More

    ಬ್ಯಾಂಕಿನ ಒಂದು ತಪ್ಪಿನಿಂದಾಗಿ ಲಕ್ಷಾಧಿಪತಿ ಆದ ವಿದ್ಯಾರ್ಥಿ! ಇಂಗ್ಲೆಂಡ್​ಗೆ ಹೋಗಿರುವ ಯುವಕನ ವಿರುದ್ಧ ಕೇಸು ದಾಖಲು…

    ನವದೆಹಲಿ: 23ರ ಹರೆಯದ ಪಂಚಕುಲ ಮೂಲದ ಯುವಕ ತನ್ನ ಖಾತೆಗೆ “ತಪ್ಪಾಗಿ 21 ಲಕ್ಷ ರೂ.ಗಳನ್ನು ವರ್ಗಾಯಿಸಿ” ಬ್ಯಾಂಕ್‌ನೊಂದಿಗೆ ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ. ನಂತರ ಈತ ಇಂಗ್ಲೆಂಡ್​ನಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.

    ಎಚ್‌ಡಿಎಫ್‌ಸಿ ಬ್ಯಾಂಕ್, ಮಾನಸಾ ದೇವಿ ಕಾಂಪ್ಲೆಕ್ಸ್, ಸೆಕ್ಟರ್ 5, ಪಂಚಕುಲದಿಂದ ಪೊಲೀಸ್ ದೂರು ದಾಖಲಿಸಿದ್ದು, ಬ್ಯಾಂಕ್​ನವರು ತಪ್ಪಾಗಿ 21 ಲಕ್ಷ ರೂ.ಗಳನ್ನು ಈ ವಿದ್ಯಾರ್ಥಿಗೆ ವರ್ಗಾವಣೆ ಮಾಡಿದ್ದು ಈತ ಅವರ ನೋಟೀಸ್​ಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಹೇಳಿದರು. ವಿದ್ಯಾರ್ಥಿಯು ತಮ್ಮ ಬ್ಯಾಂಕ್‌ನಲ್ಲಿ ಸೇವಿಂಗ್ಸ್​ ಮತ್ತು ಕರೆಂಟ್​ ಖಾತೆಯನ್ನು ಹೊಂದಿದ್ದು, ಸರ್ವರ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಬ್ಯಾಂಕ್ ಹೇಳಿದೆ.

    ಮಾನಸಾ ದೇವಿ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಶೀಲ್ ಕುಮಾರ್ ಅವರ ಪ್ರಕಾರ, ಪ್ರಕರಣದ ತನಿಖೆ ಪ್ರಾರಂಭವಾಗಿದ್ದು ಅವರು ಶೀಘ್ರದಲ್ಲೇ ಸರ್ಕಾರದ ಮೂಲಕ ಯುಕೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲಿದ್ದಾರೆ.

    ಇದನ್ನೂ ಓದಿ: ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್​ನಲ್ಲಿ 18 ವರ್ಷಕ್ಕೆ ಮದುವೆ

    “ನಾವು ಎಲ್ಲಾ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ಚಂಡೀಗಢದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಪಡೆದುಕೊಂಡಿದ್ದು ಇಂಗ್ಲೆಂಡ್​ನಲ್ಲಿರುವ ರಾಯಭಾರ ಕಚೇರಿಗೆ ತಿಳಿಸುತ್ತೇವೆ. ಇದರಿಂದ ಆ ವಿದ್ಯಾರ್ಥಿಯ ವಿವರಗಳನ್ನು ಎಲ್ಲೆಡೆ ಪ್ರಸಾರ ಮಾಡಬಹುದು” ಎಂದು ಅಧಿಕಾರಿ ಸುಶೀಲ್​ ಕುಮಾರ್ ಹೇಳಿದರು.

    “23 ವರ್ಷದ ಯುವಕ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಓದುತ್ತಿದ್ದಾನೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ನಾವು ಅವರ ತಂದೆಯನ್ನು ವಿಚಾರಿಸಿದ್ದು, ಅವರು ಇಲ್ಲಿ ನವದೆಹಲಿಯಲ್ಲಿ ಇದ್ದಾರೆ. ಇವರು ಹಿಮಾಚಲ ಪ್ರದೇಶ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಮಗನ ವಿವರಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಸುನಕ್​ ನೀತಿಗಳಿಗೆ ಸಮ್ಮತಿಸದ ಇಂಗ್ಲೆಂಡ್​ ಸಂಸತ್ತು; ಪ್ರಧಾನಿ ಪಟ್ಟ ಉಳಿಸಿಕೊಳ್ತಾರಾ ಭಾರತದ ಅಳಿಯ?

    ಈ ಪ್ರಕರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದು, ಅವರು ಮೊದಲು ತಮ್ಮದೇ ಮಟ್ಟದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ನಂತರ ವಿದ್ಯಾರ್ಥಿ ಹಣ ಹಿಂತಿರುಗಿಸದಿದ್ದಾಗ ಅವರು ನಮಗೆ ದೂರು ನೀಡಿದರು. ಹುಡುಗ ಪತ್ತೆಯಾಗದಿರುವುದನ್ನು ಕಂಡಾಗ, ಬ್ಯಾಂಕ್ ಅಧಿಕಾರಿಗಳು ಆತನ ತಂದೆಯನ್ನು ಭೇಟಿ ಮಾಡಿದ್ದು ಆದರೆ ಇದರಿಂದ ಏನೂ ಪ್ರಯೋಜನ ಆಗಿಲ್ಲ.

    ತಂದೆಯ ಹೇಳಿಕೆಯಲ್ಲೂ ಹಲವಾರು ಲೋಪಗಳಿವೆ. ಆರಂಭದಲ್ಲಿ ಅವರು ತಮ್ಮ ಮಗನ ವಿಚಾರವನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಅವರ ಮಗ ಆ ಹಣವನ್ನು ಖರ್ಚು ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts