More

    ಆಸೀಸ್ ಕ್ರಿಕೆಟಿಗರಿಗೆ ಐಪಿಎಲ್ ತಂಡಗಳಿಂದ ಶಾಕ್, ಸುರೇಶ್ ರೈನಾ ಉಳಿಸಿಕೊಂಡ ಸಿಎಸ್‌ಕೆ

    ಬೆಂಗಳೂರು: ಭಾರತ ವಿರುದ್ಧ ತವರಿನಲ್ಲಿ ಮುಖಭಂಗ ಎದುರಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಐಪಿಎಲ್ ತಂಡಗಳಿಂದಲೂ ಆಘಾತ ಎದುರಾಗಿದೆ. ಆಸೀಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸ್ಟೀವನ್ ಸ್ಮಿತ್, ಆರನ್ ಫಿಂಚ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮುಂಬರುವ ಐಪಿಎಲ್ 14ನೇ ಆವೃತ್ತಿಗೆ ಪೂರ್ವಭಾವಿಯಾಗಿ ಕ್ರಮವಾಗಿ ರಾಜಸ್ಥಾನ ರಾಯಲ್ಸ್, ಆರ್‌ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಂದ ಹೊರಬಿದ್ದಿದ್ದಾರೆ. ಎಲ್ಲ 8 ಐಪಿಎಲ್ ತಂಡಗಳು ಬುಧವಾರ ಮಾಡಿದ ಆಟಗಾರರ ರಿಟೇನ್ ಪಟ್ಟಿಯಿಂದ, ಕಳೆದ ಆವೃತ್ತಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದ ಕೆಲ ಸ್ಟಾರ್ ಕ್ರಿಕೆಟಿಗರನ್ನು ಬಿಡುಗಡೆ ಮಾಡಿವೆ. ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್‌ಗಾಗಿ ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಲು ಬುಧವಾರ ಕಡೇ ದಿನವಾಗಿತ್ತು.

    ಇದನ್ನೂ ಓದಿ: ಬೆಂಗಳೂರು ಎಫ್ ಸಿಗೆ ಕಡೇ ಕ್ಷಣದಲ್ಲಿ ಶಾಕ್ ಕೊಟ್ಟ ಕೇರಳ ಎಫ್ ಸಿ

    ಯುಎಇಯಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಆಡದೆ ತವರಿಗೆ ಮರಳಿದ್ದ ಸುರೇಶ್ ರೈನಾ ಅವರನ್ನು ಸಿಎಸ್‌ಕೆ ಉಳಿಸಿಕೊಂಡಿದ್ದರೆ, ಹರ್ಭಜನ್ ಸಿಂಗ್‌ರನ್ನು ಕೈಬಿಟ್ಟಿದೆ. ಮುಂಬೈ ಇಂಡಿಯನ್ಸ್ ತಂಡದಿಂದ ಲಸಿತ್ ಮಾಲಿಂಗ ಹೊರಬಿದ್ದಿದ್ದರೆ, ಆರ್‌ಸಿಬಿ ತಂಡದಿಂದ ಆಲ್ರೌಂಡರ್ ಕ್ರಿಸ್ ಮಾರಿಸ್ ಕೂಡ ಬಿಡುಗಡೆಗೊಂಡಿದ್ದಾರೆ. ಫೆಬ್ರವರಿ 11 ಅಥವಾ 16ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿವೆ. ಅದಕ್ಕೆ ಮುನ್ನ ಫೆಬ್ರವರಿ 4ರವರೆಗೂ ಆಟಗಾರರ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    *ರಾಜಸ್ಥಾನಕ್ಕೆ ಸ್ಯಾಮ್ಸನ್ ನಾಯಕ
    ಆಸೀಸ್ ಕ್ರಿಕೆಟಿಗರಿಗೆ ಐಪಿಎಲ್ ತಂಡಗಳಿಂದ ಶಾಕ್, ಸುರೇಶ್ ರೈನಾ ಉಳಿಸಿಕೊಂಡ ಸಿಎಸ್‌ಕೆಸ್ಟೀವನ್ ಸ್ಮಿತ್‌ಗೆ ಗೇಟ್‌ಪಾಸ್ ನೀಡಿದ ಬೆನ್ನಲ್ಲೇ, ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ನೂತನ ನಾಯಕರಾಗಿ ಆಯ್ಕೆಯಾದರೆ, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 8 ವರ್ಷಗಳ ಹಿಂದೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸ್ಯಾಮ್ಸನ್‌ಗೆ ನಾಯಕತ್ವ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಆವೃತ್ತಿಯಲ್ಲಿ ಸ್ಮಿತ್ ನಾಯಕತ್ವದಲ್ಲಿ ಆಡಿದ್ದ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ಕಂಡಿತ್ತು. 14 ಲೀಗ್ ಪಂದ್ಯಗಳಿಂದ ಸ್ಮಿತ್ 3 ಅರ್ಧಶತಕ ಸೇರಿದಂತೆ 311 ರನ್ ಬಾರಿಸಿದ್ದರು. 2018ರಲ್ಲಿ ಸ್ಮಿತ್ ಅವರನ್ನು ರಾಯಲ್ಸ್ 12.5 ಕೋಟಿ ರೂಪಾಯಿಗೆ ಖರೀದಿಸಿತ್ತು.

    *ಸುರೇಶ್ ರೈನಾಗೆ ಒಲಿದ ಲಕ್
    ವೈಯಕ್ತಿಕ ಕಾರಣ ನೀಡಿ ಯುಎಇಯಿಂದ ತವರಿಗೆ ಮರಳಿದ್ದ ಸುರೇಶ್ ರೈನಾ ಅವರನ್ನು ಸಿಎಸ್‌ಕೆ ಉಳಿಸಿಕೊಂಡಿದೆ. ಆದರೆ ಟೂರ್ನಿ ತಪ್ಪಿಸಿಕೊಂಡಿದ್ದ ಮತ್ತೋರ್ವ ಅನುಭವಿ ಆಟಗಾರ ಹರ್ಭಜನ್ ಸಿಂಗ್‌ಗೆ ಗೇಟ್‌ಪಾಸ್ ನೀಡಲಾಗಿದೆ. ರೈನಾ ವಾಪಸಾಗಿದ್ದರಿಂದ ಫ್ರಾಂಚೈಸಿ ಸಿಟ್ಟಾಗಿದ್ದು 2021ರ ಆವೃತ್ತಿಗೆ ಕೈಬಿಡಲಾಗುತ್ತಿದೆ ಎನ್ನಲಾಗಿತ್ತು. ರೈನಾರನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಫ್ರಾಂಚೈಸಿ, ಧೋನಿ ಆಯ್ಕೆಗೆ ಬಿಟ್ಟಿತ್ತು. ಇದೀಗ, ಆಪ್ತಮಿತ್ರ ಸುರೇಶ್ ರೈನಾ ಅವರನ್ನು ಧೋನಿ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಧೋನಿ ನಿವೃತ್ತಿ ಹೇಳಿದ ದಿನವೇ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ನಿರೀಕ್ಷೆಯಂತೆಯೇ ಕೇದಾರ್ ಜಾಧವ್, ಮುರಳಿ ವಿಜಯ್, ಪೀಯುಷ್ ಚಾವ್ಲಾರನ್ನು ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ಆಸೀಸ್‌ನಲ್ಲಿ ಭಾರತದ ದಿಗ್ವಿಜಯಕ್ಕೆ ಪಾಕ್ ಕ್ರಿಕೆಟಿಗರಿಂದಲೂ ಪ್ರಶಂಸೆ

    *ಕರುಣ್ ನಾಯರ್, ಗೌತಮ್‌ಗೆ ಕೊಕ್
    ಆಸೀಸ್ ಕ್ರಿಕೆಟಿಗರಿಗೆ ಐಪಿಎಲ್ ತಂಡಗಳಿಂದ ಶಾಕ್, ಸುರೇಶ್ ರೈನಾ ಉಳಿಸಿಕೊಂಡ ಸಿಎಸ್‌ಕೆಕಳೆದ ಆವೃತ್ತಿಯಲ್ಲಿ ವಿವಿಧ ತಂಡಗಳ ಪರ ಆಡಿದ್ದ ಕರ್ನಾಟಕದ 13 ಆಟಗಾರರ ಪೈಕಿ ಈ ಬಾರಿ ನಾಲ್ವರನ್ನು ಕೈಬಿಡಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಕೆ.ಗೌತಮ್, ಜೆ.ಸುಚಿತ್, ಕರುಣ್ ನಾಯರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಿಂದ ಅನಿರುದ್ಧ ಜೋಶಿ ಅವರನ್ನು ಬಿಡುಗಡೆ ಮಾಡಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಕೇರಳವನ್ನು ಪ್ರತಿನಿಧಿಸುತ್ತಿರುವ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಜತೆಗೆ ರಾಜಸ್ಥಾನ ತಂಡದಲ್ಲಿ ಅಚ್ಚರಿ ರೀತಿಯಲ್ಲಿ ಉಳಿದುಕೊಂಡಿದ್ದಾರೆ. ಪವನ್ ದೇಶಪಾಂಡೆ, ದೇವದತ್ ಪಡಿಕಲ್ ಅವರನ್ನು ಆರ್‌ಸಿಬಿ ಉಳಿಸಿಕೊಂಡರೆ, ಪಂಜಾಬ್ ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕೆಕೆಆರ್ ತಂಡದಲ್ಲಿ ಪ್ರಸಿದ್ಧ ಕೃಷ್ಣ, ಡೆಲ್ಲಿ ತಂಡದಲ್ಲಿ ಪ್ರವೀಣ್ ದುಬೆ, ಸನ್‌ರೈಸರ್ಸ್‌ ತಂಡದಲ್ಲಿ ಮನೀಷ್ ಪಾಂಡೆ ಉಳಿದುಕೊಂಡಿದ್ದಾರೆ.

    *ಮಾಲಿಂಗ ಕೈಬಿಟ್ಟ ಮುಂಬೈ
    ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಲಸಿತ್ ಮಾಲಿಂಗ ಅವರನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮುಡಿಸಿದೆ. ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ (122 ಪಂದ್ಯ, 170 ವಿಕೆಟ್) ಕಬಳಿಸಿದ ಬೌಲರ್ ಎನಿಸಿಕೊಂಡಿರುವ ಮಾಲಿಂಗ, ವೈಯಕ್ತಿಕ ಕಾರಣ ನೀಡಿ 2020ರ ಆವೃತ್ತಿಯಿಂದ ಹಿಂದೆ ಸರಿದಿದ್ದರು. ಮಾಲಿಂಗ 2009ರಿಂದಲೂ ತಂಡದ ಭಾಗವಾಗಿದ್ದರು.

    *ಸ್ಯಾಮ್ಸ್, ಹರ್ಷಲ್ ಆರ್‌ಸಿಬಿಗೆ ವರ್ಗ
    ಡೆಲ್ಲಿ ತಂಡದ ಆಲ್ರೌಂಡರ್‌ಗಳಾದ ಡೊಮಿನಿಕ್ ಸ್ಯಾಮ್ಸ್ ಹಾಗೂ ಹರ್ಷಲ್ ಪಟೇಲ್ ಆರ್‌ಸಿಬಿ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಹರ್ಷಲ್ ಪಟೇಲ್ ಇದಕ್ಕೂ ಮೊದಲು ಆರ್‌ಸಿಬಿ ತಂಡದಿಂದಲೇ ಡೆಲ್ಲಿಗೆ ವರ್ಗಾವಣೆಗೊಂಡಿದ್ದರು. ಸ್ಯಾಮ್ಸ್ 2020-21ನೇ ಬಿಗ್ ಬಾಷ್‌ನಲ್ಲಿ ಸಿಡ್ನಿ ಥಂಡರ್ಸ್‌ ಪರ 10 ವಿಕೆಟ್ ಕಬಳಿಸಿದ್ದರು. 2020ರ ಐಪಿಎಲ್‌ನಲ್ಲಿ ಡೆಲ್ಲಿ ಪರ 3 ಪಂದ್ಯಗಳನ್ನಾಡಿದ್ದರೂ ವಿಕೆಟ್ ಕಬಳಿಸಲು ವಿಲರಾಗಿದ್ದರು.

    *ಆರ್‌ಸಿಬಿ
    ರಿಟೇನ್: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಯಜುವೇಂದ್ರ ಚಾಹಲ್, ದೇವದತ್ ಪಡಿಕಲ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಆಡಂ ಜಂಪಾ, ಶಹಬಾಜ್ ನದೀಂ, ಜೋಸ್ ಫಿಲಿಫ್, ಕೇನ್ ರಿಚರ್ಡ್‌ಸನ್, ಪವನ್ ದೇಶಪಾಂಡೆ.
    ಬಿಡುಗಡೆ: ಕ್ರಿಸ್ ಮಾರಿಸ್, ಮೊಯಿನ್ ಅಲಿ, ಆರನ್ ಫಿಂಚ್, ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ಪವನ್ ನೇಗಿ, ಇಸುರು ಉದಾನ, ಉಮೇಶ್ ಯಾದವ್, ಡೇಲ್ ಸ್ಟೇನ್, ಪಾರ್ಥಿವ್ ಪಟೇಲ್ (ನಿವೃತ್ತಿ).

    *ಸಿಎಸ್‌ಕೆ
    ರಿಟೇನ್: ಎಂಎಸ್ ಧೋನಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎನ್.ಜಗದೀಶನ್, ಋತುರಾಜ್ ಗಾಯಕ್ವಾಡ್, ಕೆಎಂ ಆಸ್ಿ, ಹ್ಯಾಸಲ್‌ವುಡ್, ಕರ್ಣ್ ಶರ್ಮ, ಇಮ್ರಾನ್ ತಾಹಿರ್, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೊ, ಲುಂಗಿ ಎನ್‌ಗಿಡಿ, ಸ್ಯಾಮ್ ಕರ‌್ರನ್, ಸಾಯಿ ಕಿಶೋರ್.
    ಬಿಡುಗಡೆ: ಕೇದಾರ್ ಜಾಧವ್, ಪೀಯುಷ್ ಚಾವ್ಲಾ, ಮುರಳಿ ವಿಜಯ್, ಮೋನು ಸಿಂಗ್, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್ (ನಿವೃತ್ತಿ).
    ಉಳಿಕೆ ಹಣ: 23 ಕೋಟಿ ರೂಪಾಯಿ.

    *ಕಿಂಗ್ಸ್ ಇಲೆವೆನ್ ಪಂಜಾಬ್
    ರಿಟೇನ್: ಕೆಎಲ್ ರಾಹುಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮೊಹಮದ್ ಶಮಿ, ಕ್ರಿಸ್ ಜೋರ್ಡನ್, ಮಯಾಂಕ್ ಅಗರ್ವಾಲ್, ರವಿ ಬಿಷ್ಣೋಯಿ, ಸಿಮ್ರಾನ್ ಸಿಂಗ್, ದೀಪಕ್ ಹೂಡಾ, ರ್ಸ್ರಾಜ್ ಅಹ್ಮದ್, ಅರ್ಷ್‌ದೀಪ್, ಎಂ.ಅಶ್ವಿನ್, ದರ್ಶನ್ ನಲ್ಕಂಡೆ, ಇಶಾನ್ ಪೊರೆಲ್, ಹರ್‌ಪ್ರೀತ್ ಸಿಂಗ್
    ಬಿಡುಗಡೆ: ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡನ್ ಕಾಟ್ರೆಲ್, ಕೆ.ಗೌತಮ್, ಕರುಣ್ ನಾಯರ್, ಜೆ.ಸುಚಿತ್, ಮುಜೀಬ್ ಉರ್ ರೆಹಮಾನ್, ಜಿಮ್ಮಿ ನೀಶಾಮ್, ಹರ್ದುಸ್ ವಿಲ್‌ಜೊಯೆನ್, ತಜಿಂದರ್ ಸಿಂಗ್.

    *ಸನ್‌ರೈಸರ್ಸ್‌ ಹೈದರಾಬಾದ್
    ರಿಟೇನ್: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಂ ಗಾರ್ಗ್, ಅಬ್ದುಲ್ ಸಮಾದ್, ಭುವನೇಶ್ವರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮ, ಸಿದ್ದಾರ್ಥ್ ಕೌಲ್, ಟಿ. ನಟರಾಜನ್, ಅಭಿಷೇಕ್ ಶರ್ಮ, ಶಾಬಾಜ್ ನದೀಂ, ಮಿಚೆಲ್ ಮಾರ್ಷ್, ವಿಜಯ್ ಶಂಕರ್, ಮೊಹಮದ್ ನಬಿ, ರಶೀದ್ ಖಾನ್, ಜಾನಿ ಬೇರ್‌ಸ್ಟೋ, ವೃದ್ಧಿಮಾನ್ ಸಾಹ, ಶ್ರೀವತ್ಸ ಗೋಸ್ವಾಮಿ, ಬಸಿಲ್ ಥಂಪಿ, ಜೇಸನ್ ಹೋಲ್ಡರ್.
    ಬಿಡುಗಡೆ: ಬಿಲ್ಲಿ ಸ್ಟಾೃನ್‌ಲೇಕ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಿ.ಸಂದೀಪ್, ಪೃಥ್ವಿ ರಾಜ್.

    *ಮುಂಬೈ ಇಂಡಿಯನ್ಸ್:
    ರಿಟೇನ್: ರೋಹಿತ್ ಶರ್ಮ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್, ಅನ್ಮೋಲ್‌ಪ್ರೀತ್ ಸಿಂಗ್, ಆದಿತ್ಯ ತಾರೆ, ಕ್ರಿಸ್ ಲ್ಯಾನ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ, ಮೋಹ್ಸಿನ್ ಖಾನ್, ರಾಹುಲ್ ಚಹರ್, ಅನೂಕುಲ್ ರಾಯ್. ದವಳ್ ಕುಲಕರ್ಣಿ.
    ಬಿಡುಗಡೆ: ಲಸಿತ್ ಮಾಲಿಂಗ, ಶೆರ್ಫಾನೆ ರುದರ್ ಫೋರ್ಡ್​, ನಾಥನ್ ಕೌಲ್ಟರ್ ನಿಲ್, ಜೇಮ್ಸ್ ಪ್ಯಾಟಿನ್‌ಸನ್, ದಿಗ್ವಿಜಯ್ ದೇಶಮುಖ್, ಮಿಚೆಲ್ ಮೆಕ್ಲೀನಘನ್, ಬಲ್ವಂತ್ ಸಿಂಗ್ ರಾಯ್

    *ರಾಜಸ್ಥಾನ ರಾಯಲ್ಸ್
    ರಿಟೇನ್: ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜ್ರೋಾ ಆರ್ಚರ್, ಜೋಸ್ ಬಟ್ಲರ್, ರಾಹುಲ್ ತೆವಾಟಿಯಾ, ಜೈದೇವ್ ಉನಾದ್ಕತ್, ಯಶಸ್ವಿ ಜೈಸ್ವಾಲ್, ರಾಬಿನ್ ಉತ್ತಪ್ಪ, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಆ್ಯಂಡ್ರೊ ಟೈ, ಅನೂಜ್ ರಾವತ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಮಹಿಪಾಲ್ ಲೋಮ್ರರ್, ಶ್ರೇಯಸ್ ಗೋಪಾಲ್, ಮನನ್ ವೋಹ್ರಾ.
    ಬಿಡುಗಡೆ: ಸ್ಟೀವನ್ ಸ್ಮಿತ್, ಅಂಕಿತ್ ರಜಪೂತ್, ಒಶಾನೆ ಥಾಮಸ್, ಆಕಾಶ್ ಸಿಂಗ್, ವರುಣ್ ಆರನ್, ಟಾಮ್ ಕರ‌್ರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್.

    *ಡೆಲ್ಲಿ ಕ್ಯಾಪಿಟಲ್ಸ್
    ರಿಟೇನ್: ಶ್ರೇಯಸ್ ಅಯ್ಯರ್, ಶಿಖರ್ ಧವನ್, ರಿಷಭ್ ಪಂತ್, ಇಶಾಂತ್ ಶರ್ಮ, ಅಜಿಂಕ್ಯ ರಹಾನೆ, ಆರ್.ಅಶ್ವಿನ್, ಪೃಥ್ವಿ ಷಾ, ಲಲಿತ್ ಯಾದವ್, ಆವೇಶ್ ಖಾನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಮಾರ್ಕಸ್ ಸ್ಟೋಯಿನಿಸ್, ಕ್ರಿಸ್ ವೋಕ್ಸ್, ಶಿಮ್ರೋನ್ ಹೆಟ್ಮೆಯರ್, ಪ್ರವೀಣ್ ದುಬೆ.
    ಬಿಡುಗಡೆ: ಜೇಸನ್ ರಾಯ್, ಸಂದೀಪ್ ಲಮಿಚನ್ನೆ , ಮೋಹಿತ್ ಶರ್ಮ, ಅಲೆಕ್ಸ್ ಕ್ಯಾರಿ, ಕೀಮೊ ಪೌಲ್, ತುಷಾರ್ ದೇಶಪಾಂಡೆ.

    *ಕೋಲ್ಕತ ನೈಟ್ ರೈಡರ್ಸ್‌
    ರಿಟೇನ್: ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಹ್ಯಾರಿ ಗುರ್ನಿ, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲಾಕಿ ರ್ಗ್ಯುಸನ್, ನಿತೀಶ್ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಭಮಾನ್ ಗಿಲ್, ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿ, ರಾಹುಲ್ ತ್ರಿಪಾಠಿ,
    ಬಿಡುಗಡೆ: ಟಾಮ್ ಬಾಂಟನ್, ಎಂ.ಸಿದ್ದಾರ್ಥ್, ನಿಖಿಲ್ ನಾಯ್ಕ, ಸಿದ್ದೇಶ್ ಲಾಡ್, ಕ್ರಿಸ್ ಗ್ರೀನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts