More

    ರಿಯಾ ವಿರುದ್ಧದ ಎಫ್​ಐಆರ್​ನಲ್ಲಿ ಮಡಿಕೇರಿ ನಂಟು; ಬಾಲಿವುಡ್​ ಕೈ ಬಿಟ್ಟು, ಕೂರ್ಗ್​​ನಲ್ಲಿ ಕೃಷಿ ಮಾಡುವ ಮನಸ್ಸಿತ್ತಂತೆ ಸುಶಾಂತ್​ಗೆ!

    ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್​ನ ಘಟಾನುಘಟಿಗಳ ವಿಚಾರಣೆ ಒಂದೆಡೆ ನಡೆದರೆ, ಮಂಗಳವಾರವಷ್ಟೇ ಸುಶಾಂತ್​ ಪ್ರೇಯಸಿ ರಿಯಾ ವಿರುದ್ಧ ಪಾಟ್ನಾದಲ್ಲಿ ಎಫ್​ಐಆರ್ ದಾಖಲಾಗಿದೆ. ಈ ನಡುವೆ ಸುಶಾಂತ್​ ಅವರ ಮುಂದಿನ ಯೋಜನೆಗಳೇನಿದ್ದವು? ಎಂಬ ಬಗ್ಗೆ ಸುಶಾಂತ್​ ಸಿಂಗ್​ ಕುಟುಂಬದ ಪರ ವಕೀಲ ವಿಕಾಸ್​ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ‘ಕೆಜಿಎಫ್​ ಚಾಪ್ಟರ್ 2’ ಖಳ ಸಂಜಯ್​ ದತ್​ ಲುಕ್​ ಬಹಿರಂಗ..

    ಸುಶಾಂತ್​ ಸಿಂಗ್ ಬಾಲಿವುಡ್ ಸಿನಿಮಾ ಕ್ಷೇತ್ರಕ್ಕೆ ಗುಡ್​ಬೈ ಹೇಳಿ ಕರ್ನಾಟಕದ ಮಡಿಕೇರಿಯಲ್ಲಿ ಜಮೀನು ಪಡೆದು ಕೃಷಿಯತ್ತ ಗಮನ ಹರಸುವ ಮನಸ್ಸು ಮಾಡಿದ್ದರು. ಸ್ನೇಹಿತ ಮಹೇಶ್​ ಜತೆ ಸೇರಿಕೊಂಡು ಸಾವಯವ ಕೃಷಿ ಮಾಡಬೇಕೆಂದುಕೊಂಡಿದ್ದರು. ಈ ವಿಚಾರ ಕುಟುಂಬದವರಿಗೂ ಗೊತ್ತಿತ್ತು. ರಿಯಾ ಬಳಿಯೂ ಹೇಳಿಕೊಂಡಿದ್ದರು ಸುಶಾಂತ್​. ಆದರೆ, ಆ ಆಸೆ ಮಾತ್ರ ಈಡೇರಲಿಲ್ಲ.

    ರಿಯಾ ವಿರುದ್ಧದ ಎಫ್​ಐಆರ್​ನಲ್ಲಿ ಮಡಿಕೇರಿ ನಂಟು; ಬಾಲಿವುಡ್​ ಕೈ ಬಿಟ್ಟು, ಕೂರ್ಗ್​​ನಲ್ಲಿ ಕೃಷಿ ಮಾಡುವ ಮನಸ್ಸಿತ್ತಂತೆ ಸುಶಾಂತ್​ಗೆ!
    ಸುಶಾಂತ್​ ಸ್ನೇಹಿತ ಮಹೇಶ್​ ಮತ್ತು ಅವರ ಪತ್ನಿ

    ಸುಶಾಂತ್​ ಕೃಷಿ ಮಾಡುವುದರ ಕಡೆ ಹೊರಳುತ್ತಿದ್ದಾನೆ ಎಂಬುದು ಯಾವಾಗ ರಿಯಾಗೆ ಗೊತ್ತಾಯಿತೋ, ಆವತ್ತಿನಿಂದ ಅವರನ್ನು ಕಡೆಗಣನೆ ಮಾಡುತ್ತ ಹೋದರು. ಅಷ್ಟೇ ಅಲ್ಲ ಸುಶಾಂತ್​ಗೆ ತಂದೆಯನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಅನೇಕ ಸಂದರ್ಭದಲ್ಲಿ ತನ್ನ ಮಗನನ್ನು ನೋಡಲು ಸುಶಾಂತ್​ ತಂದೆ ಪ್ರಯತ್ನಿಸಿದ್ದರಾದರೂ, ಬಾಡಿಗಾರ್ಡ್​ ಮೂಲಕ ಅವರನ್ನು ತಡೆಯುತ್ತಿದ್ದಳು ರಿಯಾ.

    ಇದನ್ನೂ ಓದಿ: ರಿಯಲ್​ ಎಸ್ಟೇಟ್​ ಹಗರಣದಲ್ಲಿ ನಯನತಾರಾ, ರಮ್ಯಾ ಕೃಷ್ಣನ್​, ಅಂಜಲಿ ತೆಂಡೂಲ್ಕರ್​ ಹೆಸರು: ಕೋಟಿಗಟ್ಟಲೇ ಹಣ ವಂಚನೆ!

    ಒಂದು ವೇಳೆ ಆತ ಕುಟುಂಬದಿಂದ ದೂರ ಉಳಿಯದೇ ಇದ್ದಿದ್ದರೆ, ಇಂದು ಸುಶಾಂತ್​ಗೆ ಈ ಗತಿ ಬರುತ್ತಿರಲಿಲ್ಲ. ಅನೇಕ ದಿನಗಳವರೆಗೆ ಸಂಚು ರೂಪಿಸಿ, ತಮ್ಮ ಕಾರ್ಯಯೋಜನೆಯನ್ನು ಸಂಪೂರ್ಣಗೊಳಿಸಿದ್ದಾರೆ. ಇದು ಕೊಲೆಯಲ್ಲ. ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ ಸುಶಾಂತ್​ ಪರ ವಕೀಲ ವಿಕಾಸ್ ಸಿಂಗ್​. (ಏಜೆನ್ಸೀಸ್​)

    ರಿಯಾ ಕಂಟ್ರೋಲ್​ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts