More

    ಕೇಂದ್ರಕ್ಕೆ ಪ್ರತಿವರ್ಷ 4.5 ಲಕ್ಷ ಕೋಟಿ ರೂ. ತೆರಿಗೆ ಹೋದ್ರೂ ರಾಜ್ಯಕ್ಕೆ ವಾಪಸ್ ಸಿಗೋದು ಬರೀ 50 ಸಾವಿರ ಕೋಟಿ ರೂ.!: ಸಿದ್ದರಾಮಯ್ಯ

    ಬೆಳಗಾವಿ: ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ 4.5 ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿದೆ. ಆದರೆ, ಕೇಂದ್ರದಿಂದ ವಾಪಸ್ ರಾಜ್ಯಕ್ಕೆ ನೀಡುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ಕರ್ನಾಟಕವನ್ನು ಬಿಜೆಪಿ ಅವರು ದಿವಾಳಿ ಮಾಡಿದ್ದಾರೆ. ಬಡವರನ್ನು ಸುಲಿಗೆ ಮಾಡುತ್ತಿರುವ ಸರ್ಕಾರ ಇರಬೇಕಾ? ಈ ರಾಜ್ಯ ಉಳಿಯಬೇಕೆಂದರೆ ಬಿಜೆಪಿ ಸರ್ಕಾರ ಹೋಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

    ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂತಬಾಳೇಕುಂದ್ರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಜಾಧ್ವನಿ ಯಾತ್ರೆ’ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ 3.22 ಲಕ್ಷ ಸಾವಿರ ಕೋಟಿ ರೂ. ಸಾಲ ಮಾಡಿದೆ. ರಾಜ್ಯದ ಪ್ರತಿ ವ್ಯಕ್ತಿಯ ಮೇಲೆ 78 ಸಾವಿರ ರೂ. ಸಾಲ ಹೇರಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಕಾಂಗ್ರೆಸ್ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಈಡೇರಿಸಿದೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಆದರೆ, ಬಿಜೆಪಿ 600 ಭರವಸೆಗಳನ್ನು ಕೊಟ್ಟರೂ ಅದರಲ್ಲಿ ಈಡೇರಿದ್ದು 50 ಮಾತ್ರ. ಈ ಸರ್ಕಾರ ಜನರಿಗೆ ದ್ರೋಹ ಮಾಡಿದೆ. ಇಂತಹ ವಚನ ಭ್ರಷ್ಟ ಸರ್ಕಾರಕ್ಕೆ ಜನರ ಬಳಿ ಮತ ಕೇಳುವುದಕ್ಕೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಶಾಸಕ ಸಂಜಯ ಪಾಟೀಲ ನನ್ನ ಬಳಿ ಬಂದು ರಾಜಹಂಸಗಡದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಅನುದಾನ ಕೇಳಿಲ್ಲ. ಸಂಜಯ ಪಾಟೀಲ ಮುಖವನ್ನೇ ನೋಡಿಲ್ಲ. ಅವ ಹಸಿ ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸಿದರು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಹಣ ಕೊಟ್ಟು ಜನರನ್ನು ಕರೆತಂದು ಬೆಳಗಾವಿಯಲ್ಲಿ ಮೊನ್ನೆ ಮೋದಿ ಅವರ ರೋಡ್ ಶೋ ಮಾಡಿಸಿದ್ದಾರೆ. ಕರೊನಾದಂತಹ ಸಂಕಷ್ಟದಲ್ಲಿ ಯಾರೂ ಬರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಬರುತ್ತಿದ್ದಾರೆ. ಉದ್ಯೋಗ ಕೊಡುತ್ತೇವೆಂದು ಜನರನ್ನು ಮುರ್ಖರನ್ನಾಗಿ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆ.ಜಿ. ಅಕ್ಕಿ ಕೊಡುತ್ತೇವೆ. ಅವರಿವರೆನ್ನದೇ ಎಲ್ಲರ ಮನೆಗೆ 200 ಯೂನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಪ್ರತಿ ಗೃಹಿಣಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ ನೀಡುತ್ತೇವೆ ಎಂದು ಭರವಸೆ ನೀಡಿದರು.

    ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು

    ಜಾರಕಿಹೊಳಿಗೆ ಹಟ್ಟಿಹೊಳಿ ಟಕ್ಕರ್

    ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಹೊರಗಿನವರು ನಮ್ಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದೆ, ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಅಭಿವೃದ್ಧಿ ಆಗಿಲ್ಲವೇ ಎಂದು ಪೋಡಿಯಂ ಕುಟ್ಟಿ ಜನರನ್ನು ಕೇಳಿದರು. ಅಭಿವೃದ್ಧಿ ಆಗಿಲ್ಲ ಎನ್ನುವವರ ಕಣ್ಣು ಕಾಣಿಸುತ್ತಿಲ್ಲ, ಹೋಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳಲಿ. ನೀವು 100 ಕೋಟಿ ರೂ.ಗೆ ಮಾರಾಟವಾಗಿ ನೀವು ನಮಗೆ ಭ್ರಷ್ಟಾಚಾರದ ಪಾಠ ಮಾಡುತ್ತೀದ್ದಿರಾ? ನಮ್ಮ ಕ್ಷೇತ್ರದಲ್ಲಿ ನಿಮ್ಮ ಗೂಂಡಾಗಿರಿ, ದಾದಾಗಿರಿ ನಡೆಯುವುದಿಲ್ಲ. ನಿಮ್ಮ ಗೂಂಡಾಗಿರಿ ಗೋಕಾಕನಲ್ಲಿ ಇಟ್ಟುಕೊಳ್ಳಿ ಎಂದು ರಮೇಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಗೋಕಾಕದಲ್ಲಿ ಪೊಲೀಸ್ ಠಾಣೆ, ತಹಸೀಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಹೇಗೆ ಕೆಲಸ ಮಾಡುತ್ತದೆ? 1 ಎಕರೆ ಖರೀದಿಗೆ 10 ಲಕ್ಷ ಕೊಡಬೇಕು. ರಿಪಬ್ಲಿಕ್ ಆಫ್ ಗೋಕಾಕ್ ಆಗಿದೆ. ಗೋಕಾಕ ಕ್ಷೇತ್ರದ ಶಾಸಕರೇ ಕ್ಷೇತ್ರದ ಜನರ ಕಬ್ಬಿನ ಬಿಲ್ ಕೊಟ್ಟು ಮಾತನಾಡಿ. ನಂದಿಹಳ್ಳಿಯಲ್ಲಿ ನಿಮ್ಮ ಹೆಸರು ಬರೆದಿಟ್ಟು ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡ. ರಾಹುಲ್ ಗಾಂಧಿ ಬಂದ ದಿನವೇ ಆತ್ಮಹತ್ಯೆ ಆಗಿದೆ. ನಮ್ಮ ಕ್ಷೇತ್ರದ ಜನರ ಬಾಕಿ ಹಣ ಕೊಟ್ಟು ಮಾತನಾಡಿ ಎಂದು ಸವಾಲ್ ಹಾಕಿದರು.

    16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts