More

  16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

  ಬೆಂಗಳೂರು: ಹುಚ್ಚುಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು 16 ಸಲ ಚುಚ್ಚಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ನಿನ್ನೆ ಸಂಜೆ ಬೆಂಗಳೂರಿನ ಮುರುಗೇಶಪಾಳ್ಯದ ಎನ್ಎಎಲ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯ ವಿಚಾರಣೆಯಿಂದಾಗಿ ಇನ್ನೊಂದಷ್ಟು ಸಂಗತಿಗಳು ಬಯಲಾಗಿವೆ.

  ಕೊಲೆಯಾದ ಯುವತಿ ಲೀಲಾ ಪವಿತ್ರ (26), ಮೂಲತಃ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯವಳು. ಅದೇ ರಾಜ್ಯದ ಶ್ರೀಕಾಕುಳಂ ಜಿಲ್ಲೆಯ ದಿವಾಕರ್ ಕೊಲೆಗೈದ ಆರೋಪಿ. ಈಕೆ ಕಳೆದ ಏಪ್ರಿಲ್​ನಿಂದ ನಗರದ ಒಮೆಗಾ ಎಂಬ ಹೆಲ್ತ್​ಕೇರ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್​ ಅಸಿಸ್ಟೆಂಟ್​ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ದೊಮ್ಮಲೂರು ಬಳಿಯ ಇನ್ನೊಂದು ಹೆಲ್ತ್​​ಕೇರ್​​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ವೈಜಾಗ್​ನಲ್ಲಿ ಎಂಎಸ್​​ಸಿ ವ್ಯಾಸಂಗ ಮಾಡುತ್ತಿದ್ದಾಗ ಸ್ನೇಹಿತರಾಗಿ, ನಂತರ ಪ್ರೇಮಿಗಳಾಗಿದ್ದರು. ಇಬ್ಬರೂ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದು, ಈಕೆ ಒಬ್ಬಳೇ ಮನೆ ಮಾಡಿಕೊಂಡು ವಾಸವಿದ್ದರೆ, ಆರೋಪಿ ಪಿಜಿಯಲ್ಲಿ ನೆಲೆಸಿದ್ದ. ಅಂತರ್​ಜಾತಿ ಎಂಬ ಕಾರಣಕ್ಕೆ ಯುವತಿಯ ಮನೆಯವರ ವಿರೋಧ ಇದ್ದಿದ್ದರಿಂದ ಲೀನಾ ದಿನಕರ್​ನಿಂದ ಅಂತರ ಕಾಯ್ದುಕೊಂಡಿದ್ದಳು ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

  ಇದನ್ನೂ ಓದಿ: ಯುವತಿಯನ್ನು 16 ಸಲ ಚುಚ್ಚಿ ಚುಚ್ಚಿ ಕೊಂದ ಹುಚ್ಚುಪ್ರೇಮಿ!; ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ

  ಇಬ್ಬರೂ ಪ್ರೀತಿಸುತ್ತಿದ್ದು, ಇತ್ತೀಚೆಗೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಈತನ ಫೋನ್​ ನಂಬರ್ ಬ್ಲಾಕ್ ಮಾಡಿದ್ದಳು. ಅದಕ್ಕಾಗಿ ಮಾತನಾಡಲೆಂದು ಕಂಪನಿ ಬಳಿ ಬಂದಿದ್ದ. ಅಲ್ಲಿ ಸುಮಾರು ಅರ್ಧ ಗಂಟೆ ಕಾದು ಕುಳಿತಿದ್ದ, ನಂತರ ಒಳಗೆ ಹೋಗಿ ಆಕೆಯನ್ನು ಹೊರಗೆ ಕರೆತಂದು ಗೇಟ್ ಬಳಿ ಹತ್ತು ನಿಮಿಷಗಳ ಕಾಲ ಮಾತನಾಡಿದ್ದ. ನಂತರ ಗೇಟ್​ನಿಂದ ಸ್ವಲ್ಪ ದೂರಕ್ಕೆ ಯುವತಿಯನ್ನು ಕರೆದೊಯ್ದು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದ. ಈಕೆಯನ್ನು ಕೊಲೆ ಮಾಡಲೆಂದೇ ಈತ ಎರಡು ಚಾಕುಗಳನ್ನು ಖರೀದಿಸಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದ್ದಾಗಿ ಡಿಸಿಪಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ತೆರಳಿ ಪರಿಶೀಲನೆಯನ್ನೂ ನಡೆಸಿದ್ದಾರೆ.

  See also  ಅಧಿಕಾರಿಗಳು ಎಚ್ಚರದಿಂದ ಕರ್ತವ್ಯ ನಿರ್ವಹಿಸಲಿ : ಚನ್ನಗಿರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಸೂಚನೆ

  ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

  ಕೊಲೆ ಬಗ್ಗೆ ನಿನ್ನೆ ಸಂಜೆ 6.30 ಸಮಯದಲ್ಲಿ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ಒಬ್ಬ ಮಹಿಳೆಯನ್ನು ಅಮಾನುಷವಾಗಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಬರುವಷ್ಟರಲ್ಲಿ ಮಹಿಳೆಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯುವತಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  ಹೆಲ್ಮೆಟ್​ನಿಂದ ಹೊಡೆದು ಆರೋಪಿಯನ್ನು ಹಿಡಿದ ಸವಾರ

  ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

  ಪ್ರೇಯಸಿಯ ತಲೆ, ಹಣೆ, ಮುಖ, ಕತ್ತು, ಎದೆಗೆ, ಹೊಟ್ಟೆ, ಕೈಗಳಿಗೆ ಮನಸೋಇಚ್ಛೆ ಇರಿದು ಬಳಿಕ ತಾನೂ ಇರಿದುಕೊಂಡು ಸಾಯಲು ದಿನಕರ್ ಯೋಚಿಸಿದ್ದ. ಅಷ್ಟರಲ್ಲಿ ಬೈಕ್​ ಸವಾರರೊಬ್ಬರು ಹೆಲ್ಮೆಟ್​ನಿಂದ ಆರೋಪಿಗೆ ಹೊಡೆದಿದ್ದರಿಂದ ಚಾಕು ಕೈತಪ್ಪಿತ್ತು. ನಂತರ ಅಲ್ಲಿದ್ದವರು ಒಟ್ಟಾಗಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಜೀವನ್​ಬಿಮಾನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts