More

    ವೆಸ್ಟ್ ಇಂಡೀಸ್ ಗೆಲುವಿಗೆ ಕ್ರಿಕೆಟ್ ಜಗತ್ತಿನ ಪ್ರಶಂಸೆ

    ಸೌಥಾಂಪ್ಟನ್: ಕರೊನಾ ವೈರಸ್ ಭೀತಿ ನಡುವೆಯೂ 117 ದಿನಗಳ ಬಳಿಕ ಪುನರಾರಂಭಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಪಂದ್ಯವೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾನುವಾರ ಮುಕ್ತಾಯಗೊಂಡ ರೋಚಕ ಹಣಾಹಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್‌ಗಳಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿತು. ಪಂದ್ಯದಲ್ಲಿ ವಿಂಡೀಸ್ ತಂಡ ತೋರಿದ ಅಮೋಘ ನಿರ್ವಹಣೆ ಕ್ರಿಕೆಟ್ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಜತೆಗೆ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರರೂ ಜೇಸನ್ ಹೋಲ್ಡರ್ ಬಳಗದ ಕೆಚ್ಚೆದೆಯ ನಿರ್ವಹಣೆಗೆ ಭೇಷ್ ಎಂದಿದ್ದಾರೆ.

    ಏಕದಿನ ವಿಶ್ವಕಪ್ ಗೆಲುವಿನ ವರ್ಷದ ಹರ್ಷಕ್ಕೆ ಸಿದ್ಧವಾಗುತ್ತಿದ್ದ ಇಂಗ್ಲೆಂಡ್‌ಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನ ನಂ.8 ತಂಡ ವಿಂಡೀಸ್ ಜೈವಿಕ-ಸುರಕ್ಷಾ ವಾತಾವರಣದಲ್ಲಿ ನೀಡಿರುವ ಆಘಾತಕ್ಕೆ ವಿರಾಟ್ ಕೊಹ್ಲಿ, ‘ಟೆಸ್ಟ್ ಕ್ರಿಕೆಟ್‌ನ ಉನ್ನತ ಗುಣಮಟ್ಟದ ಆಟ’ ಎಂದು ಟ್ವೀಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 95 ರನ್ ಸಿಡಿಸಿ ವಿಂಡೀಸ್ ತಂಡ 200 ರನ್‌ಗಳ ಗುರಿಯನ್ನು ಬೆನ್ನಟ್ಟಲು ನೆರವಾದ ಜರ್ಮೈನ್ ಬ್ಲ್ಯಾಕ್‌ವುಡ್ ಆಟಕ್ಕೆ ಸಚಿನ್ ತೆಂಡುಲ್ಕರ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದೀರ್ಘ ಬಿಡುವಿನ ಬಳಿಕ ನಡೆದ ಮೊದಲ ಪಂದ್ಯವೇ ನಮ್ಮದಾಯಿತು ಎಂದು ವಿಂಡೀಸ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್ ಹೊಗಳಿದ್ದಾರೆ.

    ಇದನ್ನೂ ಓದಿ: ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ, ಕರೊನಾಗೆ ಗಾಲ್ಫ್ ಆಟಗಾರ್ತಿ ಮದ್ದು!

    ಕ್ರಿಕೆಟ್‌ಗೆ ದಿಕ್ಸೂಚಿಯಾದ ಪಂದ್ಯ!
    ಕರೊನಾ ಹಾವಳಿಯ ನಡುವೆ ಈ ಪಂದ್ಯ ನಿಗದಿಯಾದಾಗ ಎಲ್ಲರೂ ಆತಂಕಮಿಶ್ರಿತ ಕುತೂಹಲದಿಂದ ನೋಡಿದ್ದರು. ುಟ್‌ಬಾಲ್, ರಗ್ಬಿ ಮುಂತಾದ ಕ್ರೀಡೆಗಳಲ್ಲಿ ಈಗಾಗಲೆ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆದಿದ್ದರೂ, ಕ್ರಿಕೆಟ್‌ನಲ್ಲಿ ಇದು ಯಶಸ್ವಿಯಾಗುವುದೇ ಎಂಬ ಗೊಂದಲವಿತ್ತು. ಆದರೆ ಪಂದ್ಯವೀಗ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆದಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಪೂರ್ಣಪ್ರಮಾಣದಲ್ಲಿ ಪುನರಾರಂಭ ಕಾಣಲು ದಿಕ್ಸೂಚಿಯಾಗಿದೆ. ವಿಂಡೀಸ್ ಆಟಗಾರರು ಯಾವುದೇ ಭಯವಿಲ್ಲದೆ ಪ್ರವಾಸಿ ನೆಲದಲ್ಲಿ ಆಲ್ರೌಂಡ್ ಆಟವಾಡಿ ಅರ್ಹ ಗೆಲುವು ಕಂಡರು. ಇದು ಕ್ರಿಕೆಟ್‌ನ ಗೆಲುವು ಕೂಡ ಆಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ದೇಶಗಳಲ್ಲಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಲು ಸ್ಫೂರ್ತಿಯಾಗಿದೆ. ಸರಣಿಯ ಎರಡನೇ ಟೆಸ್ಟ್ ಪಂದ್ಯ ಗುರುವಾರದಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

    PHOTO | ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಜೀವನದಲ್ಲಿ ಹೊಸ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts