More

    ಹೊಸಪೇಟೆ ನಗರಸಭೆ ನೌಕರರ ಅಘೋಷಿತ ಮುಷ್ಕರ?

    ಕಚೇರಿಯ ಕುರ್ಚಿಗಳು ಖಾಲಿ ಖಾಲಿ!

    ಹೊಸಪೇಟೆ: ಸದಾ ಜನಜಂಗುಳಿಯಿಂದ ತುಂಬಿ ತಳುಕುತ್ತಿದ್ದ ಹೊಸಪೇಟೆ ಕಚೇರಿ ಸೋಮವಾರ ಖಾಲಿಖಾಲಿಯಾಗಿತ್ತು. ಕಚೇರಿಗೆ ಆಗಮಿಸಿದ್ದ ನೌಕರರು ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ಹೊರ ನಡೆದಿದ್ದರಿಂದ ಎಲ್ಲೆಡೆ ಖಾಲಿ ಕುರ್ಚಿಗಳು ರಾರಾಜಿಸುತ್ತಿದ್ದವು.

    ಭಾನುವಾರ ರಜಾ ದಿನವಾಗಿದ್ದರಿಂದ ಸೋಮವಾರ ಸಹಜವಾಗಿಯೇ ಜನರಿಂದ ತುಂಬಿರುತ್ತದೆ. ವಿವಿಧ ಕೆಲಸ ಕಾರ್ಯಗಳು ವಿಳಂಬವಾಗುವ ಸಾಧ್ಯತೆಗಳಿರುತ್ತದೆ ಎಂದು ತರಾತುರಿಯಲ್ಲಿ ನಗರಸಭೆಗೆ ಆಗಮಿಸಿದ್ದವರು ಕ್ಷಣ ಕಾಲ ತಬ್ಬಿಬ್ಬಾದರು. ಸುಮಾರು ೫೦ಕ್ಕೂ ಹೆಚ್ಚಿರುವ ಸಿಬ್ಬಂದಿಗಳಲ್ಲಿ ಸೋಮವಾರ ಅಲ್ಲೊಬ್ಬರು, ಇಲ್ಲೊಬ್ಬರು ಕಂಡು ಬರುತ್ತಿದ್ದರು. ಇನ್ನುಳಿದಂತೆ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು.

    ಇದರಿಂದ ಗೊಂದಲಕ್ಕೀಡಾದ ಜನ ಸಾಮಾನ್ಯರು ಇಂದೇನಾದರೂ ರಜೆ ಇದೆಯಾ? ಸಿಬ್ಬಂದಿ ದಿಢೀರ್ ಮುಷ್ಕರಕ್ಕೆ ಇಳಿದರೆ ಎಂದು ಇತರರಲ್ಲಿ ವಿಚಾರಿಸುವಂತಾಯಿತು. ಅದೆಲ್ಲಾ ಏನೂ ಇಲ್ಲ. ಇಲ್ಲೆ ಎಲ್ಲೋ ಹೋಗಿರಬೇಕು. ಇನ್ನೇನು ಬರಬಹುದು ಎಂಬ ಉತ್ತರದಿಂದ ಅನೇಕರು ಮಧ್ಯಾಹ್ನ ೨ ಗಂಟೆ ವರೆಗೆ ಕಾದು, ಬಳಿಕ ಮನೆಯತ್ತ ಹೆಜ್ಜೆ ಹಾಕುವಂತಾಯಿತು.

    ಹೊಸಪೇಟೆ ನಗರಸಭೆ ನೌಕರರ ಅಘೋಷಿತ ಮುಷ್ಕರ?

    ಸಿಬ್ಬಂದಿ ಅಸಹಕಾರ ಚಳವಳಿ?

    ನಗರಸಭೆಯಲ್ಲಿ ಮಹತ್ವದ ೪೯ ಕಡತಗಳು ನಾಪತ್ತೆಯಾಗಿರುವ ಆರೋಪದಡಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ, ವ್ಯವಸ್ಥಾಕರನ್ನು ಅಮಾನತುಗೊಳಿಸುವಂತೆ ಇಲಾಖೆಯ ಆಯುಕ್ತರಿಗೆ ಬರೆದ ಪತ್ರದಿಂದ ನೌಕರರು ಬೆದರಿದ್ದಾರೆ. ಮೇಲಾಗಿ ಕಂದಾಯ ವಿಭಾಗಕ್ಕೆ ಸಂಬAಧಿಸಿದವರನ್ನೂ ಪ್ರಕರಣದಲ್ಲಿ ಹೊಣೆ ಮಾಡಿ, ಸಸ್ಪೆಂಡ್ ಮಾಡಲಾಗಿದೆ. ನಮ್ಮನ್ನೂ ಇದೇ ರೀತಿ ಸಿಲುಕಿಸಿದರೆ ಹೇಗೆ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಅಘೋಷಿತವಾಗಿ ಎಲ್ಲ ಸಿಬ್ಬಂದಿ ಕರ್ತವ್ಯವನ್ನು ಬಹಿಷ್ಕರಿಸಿ ಬಹುತೇಕರು ಹೊರಗೆ ಬಂದಿದ್ದೇವೆ. ಬೆರಳೆಣಿಕೆಯಷ್ಟು ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಿಚ್ಛಿಸದ ನೌಕರರೊಬ್ಬರು ಮಾಹಿತಿ ನೀಡಿದರು.

    ನಗರಸಭೆ ರಜೆ, ಮುಷ್ಕರ ಎಂದೇನೂ ಇಲ್ಲ. ಕಂದಾಯ ವಿಭಾಗದ ಐವರು ಅಮಾನತುಗೊಂಡಿದ್ದಾರೆ. ನಾಲೈದು ಜನರು ಚುನಾವಣಾ ತರಬೇತಿಗೆ ತೆರಳಿದ್ದಾರೆ. ಇನ್ನುಳಿದವರು ವಾರ್ಡ್ಗಳಲ್ಲಿ ಕಂದಾಯ ವಸೂಲಿಗೆ ಹೋಗಿದ್ದರಿಂದ ಕಚೇರಿ ಖಾಲಿ ಎನಿಸುತ್ತ ದೆ. ಆದರೆ, ಎಲ್ಲರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ.

    – ಬಿ.ಟಿ.ಬಂಡಿವಡ್ಡರ್, ನಗರಸಭೆ ಪೌರಾಯುಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts