More

    ವ್ಯಕ್ತಿಯ ಪ್ರಾಣ ಉಳಿಸಲು ಜಡ್ಜ್​ ಕಾರನ್ನೇ ಹೈಜಾಕ್​ ಮಾಡಿದ ವಿದ್ಯಾರ್ಥಿಗಳು! ಮುಂದೇನಾಯ್ತು?

    ಭೋಪಾಲ್​: ಹಿರಿಯ ವ್ಯಕ್ತಿಯೊಬ್ಬರ ಪ್ರಾಣ ಉಳಿಸಲು ಹೈಕೋರ್ಟ್​ ನ್ಯಾಯಮೂರ್ತಿಗಳ ಕಾರನ್ನೇ ಹೈಜಾಕ್​ ಮಾಡುವ ಮೂಲಕ ಸುಮಾರು 20 ವಿದ್ಯಾರ್ಥಿಗಳು ಕಾನೂನು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

    59 ವರ್ಷದ ರಂಜಿತ್​ ಸಿಂಗ್​ ಯಾದವ್​ ಅವರ ಝಾನ್ಶಿಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಭಾನುವಾರ ರಾತ್ರಿ ದಕ್ಷಿಣ್​ ಎಕ್ಸ್​ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಝಾನ್ಶಿಗೆ ಪ್ರಯಾಣ ಬೆಳೆಸಿದ್ದರು. ಮೊರೆನಾ ತಲುಪುತ್ತಿದ್ದಂತೆ ರಂಜಿತ್​ಗೆ ಹೃದಯಾಘಾವಾಗಿದೆ. ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ತಕ್ಷಣವೇ ಅಗತ್ಯ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇತ್ತು. ರೈಲು ಗ್ವಾಲಿಯರ್​ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ, ಅದೇ ರೈಲಿನ ಅದೇ ಕೋಚ್​ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪು ಪ್ರಾಧ್ಯಾಪಕರಿಗೆ ಸಹಾಯ ಮಾಡಲು ಮುಂದಾಗಿದೆ.

    ಗ್ವಾಲಿಯರ್ ನಿಲ್ದಾಣದ ಹೊರಗೆ ಆಂಬ್ಯುಲೆನ್ಸ್ ಇರುವ ಬಗ್ಗೆ ತಿಳಿಸಲಾಗಿದ್ದರೂ, ವಿದ್ಯಾರ್ಥಿಗಳು ಅಲ್ಲಿಗೆ ಆಗಮಿಸಿದಾಗ ಯಾವುದೇ ಆಂಬ್ಯಲೆನ್ಸ್​ ಕಾಣಲಿಲ್ಲ. ಇದರಿಂದ ಪರ್ಯಾಯ ಪರಿಹಾರವನ್ನು ಹುಡುಕಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿತು. ಇದೇ ಸಂದರ್ಭದಲ್ಲಿ ಕಾರೊಂದು ನಿಂತಿರುವುದನ್ನು ಕಂಡ ವಿದ್ಯಾರ್ಥಿಗಳು, ಜಡ್ಜ್​ ಕಾರು ಎಂಬುದು ಗೊತ್ತಿಲ್ಲದೇ, ಚಾಲಕ ಮತ್ತು ಭದ್ರತಾ ಸಿಬ್ಬಂದಿಯನ್ನು ಕೆಳಗಿಳಿಸಿ, ಕಾರನ್ನು ತೆಗೆದುಕೊಂಡು ಹೋದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ನ್ಯಾಯಮೂರ್ತಿಗಳ ಸಹಾಯಕರು ತಕ್ಷಣವೇ ಮತ್ತೊಂದು ಕಾರಿನ ವ್ಯವಸ್ಥೆ ಮಾಡಲು ಮುಂದಾದರು ಕೂಡ ವಿದ್ಯಾರ್ಥಿಗಳು ಅದನ್ನು ಲೆಕ್ಕಿಸದೇ ಕಾರು ತೆಗೆದುಕೊಂಡು ಹೋಗಿದ್ದಾರೆ.

    ಪ್ರಾಧ್ಯಾಪಕರನ್ನು ಗ್ವಾಲಿಯರ್​ನ ಜೈ ಆರೋಗ್ಯ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾದರೂ ಸಹ ಅವರ ಪ್ರಯತ್ನ ಮಾತ್ರ ವ್ಯರ್ಥವಾಯಿತು. ಸ್ವಲ್ಪ ಹೊತ್ತಿನ ನಂತರ ಚಿಕಿತ್ಸೆ ಫಲಕಾರಿಯಾಗದೆ ಪ್ರಾಧ್ಯಾಪಕ ಮೃತಪಟ್ಟಿದ್ದಾರೆ. ಈ ಎಲ್ಲ ಘಟನೆಯ ಬಳಿಕ ಜಡ್ಜ್​ ಕಾರು ಚಾಲಕ, ಕಾರು ಹೈಜಾಕ್​ ಕುರಿತು ಪೊಲೀಸರಿಗೆ ಔಪಚಾರಿಕ ದೂರು ಸಲ್ಲಿಸಿದರು. ವಿದ್ಯಾರ್ಥಿಗಳ ವಿರುದ್ಧ ಡಕಾಯಿತಿ ವಿರೋಧಿ ಕಾಯ್ದೆ ಮತ್ತು ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಕಾರು ಕಳ್ಳತನದ ವರದಿಗೆ ಸ್ಪಂದಿಸಿದ ಪೊಲೀಸರು ನಗರದ ಸುತ್ತ ಭದ್ರತೆ ಏರ್ಪಡಿಸಿ, ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದರು. ಎಎಸ್​ಪಿ ಅಖಿಲೇಶ್ ರೆನ್ವಾಲ್ ನೇತೃತ್ವದಲ್ಲಿ ಸಜ್ಜುಗೊಂಡ ಪೊಲೀಸ್ ತಂಡ, ಅಂತಿಮವಾಗಿ ಆಸ್ಪತ್ರೆಯ ಹೊರಗೆ ಕಾರು ನಿಲ್ಲಿಸಿರುವುದು ಪತ್ತೆ ಮಾಡಿದರು. ಪ್ರಾಧ್ಯಾಪಕರಿಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಶೀಘ್ರದಲ್ಲೇ ವಾರಕ್ಕೆ 3 ದಿನಗಳ ಕಾಲ ಕಚೇರಿಯಿಂದ ಕೆಲಸ ಕಡ್ಡಾಯ; ಇನ್ಫೋಸಿಸ್

    ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

    ಬ್ಯಾಕ್​​​ ಲೆಸ್​​ ಹೈ ಸ್ಲಿಟ್ ಗೌನ್‌ನಲ್ಲಿ ಕಾಣಿಸಿಕೊಂಡ ವಾಣಿ ಕಪೂರ್; ‘ಅಬ್ಬಬ್ಬಾ ಏನ್​ ಕಿಲ್ಲರ್​ ಲುಕ್​ ಗುರೂ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts