More

    VIDEO: ಮಳೆಯಲ್ಲಿ ಮಗಳೊಂದಿಗೆ ಸುರೇಶ್ ರೈನಾ ಜಾಲಿ ಡ್ರೈವ್…!

    ನವದೆಹಲಿ: ಲಾಕ್‌ಡೌನ್‌ನಿಂದ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿದಿದ್ದ ಸುರೇಶ್ ರೈನಾ, ಹಂತ ಹಂತವಾಗಿ ಆನ್‌ಲಾಕ್ ಘೋಷಣೆಯಾದಂತೆ ತವರಿನಲ್ಲಿ ಅಭ್ಯಾಸ ಶುರುಮಾಡಿದ್ದಾರೆ. ಇತರ ಕ್ರಿಕೆಟಿಗರಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರೈನಾ, ಬುಧವಾರ ಮಳೆಯಲ್ಲಿ ತಮ್ಮ ಮಗಳನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾಲಿ ಡ್ರೈವ್ ಮಾಡಿದ್ದಾರೆ. ಮಗಳು ಗಾರ್ಷಿಯಾ ರೈನಾ ಜತೆಗೆ ಕಾರಿ ಸುತ್ತಾಡಿದರಂತೆ ರೈನಾ. ಕಾರಿನಲ್ಲಿ ಮ್ಯೂಸಿಕ್ ಹಾಕಿಕೊಂಡು, ಮಳೆಯಲ್ಲಿ ಡ್ರೈವ್ ಮಾಡಿದೆ. ಗಾರ್ಷಿಯಾಗೆ ಮಳೆಯಲ್ಲಿ ಸುತ್ತಾಡುವುದು ಎಂದರೆ ತುಂಬಾ ಇಷ್ಟ ಎಂದು ಸುರೇಶ್ ರೈನಾ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಮುಂದೂಡಿದ್ದಕ್ಕೆ ಐಸಿಸಿ ವಿರುದ್ಧ ಪಾಕ್ ಕ್ರಿಕೆಟಿಗರು ಆಕ್ರೋಶಗೊಂಡಿದ್ದೇಕೆ.?

    ದೆಹಲಿಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸುರೇಶ್ ರೈನಾ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಸಹ-ಆಟಗಾರ ಪೀಯುಷ್ ಜತೆಗೂಡಿ ಅಭ್ಯಾಸ ಆರಂಭಿಸಿದ್ದಾರೆ. ಇದೀಗ ಐಸಿಸಿ ಕೂಡ ಟಿ20 ವಿಶ್ವಕಪ್ ಮುಂದೂಡಿರುವುದರಿಂದ ಐಪಿಎಲ್‌ಗಾಗಿ ರೈನಾ ಸಿದ್ಧತೆ ನಡೆಸುತ್ತಿದ್ದಾರೆ. ಪೀಯುಷ್ ಚಾವ್ಲಾ ಜತೆಗೂಡಿ ಅಭ್ಯಾಸ ಮಾಡುತ್ತಿದ್ದ ವಿಡಿಯೋವನ್ನು ರೈನಾ ಇತ್ತೀಚೆಗಷ್ಟೇ ಶೇರ್ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಧೋನಿ ಈಗ ಇಸ್ಪೀಟು ಆಟದ ಪ್ರಚಾರ ರಾಯಭಾರಿ

    ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡದ ಭಾಗವಾಗಿರುವ ರೈನಾ, ಐಪಿಎಲ್‌ನಲ್ಲಿ ಇದುವರೆಗೂ ಆಡಿರುವ 193 ಪಂದ್ಯಗಳಿಂದ 5268 ರನ್ ಬಾರಿಸಿದ್ದಾರೆ. ಒಂದು ಶತಕ ಹಾಗೂ 38 ಅರ್ಧಶತಕ ಸೇರಿವೆ. ಜತೆಗೆ 25 ವಿಕೆಟ್ ಕಬಳಿಸಿದ್ದಾರೆ.

    https://www.instagram.com/p/CC7yY2KhYop/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts