More

    ಬೀದಿಯಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​

    ಚೆನ್ನೈ: ತಮಿಳುನಾಡು ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ನಟ ಕಮಲ ಹಾಸನ್​ ಕೂಡ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ಪರ ಪ್ರಚಾರಕ್ಕೆ ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಕ್ಷರಾ ಹಾಸನ್​ ಹೋಗಿದ್ದು, ರಸ್ತೆಯಲ್ಲಿ ಡ್ಯಾನ್ಸ್​ ಮಾಡಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ.

    ಕಮಲ ಹಾಸನ್​ ಅವರು ಮಕ್ಕಲ್​ ನಿಧಿ ಮಾಯಂ (ಎಮ್‍ಎನ್‍ಎಮ್) ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬ್ಯಾಟರಿ ಚಿನ್ನೆಯನ್ನು ಇಟ್ಟುಕೊಂಡಿರುವ ಅವರಿಗೆ ಮತ ನೀಡಿ ಎಂದು ಸುಹಾಸಿನಿ ಅವರು ಬೀದಿಗಿಳಿದು ಪ್ರಚಾರ ಮಾಡಿದ್ದಾರೆ.

    ಪ್ರಚಾರದ ವೇಳೆ ತಮಟೆಯವರು ತಮಟೆ ಬಾರಿಸಿದ್ದಾರೆ. ಅದಕ್ಕೆ ತಕ್ಕಂತೆ ಸುಹಾಸಿನಿ ಹಾಗೂ ನಟಿ ಅಕ್ಷರಾ ಹಾಸನ್​ ಹೆಜ್ಜೆ ಹಾಕಿದ್ದಾರೆ. ಅವರ ಜತೆ ಪಕ್ಷದ ಕೆಲ ಬೆಂಬಲಿಗರೂ ನೃತ್ಯ ಮಾಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಕೈನಲ್ಲಿ ಟಾರ್ಚ್​ ಹಿಡಿದು ನೃತ್ಯ ಮಾಡಿರುವುದು ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)

    ಕರೊನಾದಿಂದಾಗಿ ಮುಂಬೈನ ಐಪಿಎಲ್​ ಪಂದ್ಯಗಳನ್ನು ಬೇರೆಡೆ ನಡೆಸಲಾಗುತ್ತಾ ? ಇಲ್ಲಿದೆ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts