More

    ಬ್ರಿಟನ್​ನಲ್ಲಿ ಕೋವಿಡ್ 19 ಕೇಸ್​ ಹೆಚ್ಚಳ : ವಿಮಾನ ಯಾನ ತಾತ್ಕಲಿಕವಾಗಿ ರದ್ದುಗೊಳಿಸಿತು ಭಾರತ

    ನವದೆಹಲಿ: ರೂಪಾಂತರಗೊಂಡ ಕರೊನಾ ವೈರಸ್ ಕಾಟ ಬ್ರಿಟನ್​ನಲ್ಲಿ ಹೆಚ್ಚಾದ ಕಾರಣ ಅಲ್ಲಿಂದ ಬರುವ ಮತ್ತು ಅಲ್ಲಿಗೆ ಹೋಗುವ ವಿಮಾನಗಳ ಹಾರಾಟವನ್ನು ಭಾರತ ಇಂದಿನಿಂದಲೇ ಅನ್ವಯವಾಗುವಂತೆ ರದ್ದುಗೊಳಿಸಿದೆ. ಈ ನಿರ್ಬಂಧ ಇಂದು ರಾತ್ರಿ 12 ಗಂಟೆಗೆ ಜಾರಿಗೆ ಬರಲಿದ್ದು, 31ನೇ ತಾರೀಕಿನ ಮಧ್ಯರಾತ್ರಿ 12 ರ ತನಕ ಜಾರಿಯಲ್ಲಿರಲಿದೆ.

    ನಾಗರಿಕ ವಿಮಾನ ಯಾನ ಸಚಿವಾಲಯ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಬ್ರಿಟನ್​ನ ಸದ್ಯದ ವಿದ್ಯಮಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಅಲ್ಲಿಂದ ಹೊರಡುವ ವಿಮಾನಗಳು ಭಾರತ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತಿದೆ. ಇದು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31 ರಾತ್ರಿ 12 ಗಂಟೆ ತನಕ ಚಾಲ್ತಿಯಲ್ಲಿರಲಿದೆ ಎಂದು ಹೇಳಿದೆ.

    ಇದನ್ನೂ ಓದಿ: ರೂಪಾಂತರಗೊಂಡ ವೈರಸ್​ ಕಾಟಕ್ಕೆ ಕಂಗಾಲಾದ್ರು ಬ್ರಿಟನ್​ವಾಸಿಗಳು: ಬ್ರಿಟನ್​ ಜತೆಗೆ ವಿವಿಧ ರಾಷ್ಟ್ರಗಳ ಸಂಪರ್ಕ ಕಟ್​

    ಇಂದು ಮಧ್ಯರಾತ್ರಿಯೊಳಗೆ ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ ಎಲ್ಲ ಪ್ರಯಾಣಿಕರೂ ಕಡ್ಡಾಯವಾಗಿ ಆರ್​ಟಿ-ಪಿಸಿಆರ್ ಟೆಸ್ಟ್​ಗೆ ಒಳಗಾಗಬೇಕು. ವಿಮಾನ ನಿಲ್ದಾಣದಲ್ಲೇ ಇದರ ಸೌಲಭ್ಯವಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ರೂಪಾಂತರಗೊಂಡ ವೈರಸ್​ ಬಗ್ಗೆ ಪ್ಯಾನಿಕ್ ಆಗಬೇಡಿ, ಸರ್ಕಾರ ಅಲರ್ಟ್ ಆಗಿದೆ- ಕೇಂದ್ರ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts