More

    ಸ್ಟಾಕ್​ ವಿಭಜನೆ, ಬೋನಸ್​ ಷೇರು ಹಂಚಿಕೆ ನಂತರ 20% ಅಪ್ಪರ್​ ಸರ್ಕ್ಯೂಟ್‌ ಹಿಟ್​: ಹೂಡಿಕೆದಾರರಿಗೆ ಹಣದ ಸುರಿಮಳೆ

    ಮುಂಬೈ: ಬ್ಯಾಂಕಿಂಗೇತರ ಹಣಕಾಸು ಕಂಪನಿ (NBFC), ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್​ (Capri Global Capital Ltd) ಮಂಗಳವಾರ ಎಕ್ಸ್-ಸ್ಪ್ಲಿಟ್ ಮತ್ತು ಎಕ್ಸ್-ಬೋನಸ್ ಆಗಿ ಮಾರ್ಪಟ್ಟಿತು. ಅಲ್ಲದೆ, ಈ ಷೇರು 20% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಯಿತು.

    ಬೋನಸ್​ ಷೇರು, ಸ್ಟಾಕ್​ ಸ್ಪ್ಲಿಟ್​ನಿಂದ ಸಾಕಷ್ಟು ಲಾಭ ಪಡೆದಿದ್ದ ಹೂಡಿಕೆದಾರರು ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​ನಿಂದ ಮತ್ತಷ್ಟು ಶ್ರೀಮಂತರಾದರು.

    ಒಂದು ದಿನದ ಹಿಂದೆ, ಈ ಷೇರಿನ ಬೆಲೆ ರೂ 980 ಕ್ಕಿಂತ ಸ್ವಲ್ಪ ಹೆಚ್ಚು ಇತ್ತು. ಈಗ ಅದು 300 ರೂಪಾಯಿಗಿಂತ ಅಗ್ಗವಾಗಿದೆ. ಏಕೆಂದರೆ, ಷೇರು ವಿಭಜನೆಯೇ ಇದಕ್ಕೆ ಕಾರಣ.

    ಮಂಗಳವಾರ ಈ ಷೇರಿನ ಬೆಲೆಯು ರೂ 48.20 ಅಥವಾ 19.98% ರಷ್ಟು ಏರಿಕೆಯಾಗಿ ರೂ 289.40 ಕ್ಕೆ ತಲುಪಿತು. ಸ್ಟಾಕ್ ಸ್ಪ್ಲಿಟ್ ಮತ್ತು ಬೋನಸ್ ವಿಷಯಕ್ಕೆ ಸರಿಹೊಂದಿಸಿದ ನಂತರ ಈ ಷೇರಿನ ಬೆಲೆಯು ಹೊಸ 52-ವಾರಗಳ ಗರಿಷ್ಠ ಮಟ್ಟ ಮುಟ್ಟಿತು.

    ಈ ಸ್ಟಾಕ್​ ಮಾರ್ಚ್ 5 ರಂದು ಎಕ್ಸ್-ಸ್ಪ್ಲಿಟ್ ಮತ್ತು ಎಕ್ಸ್-ಬೋನಸ್ ಆಗಿ ಮಾರ್ಪಟ್ಟಿತು. ಹಿಂದಿನ ದಿನದಂದು, ಈ ಸ್ಟಾಕ್ ಬೆಲೆಯು 984.9 ರೂ ಇತ್ತು.

    ಈ ಕಂಪನಿಯ ಈಕ್ವಿಟಿ ಷೇರುಗಳು ರೂ 2 ಮುಖಬೆಲೆಯನ್ನು ಹೊಂದಿದ್ದು, ಮಾರ್ಚ್ 5 ರಿಂದ ರೂ 1 ಮುಖಬೆಲೆಗೆ ವಿಭಜಿಸಲಾಗಿದೆ. ಸ್ಟಾಕ್ ವಿಭಜನೆಯ ಅನುಪಾತವು 1:2 ಆಗಿದೆ, ಅಂದರೆ ಅಸ್ತಿತ್ವದಲ್ಲಿರುವ 1 ಷೇರನ್ನು 2 ಆಗಿ ವಿಂಗಡಿಸಲಾಗಿದೆ. ಇದಲ್ಲದೆ, 1:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ಕಂಪನಿಯು ಮುಂದೆ ವಿತರಿಸಿದೆ. ಷೇರುದಾರರು ಹೊಂದಿರುವ ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರಿಗೆ ಒಂದು ಬೋನಸ್ ಷೇರು ನೀಡಲಾಗುತ್ತದೆ.

    ಕಂಪನಿಯು ಕೊನೆಯದಾಗಿ 2016ರ ನವೆಂಬರ್‌ನಲ್ಲಿ 10 ರೂ. ಮುಖಬೆಲೆಯ ಷೇರನ್ನು 2 ರೂ. ಮುಖಬೆಲೆಗೆ ವಿಭಜಿಸಿತ್ತು.

    ಟಾಟಾ ಷೇರು ಬೆಲೆ ಕುಸಿತ ಸಾಧ್ಯತೆ: ಮಾರಾಟ ಮಾಡಲು ಬ್ರೋಕರೇಜ್​ ಸಂಸ್ಥೆಯ ಸಲಹೆ

    ಸಾರ್ವಕಾಲಿನ ಗರಿಷ್ಠ ಮಟ್ಟ ಮುಟ್ಟಿದ ದಾಖಲೆ ಬರೆದ ಪಿಎಸ್​ಯು ಸ್ಟಾಕ್​: ಷೇರು ಖರೀದಿಗೆ ವಿಶ್ಲೇಷಕರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts