವಿಶ್ವನಾಥ್ ಹಿರೇಗೌಡರ್, ಶ್ರೀನಿವಾಸ್ ಮೇಟಿ, ದೀಪಕ್ ಬೂಸರೆಡ್ಡಿ, ಆರ್‌ಪಿಐ ಶಶಿಕುಮಾರ್, ಪಿಎಸ್‌ಐಗಳಾದ ಎಸ್.ಪಿ.ನಾಯ್ಕ್, ಶೋಭಾ, ಮುನಿರತ್ನ, ಕೇಶವಮೂರ್ತಿ ಇತರರಿದ್ದರು.

    ಹೊಸಪೇಟೆ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಾದಕ ದ್ರವ್ಯ ವಿರೋಧಿ ದಿನ ನಿಮಿತ್ತ ಜನಜಾಗೃತಿ ವಾಕ್ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ ಸಾವಿರಾರು ವಿದ್ಯಾರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts