More

    ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!

    ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ಧಾರುಣ ಸಾವು, ಕರುಳು ಹಿಂಡುವ ಸನ್ನಿವೇಶವನ್ನು ಮರಳು ಕಲಾವಿದರೊಬ್ಬರು ಒಡಿಶಾದ ಪುರಿ ಕಡಲತೀರದಲ್ಲಿ ಮರಳು ಕಲೆ ಮೂಲಕ ಕಟ್ಟಿಕೊಟ್ಟಿದ್ದು, ಈ ದೃಶ್ಯ ಮನುಕುಲದ ಮಾನವೀಯತೆಯನ್ನೇ ಪ್ರಶ್ನಿಸಿದೆ.

    ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಆನೆ ಮತ್ತು ತಾಯಿಗರ್ಭದಿಂದ ಹೊರಬರುವ ಮುನ್ನವೇ ಮೃತಪಟ್ಟ ಆನೆಮರಿಗೆ ಶೋಕ ವ್ಯಕ್ತಪಡಿಸಿರುವ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್, ಆನೆ ತನ್ನ ಮಗುವಿನೊಂದಿಗೆ ನೆಲದ ಮೇಲೆ ಮಲಗಿರುವಂತೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ತಾಯಿಆನೆ ಮತ್ತು ಮರಿಯಾನೆ ಚಿರನಿದ್ರೆಗೆ ಜಾರಿದಂತಿದೆ.

    ಇದನ್ನೂ ಓದಿರಿ ನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್​ವುಡ್​ ಸಂತಾಪ

    ಈ ಚಿತ್ರ ನೋಡಿ... ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್​ ಮಾಡಿರುವ ಸುದರ್ಶನ್ ಪಟ್ನಾಯಕ್, “ಮಾನವೀಯತೆ ಮತ್ತೆ ವಿಫಲವಾಗಿದೆ. ಆನೆಯನ್ನು ರಕ್ಷಿಸಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಚಿತ್ರವನ್ನು ಸಾವಿರಾರು ಮಂದಿ ಶೇರ್​ ಮಾಡಿಕೊಂಡಿದ್ದು, ಗರ್ಭಿಣಿ ಆನೆ ಸಾವಿಗೆ ಲಕ್ಷಾಂತರ ಜನರು ಸಂತಾಪ ಸೂಚಿಸಿದ್ದಾರೆ. ಇದೇ ಚಿತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಾಕಿಕೊಂಡಿರುವ ಐಎಫ್ಎಸ್ ಅಧಿಕಾರಿ ಸುಸಂತ ನಂದ ಅವರು ‘ನಾವು ಮಾನವರಾಗಿ ಮತ್ತು ಭೂಮಂಡಲದ ಪಾಲಕರಾಗಿ ಸೋತಿದ್ದೇವೆ” ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರ ವೈರಲ್​ ಆಗಿದ್ದು, ಆನೆ ಸಾವಿಗೆ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

    ಇದನ್ನೂ ಓದಿರಿ ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ

    ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್​ ವ್ಯಾಲಿಯಲ್ಲಿ ಆಹಾರ ಹುಡುಕುತ್ತ ಗ್ರಾಮವೊಂದರ ಸಮೀಪ ಬಂದಿದ್ದ ಹೆಣ್ಣಾನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್​(ಅನಾನಸ್​) ನಲ್ಲಿ ಪಟಾಕಿ ಇಟ್ಟು ತಿನ್ನಲು ಕೊಟ್ಟಿದ್ದರು. ಇದನ್ನು ತಿನ್ನುತ್ತಿದ್ದಂತೆ ಸ್ಫೋಟಗೊಂಡು ಆನೆಯ ಸೊಂಡಿಲು-ಬಾಯಿಗೆ ತೀವ್ರ ಗಾಯವಾಗಿತ್ತು. ಸುಟ್ಟಗಾಯದ ನೋವು ಸಹಿಸಲಾರದೆ ನದಿ ನೀರೊಳಗೆ ಹೋದ ಗರ್ಭಿಣಿ ಆನೆ ನಿಂತಲ್ಲೇ ಪ್ರಾಣಬಿಟ್ಟಿತ್ತು. ಕೆಲವೇ ತಿಂಗಳಲ್ಲಿ ಭೂಮಿ ಮೇಲೆ ಕಣ್ಣು ಬಿಡಬೇಕಿದ್ದ ಆನೆಭ್ರೂಣವೂ ತಾಯಿ ಗರ್ಭದಲ್ಲೇ ಸತ್ತಿದೆ.

    ಈ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿಬಂದಿದೆ. ಈ ನಡುವೆ ಮರಳು ಕಲಾವಿದ ಸುದರ್ಶನ್ ಅವರ ಚಿತ್ರವು ಮನುಕುಲದ ಮನಸ್ಥಿತಿ ಎತ್ತ ಸಾಗಿದೆ, ಮಾನವೀಯತೆ ಎಲ್ಲಿದೆ… ಎಂಬೆಲ್ಲ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.

    ಇದನ್ನೂ ಓದಿರಿ ಗರ್ಭಿಣಿ ಆನೆ ಸಾವು : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೇಂದ್ರ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts