More

    ವಿಶ್ವಕಪ್​ ಸೂಪರ್​ ಓವರ್​ಗೆ ಮುನ್ನ ಟೆನ್ಶನ್​ ತಡೆಯಲಾಗದೆ ಸಿಗರೇಟು ಸೇದಿದ್ದರು ಸ್ಟೋಕ್ಸ್​!

    ಕ್ರೈಸ್ಟ್​ಚರ್ಚ್​: ಸರಿಯಾಗಿ ಒಂದು ವರ್ಷದ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯದ ನೆನಪು ಈಗಲೂ ಎಲ್ಲ ಕ್ರಿಕೆಟ್​ ಪ್ರೇಮಿಗಳಿಗೆ ರೋಮಾಂಚನ ತರುತ್ತದೆ. ಅಷ್ಟೊಂದು ರೋಚಕ ಪಂದ್ಯವನ್ನು ಕ್ರಿಕೆಟ್​ ಇತಿಹಾಸ ಹಿಂದೆಂದೂ ಕಂಡಿರಲಿಲ್ಲ. ಕ್ರಿಕೆಟ್​ ಪ್ರೇಮಿಗಳಿಗೇ ಅಷ್ಟೊಂದು ಟೆನ್ಶನ್​ ತಂದಿದ್ದ ಪಂದ್ಯ ಇನ್ನು ಆಟಗಾರರಿಗೆ ಎಷ್ಟೊಂದು ಒತ್ತಡ ತಂದಿರಲಿಕ್ಕಿಲ್ಲ. ಅದರಲ್ಲೂ ಪಂದ್ಯದ ಹೀರೋ ಬೆನ್​ ಸ್ಟೋಕ್ಸ್​ ಅವರು ಅಪಾರ ಟೆನ್ಶನ್​ ಎದುರಿಸಿದ್ದರು. ಇದನ್ನು ನಿಭಾಯಿಸಿಕೊಳ್ಳಲು ಅವರು ಪಂದ್ಯದ ಸೂಪರ್​ ಓವರ್​ಗೆ ಮುನ್ನ ಸಿಗರೇಟು ಸೇದಿ ನಿರಾಳರಾಗಿದ್ದರಂತೆ! ಈ ಬಗ್ಗೆ ಪುಸ್ತಕವೊಂದರಲ್ಲಿ ಈಗ ಬಹಿರಂಗಪಡಿಸಲಾಗಿದೆ.

    ಇಂಗ್ಲೆಂಡ್​ ತಂಡದ ಏಕದಿನ ವಿಶ್ವಕಪ್​ ಗೆಲುವಿನ ಮೊದಲ ವಾಷಿರ್ಕೋತ್ಸವದ ವೇಳೆ ‘ಮಾರ್ಗನ್ಸ್​ ಮೆನ್​: ದಿ ಇನ್​ಸೈಡ್​ ಸ್ಟೋರಿ ಆ್​ ಇಂಗ್ಲೆಂಡ್ಸ್​ ರೈಸ್​ ಫ್ರಂ ಕ್ರಿಕೆಟ್​ ವರ್ಲ್ಡ್​ಕಪ್​ ಹುಮಿಲಿಯೇಷನ್​ ಟು ಗ್ಲೋರಿ’ ಎಂಬ ಪುಸ್ತಕದಲ್ಲಿ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಲಾರ್ಡ್ಸ್​ನಲ್ಲಿ ಆ ದಿನ ಯಾವ ರೀತಿ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಒತ್ತಡವನ್ನು ನಿಭಾಯಿಸಿಕೊಂಡರು ಎಂದು ವಿವರಿಸಲಾಗಿದೆ.

    ಇದನ್ನೂ ಓದಿ: ವೆಸ್ಟ್ ಇಂಡೀಸ್ ಗೆಲುವಿಗೆ ಕ್ರಿಕೆಟ್ ಜಗತ್ತಿನ ಪ್ರಶಂಸೆ

    ಲಾರ್ಡ್ಸ್​ ಮೈದಾನ 27 ಸಾವಿರ ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು ಮತ್ತು ಟಿವಿ ಕ್ಯಾಮರಾಗಳೆಲ್ಲ ಆಟಗಾರರ ಕಡೆಗೇ ದಿಟ್ಟಿಸಿ ನಿಂತಿದ್ದವು. ಎಲ್ಲರೂ ಆಗ ಭಾರಿ ಒತ್ತಡದಲ್ಲಿದ್ದರು. ಆದರೆ ಬೆನ್​ ಸ್ಟೋಕ್ಸ್​ ಲಾರ್ಡ್ಸ್​ನಲ್ಲಿ ಈ ಹಿಂದೆ ಹಲವು ಬಾರಿ ಆಡಿದ ಅನುಭವ ಹೊಂದಿದ್ದರು. ಅವರು ಮೈದಾನದ ಬಗ್ಗೆ ವಿವರವಾಗಿ ತಿಳಿದಿತ್ತು. ಇಂಗ್ಲೆಂಡ್​ ತಂಡದ ಡ್ರೆಸ್ಸಿಂಗ್​ ರೂಂನಲ್ಲಿ ನಾಯಕ ಇವೊಯಿನ್​ ಮಾರ್ಗನ್​ ಎಲ್ಲರ ಟೆನ್ಶನ್​ ಮತ್ತು ಒತ್ತಡವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದರು. ಜತೆಗೆ ಕಾರ್ಯತಂತ್ರವನ್ನು ಹಣೆಯುತ್ತಿದ್ದರು. ಆಗ ಬೆನ್​ ಸ್ಟೋಕ್ಸ್​ ಸ್ವಲ್ಪ ಶಾಂತಿಯ ಸಮಯ ಬೇಕಾಗಿತ್ತು. ಅವರ ಮೈಯೆಲ್ಲ ಮಣ್ಣಾಗಿತ್ತು ಮತ್ತು ಬೆವರಿದ್ದರು. ಅವರು 2 ಗಂಟೆ ಮತ್ತು 27 ನಿಮಿಷಗಳ ಕಾಲ ಭಾರಿ ಟೆನ್ಶನ್​ನ ನಡುವೆ ಬ್ಯಾಟಿಂಗ್​ ಮಾಡಿದ್ದರು. ಹೀಗಾಗಿ ಅವರು ಇಂಗ್ಲೆಂಡ್​ ತಂಡದ ಡ್ರೆಸ್ಸಿಂಗ್​ ರೂಂನ ಹಿಂಬದಿಗೆ ಒಬ್ಬಂಟಿಯಾಗಿ ತೆರಳಿದರು ಮತ್ತು ಅಲ್ಲಿ ಸಿಗರೇಟ್​ ಒಂದನ್ನು ಹಚ್ಚಿಕೊಂಡರು. ಕೆಲ ನಿಮಿಷಗಳ ಕಾಲ ಸಿಗರೇಟು ಸೇದಿ ತಮ್ಮದೇ ಸಮಯವನ್ನು ಕಳೆದು ಟೆನ್ಶನ್​ ನಿವಾರಿಸಿಕೊಂಡರು ಎಂದು ಪುಸ್ತಕದಲ್ಲಿ ಲೇಖಕರಾದ ನಿಕ್​ ಹೌಲ್ಟ್​ ಮತ್ತು ಸ್ಟೀವ್​ ಜೇಮ್ಸ್​ ಬರೆದಿದ್ದಾರೆ.

    29 ವರ್ಷದ ಬೆನ್​ ಸ್ಟೋಕ್ಸ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಗೆಲುವಿನ ಹಾದಿಗೆ ಮರಳಿ ಬರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನ್ಯೂಜಿಲೆಂಡ್​ನ 242 ರನ್​ಗಳ ಸವಾಲನ್ನು ಬೆನ್ನಟ್ಟುವ ವೇಳೆ ಇಂಗ್ಲೆಂಡ್​ 86 ರನ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಆಸರೆಯಾಗಿದ್ದರು. ಅಜೇಯ 84 ರನ್​ ಬಾರಿಸಿದ್ದ ಸ್ಟೋಕ್ಸ್​ ಅಂತಿಮ ಓವರ್​ನಲ್ಲಿ ಇಂಗ್ಲೆಂಡ್​ ತಂಡ ಟೈ ಸಾಧಿಸಲು ನೆರವಾಗಿದ್ದರು. ಬಳಿಕ ಸೂಪರ್​ ಓವರ್​ನಲ್ಲೂ ಬ್ಯಾಟಿಂಗ್​ಗೆ ಇಳಿದು 3 ಎಸೆತಗಳಲ್ಲಿ ಉಪಯುಕ್ತ 8 ರನ್​ ಗಳಿಸಿದ್ದರು. ಅರ್ಹವಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

    ಸೂಪರ್ ಟೈಗೆ ವರ್ಷದ ಹರ್ಷ! ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್, ಸೋತರೂ ಹೃದಯ ಗೆದ್ದ ನ್ಯೂಜಿಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts