More

    ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಯಾಕೆ ಮಾಡ್ತೀರಿ: ‘ತಾಂಡವ’ ತಂಡಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

    ಮುಂಬೈ: ಅಮೆಜಾನ್ ಪ್ರೈಮ್‌ನ ವಿವಾದಾತ್ಮಕ ‘ತಾಂಡವ’ ವೆಬ್ ಸರಣಿ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಕೂಡ ಹತ್ತಿದೆ. ಅದರಲ್ಲಿ ನಟಿಸಿರುವವರು, ಅದನ್ನು ತಯಾರಿಸಿರುವವರು ಎಲ್ಲರೂ ಬಂಧನ ಭೀತಿ ಕೂಡ ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

    ಈ ನಡುವೆ, ‘ತಾಂಡವ’ದ ನಟ ಜೀಶಾನ್ ಅಯೂಬ್ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು. ‘ಈ ವೆಬ್ ಸರಣಿಯಲ್ಲಿ ನಟಿಸಿರುವ ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರನ್ನು ಬಂಧಿಸಬಾರದು. ಹಾಗಂತ ಸರ್ಕಾರಕ್ಕೆ ಒಂದು ನಿರ್ದೇಶನ ಕೊಡಿ’ ಎಂದು ನ್ಯಾಯಪೀಠವನ್ನು ಕೋರಿದ್ದರು. ಈ ಬೇಡಿಕೆಯನ್ನು ಶುಕ್ರವಾರ ಸಾರಾಸಗಟಾಗಿ ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ‘‘ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವ ಪಾತ್ರಗಳಿಂದ ಕಲಾವಿದರು ದೂರವಿರುವುದು ಕ್ಷೇಮ. ಇಂತಹ ಕಥಾಹಂದರವುಳ್ಳ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದರೆ ಅದಕ್ಕೆ ಅವರೂ ಹೊಣೆಗಾರರಾಗುತ್ತಾರೆ. ಈ ರೀತಿಯ ವಿವಾದಾತ್ಮಕ ಚಿತ್ರ ಸರಣಿಗಳು ಬಾಲಿವುಡ್‌ನಲ್ಲಿ ಗೊಂದಲ ಸೃಷ್ಟಿಸುವುದರ ಜತೆಗೆ ಭವಿಷ್ಯದ ಹಾದಿಯನ್ನು ಮಸುಕುಗೊಳಿಸುತ್ತದೆ’’ ಎಂದು ಅಭಿಪ್ರಾಯಪಟ್ಟಿದೆ.

    ಇದನ್ನೂ ಓದಿ: ಇಂದಿರಾ ಗಾಂಧಿಯಾಗಲಿದ್ದಾರೆ ಕಂಗನಾ ರಣಾವತ್​! ಈ ಬಗ್ಗೆ ಆಕೆ ಹೇಳಿದ್ದೇನು ಗೊತ್ತಾ?

    ಇದಕ್ಕೆ ಮೊದಲು ಅರ್ಜಿದಾರರ ಪರ ವಾದಿಸಿದ ವಕೀಲರು, ‘‘ಚಿತ್ರಕಥೆ ಅಪೇಕ್ಷಿಸುವಂತಹ ಸಂಭಾಷಣೆಯನ್ನು ಕಲಾವಿದರು ಹೇಳಬೇಕಾಗುತ್ತದೆ. ಚಿತ್ರಕಥೆಗೂ ಕಲಾವಿದರಿಗೂ ಸಂಬಂಧವಿಲ್ಲ. ಅವರು ಪಾತ್ರಧಾರಿಗಳಷ್ಟೆ’’ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನು ಒಪ್ಪದ ನ್ಯಾಯಪೀಠ, ‘‘ಚಿತ್ರ ಸರಣಿಗೆ ಒಪ್ಪಿಕೊಳ್ಳುವುದಕ್ಕೂ ಮುನ್ನ ಕಲಾವಿದರಿಗೆ ಸ್ಕ್ರಿಪ್ಟ್ ನೀಡಲಾಗಿರುತ್ತದೆ. ಚಿತ್ರೀಕರಣಕ್ಕೂ ಮುನ್ನ ಅವರು ಅದನ್ನು ಅಧ್ಯಯನ ಮಾಡಿರುತ್ತಾರೆ. ಹೀಗಾಗಿ ಅವರಿಗೆ ಯಾವುದು ಸೂಕ್ಷ್ಮ ವಿಷಯ ಎಂಬುದು ಗೊತ್ತಿರುತ್ತದೆ. ಇನ್ನೊಬ್ಬರಿಗೆ ನೋವುಂಟು ಮಾಡುವಂತಹ ಪಾತ್ರದಲ್ಲಿ ಯಾಕೆ ನಟಿಸಬೇಕು’’ ಎಂದು ಪ್ರಶ್ನಿಸಿತು.

    ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿ ವಿಡಿಯೋ ಮಾಡಿಕೊಂಡ! ಸೆಕ್ಸ್​ಗೆ ಒಪ್ಪದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ

    ಮನಗೂಳಿ ಅಂತ್ಯಕ್ರಿಯೆ ವೇಳೆ ಹಣ, ಮೊಬೈಲ್​, ಬೈಕ್​ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts