More

    ವಿದೇಶದಿಂದ ರಾಜ್ಯಕ್ಕೆ ಬಂದವರಿಗೆ ಮತ್ತೆ ಟೆನ್ಷನ್​; ರಾಜ್ಯ ಸರ್ಕಾರ ಕೈಗೊಂಡಿದೆ ಕಟ್ಟುನಿಟ್ಟು ಕ್ರಮ…

    ಬೆಂಗಳೂರು: ಬ್ರಿಟನ್​ನಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಗಿ ಕ್ರಮ ಕೈಗೊಂಡು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿರುವ ಬೆನ್ನಿಗೇ ರಾಜ್ಯ ಸರ್ಕಾರವೂ ಚುರುಕುಗೊಂಡು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದರ ಪ್ರಮುಖ ಅಂಗವಾಗಿ ಇಂಗ್ಲೆಂಡ್​ ಹಾಗೂ ದುಬೈನಿಂದ ರಾಜ್ಯಕ್ಕೆ ಬಂದವರಿಗೆ ಟೆಸ್ಟ್​ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ, ಅವರನ್ನು ಹೋಮ್​ ಕ್ವಾರಂಟೈನ್​ ಅಥವಾ ಐಸೋಲೇಷನ್​ಗೆ ಒಳಪಡಿಸಲಿಕ್ಕೂ ಮುಂದಾಗಿದೆ.

    ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುದ್ದಿಗೋಷ್ಠಿ ಕರೆದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ಈ ವಿಷಯವನ್ನು ತಿಳಿಸಿದ್ದಾರೆ. ಬ್ರಿಟನ್, ಯುಕೆಯಲ್ಲಿ ರೂಪಾಂತರಗೊಂಡ ಹೊಸ ಕರೊನಾ ವೈರಸ್ ಪತ್ತೆಯಾಗಿದೆ. ಇದು ಸೋಂಕನ್ನು ಹರಡುವ ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸಿದ್ಧವಾಗಿದ್ದು, ವಿದೇಶದಿಂದ ಬಂದಿರುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಬ್ರಿಟನ್​ನಲ್ಲಿ ಕೋವಿಡ್ 19 ಕೇಸ್​ ಹೆಚ್ಚಳ : ವಿಮಾನ ಯಾನ ತಾತ್ಕಲಿಕವಾಗಿ ರದ್ದುಗೊಳಿಸಿತು ಭಾರತ

    ನಾಳೆಯಿಂದ ಯುಕೆಯಿಂದ ಬರುವ ವಿಮಾನಗಳನ್ನು ನಿಷೇಧ ಮಾಡಲಾಗಿದೆ. ಆದರೆ ಈಗಾಗಲೇ ಬ್ರಿಟಿಷ್ ಏರ್​ವೇಸ್ 246, ಏರ್ ಇಂಡಿಯಾದಲ್ಲಿ 291 ಮಂದಿ ರಾಜ್ಯಕ್ಕೆ ಬಂದಿದ್ದಾರೆ. ಆ ಪೈಕಿ 138 ಮಂದಿಯಲ್ಲಿ ನೆಗಟಿವ್ ರಿಪೋರ್ಟ್ ಇಲ್ಲ. ಇವರ ಪತ್ತೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಆಗಮಿಸುತ್ತಿರುವವರಿಗೆ ಎಲ್ಲ ಏರ್‌ಪೋರ್ಟ್‌ಗಳಲ್ಲಿ ಕಡ್ಡಾಯವಾಗಿ RT-PCR ಟೆಸ್ಟ್ ಮಾಡಿಸಬೇಕು. RT-PCRನಲ್ಲಿ ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಅಥವಾ ಐಸೋಲೇಷನ್ ಮಾಡಬೇಕು. ನೆಗೆಟಿವ್ ಬಂದವರಿಗೆ 7 ದಿನಗಳ ಕಾಲ ಕಡ್ಡಾಯವಾಗಿ ಐಸೋಲೇಷನ್ ಇರಲಿದೆ. ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ಒಂದು ತಂಡ ಇರಲಿದೆ. ಯುಕೆ, ಇಂಗ್ಲೆಂಡ್​ನಿಂದ ಬಂದವರಿಗೆ ಪಾಸಿಟಿವ್ ಬಂದರೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಇರಲಿದೆ ಎಂದು ಅವರು ಹೇಳಿದ್ದಾರೆ.

    ಈ ಸುಧಾರಿತ ಕರೊನಾ ವೈರಸ್​ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ಮರೆಯಬಾರದು. ಕಳೆದ 14 ದಿವಸಗಳಲ್ಲಿ ಯುಕೆ, ಇಂಗ್ಲೆಂಡ್​ನಿಂದ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ. ಇಂಗ್ಲೆಂಡ್, ಡೆನ್ಮಾರ್ಕ್, ಯುಕೆಯಿಂದ ಬಂದ ಪ್ರಯಾಣಿಕರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಆಗಬೇಕಾದ್ದು ಕಡ್ಡಾಯ. ಪಾಸಿಟಿವ್ ಇರಲಿ ಬಿಡಲಿ, ವಿದೇಶದಿಂದ ಬಂದವರು ಕ್ವಾರಂಟೈನ್​ ಕಡ್ಡಾಯ ಎಂದಿರುವ ಸಚಿವ ಸುಧಾಕರ್, ಲಾಕ್​ಡೌನ್ ಬಗ್ಗೆ ತಿರ್ಮಾನ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ರೂಪಾಂತರಗೊಂಡ ವೈರಸ್​ ಬಗ್ಗೆ ಪ್ಯಾನಿಕ್ ಆಗಬೇಡಿ, ಸರ್ಕಾರ ಅಲರ್ಟ್ ಆಗಿದೆ- ಕೇಂದ್ರ ಆರೋಗ್ಯ ಸಚಿವ

    ಈ ವೈರಸ್​ ಮುಚ್ಚಿದ ವಾತಾವಾರಣದಲ್ಲಿ ಹೆಚ್ಚು ಹರಡಲಿದೆ. ಆದರೆ ಹೊರಗಡೆ ಹೆಚ್ಚು ಹರಡುವುದಿಲ್ಲ. ಶಾಲೆಗಳ ಆರಂಭ ವಿಚಾರ ಹಾಗೂ ಉಳಿದ ಮುಂದಿನ ಕ್ರಮಗಳ ಬಗ್ಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಬಹಳಷ್ಟು ಮಂದಿ ಇತ್ತೀಚೆಗೆ ಕೋವಿಡ್​-19 ಮಾರ್ಗಸೂಚಿ ಪಾಲಿಸುತ್ತಿಲ್ಲ. ಎಲ್ಲರೂ ಮಾಸ್ಕ್​ ಧರಿಸಬೇಕು, ದೈಹಿಕ ಅಂತರ ಕಾಪಾಡಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿಕೊಂಡಿದ್ದಾರೆ.

    20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

    ಇಲ್ಲಿ ನಿರ್ಮಾಣವಾಯ್ತು ನಟ ಸೋನು ಸೂದ್​ ದೇವಾಲಯ: ನಿತ್ಯವೂ ಪೂಜೆ, ಆರತಿ

    ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

    ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts