More

    ಹೋಟೆಲ್ನಲ್ಲಿ ಏನ್ಮಾಡ್ತಿದ್ದರು ಸುಶಾಂತ್ ಮತ್ತು ಸಾರಾ?

    ಕಳೆದ ವರ್ಷ ತಮ್ಮ ಜತೆಗೆ ಯೂರೋಪ್‍ಗೆ ಬರುವುದಕ್ಕೆ ಮುನ್ನ ಸುಶಾಂತ್ ತಮ್ಮ ಸ್ನೇಹಿತರೊಂದಿಗೆ ಬ್ಯಾಂಕಾಕ್‍ಗೆ ಹೋಗಿದ್ದರು ಮತ್ತು ಈ ಟ್ರಿಪ್‍ಗಾಗಿ 70 ಲಕ್ಷ ಖರ್ಚು ಮಾಡಿದ್ದರು ಎಂದು ರಿಯಾ ಚಕ್ರವರ್ತಿ ಗುರುವಾರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈಗ ಈ ವಿಷಯವಾಗಿ ಸುಶಾಂತ್ ಅವರ ಸಹಾಯಕರಾಗಿದ್ದ ಶಬ್ಬೀರ್ ಅಹ್ಮದ್ ಇನ್ನಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಸಾಯುವುದಕ್ಕೆ ಮುನ್ನ ಸುಶಾಂತ್ ಗೂಗಲ್​ನಲ್ಲಿ ಏನು ಹುಡುಕುತ್ತಿದ್ದರು?

    ಶಬ್ಬೀರ್ ಹೇಳಿರುವ ಪ್ರಕಾರ, ಬ್ಯಾಂಕಾಕ್ ಟ್ರಿಪ್‍ಗೆ ಸುಶಾಂತ್ ಜತೆಗೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಹ ಬಂದಿದ್ದರಂತೆ ಮತ್ತು ಬ್ಯಾಂಕಾಕ್‍ನಲ್ಲಿ ಅವರಿಬ್ಬರು ಮೂರು ದಿನಗಳ ಕಾಲ ಹೋಟೆಲ್ ರೂಮ್ ಬಿಟ್ಟು ಹೊರಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಬ್ಯಾಂಕಾಕ್‍ಗೆ ಸುಶಾಂತ್, ಕುಶಾಲ್ ಜವೇರಿ, ಸಿದ್ಧಾರ್ಥ್ ಗುಪ್ತಾ, ಅಬ್ಬಾಸ್, ಮುಷ್ತಾಕ್ ಮತ್ತು ಶಬ್ಬೀರ್ ಒಟ್ಟಿಗೆ ಹೋಗಿದ್ದರಂತೆ. ಅದಕ್ಕಾಗಿ ಒಂದು ಸ್ಪೆಷಲ್ ಫ್ಲೈಟ್ ಬುಕ್ ಮಾಡಿದ್ದರಂತೆ ಸುಶಾಂತ್. ಆ ನಂತರ ಸಾರಾ ಅಲಿ ಖಾನ್ ಬಂದು ಸೇರಿಕೊಂಡರಂತೆ. ಅಲ್ಲಿ ಒಂದು ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ ಸುಶಾಂತ್ ಮತ್ತು ಫ್ರೆಂಡ್ಸ್ ಅಲ್ಲಿ ಕೇವಲ ನಾಲ್ಕು ದಿನಗಳ ಕಾಲ ಉಳಿದುಕೊಂಡಿದ್ದರಂತೆ.

    ಇದನ್ನೂ ಓದಿ: `ಬಿಗ್ ಬಾಸ್’ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಎಷ್ಟು?

    `ಈ ಪೈಕಿ ಮೊದಲ ದಿನ ಮಾತ್ರ ಸುಶಾಂತ್ ಮತ್ತು ಸಾರಾ ನಮ್ಮೆಲ್ಲರ ಜತೆಗೆ ಔಟಿಂಗ್‍ಗೆ ಬಂದಿದ್ದರು. ಆ ನಂತರದ ಮೂರು ದಿನಗಳ ಕಾಲ ಅವರಿಬ್ಬರೂ ಹೋಟೆಲ್ ಬಿಟ್ಟು ಹೊರಬರಲೇ ಇಲ್ಲ. ಇನ್ನಷ್ಟು ದಿನಗಳ ಕಾಲ ಎಲ್ಲರೂ ಇರಬೇಕು ಎಂದು ನಿರ್ಧಾರವಾಗಿತ್ತು. ಆದರೆ, ಸುನಾಮಿ ಅಪ್ಪಳಿಸುತ್ತದೆ ಎಂಬ ಹವಾಮಾನ ಮುನ್ಸೂಚನೆ ಬಂದಿದ್ದರಿಂದ, ಎಲ್ಲರೂ ಭಾರತಕ್ಕೆ ವಾಪಸ್ಸಾದರು. ನಾನು ಮತ್ತು ಮುಷ್ತಾಕ್ ಮಾತ್ರ ಅಲ್ಲೇ ಉಳಿದುಕೊಂಡೆವು. ನಮ್ಮ ಖರ್ಚಿಗೆಂದು, ಸುಶಾಂತ್ ತಮ್ಮ ಎಟಿಎಂ ಕಾರ್ಡ್ ಕೊಟ್ಟಿದ್ದರು. ಮುಂಬೈಗೆ ಹೋದ ನಂತರ ನಮ್ಮ ಅಕೌಂಟ್‍ಗೆ ದುಡ್ಡು ಹಾಕಿದ್ದರು. ನಾವಿಬ್ಬರು ಸುಮಾರು ಒಂದು ತಿಂಗಳ ನಂತರ ಮುಂಬೈಗೆ ವಾಪಸ್ಸಾದೆವು’ ಎಂದು ಶಬ್ಬೀರ್ ಹೇಳಿಕೊಂಡಿದ್ದಾರೆ.

    ನಿಂಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದು ಯಾರು? ರಿಯಾಗೆ ಕಂಗನಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts