More

    ಕರೊನಾ ಪಿಡುಗು ನಿಯಂತ್ರಣಕ್ಕೆ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಆದೇಶ

    ಬೆಂಗಳೂರು: ರಾಜ್ಯಾದ್ಯಂತ ಕರೊನಾ ಪಿಡುಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ (ಐಸಿಯು) ಮತ್ತು ಐಸೋಲೇಷನ್​ ವಾರ್ಡ್​ಗಳಲ್ಲಿ ದಿನದ 24 ಗಂಟೆ ಕೆಲಸ ಮಾಡಲು ವೈದ್ಯಕೀಯ ಸೇವೆಗಳ ಸಿಬ್ಬಂದಿಯ ಅವಶ್ಯಕತೆ ಇದೆ.
    ವೈದ್ಯಕೀಯ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಪ್ರತಿ ಪಾಳಿಯಲ್ಲೂ ಕನಿಷ್ಠ 10 ಸಿಬ್ಬಂದಿಯ ಅವಶ್ಯಕತೆ ಇರುತ್ತದೆ. ಆದರೆ ಆರೋಗ್ಯ ಇಲಾಖೆಯಲ್ಲಿ ಶೇ.30 ಹುದ್ದೆಗಳು ಖಾಲಿ ಇವೆ. ಹಾಗಾಗಿ ಪಾಳಿಯಲ್ಲಿ ಕೆಲಸ ಮಾಡಲು ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿದೆ.

    ಈ ಹಿನ್ನೆಲೆಯಲ್ಲಿ ತಕ್ಷಣವೇ ಗುತ್ತಿಗೆ ಆಧಾರದಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಗೆ 10 ವೈದ್ಯರು, 20 ಶುಶ್ರೂಷಕರು, 5 ಪ್ರಯೋಗಶಾಲಾ ತಂತ್ರಜ್ಱರು ಮತ್ತು 10 ಗ್ರೂಪ್​ ಡಿ ನೌಕರರು ಸೇರಿ ಒಟ್ಟು 45 ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚಿಸಿ ಆದೇಶ (ಆದೇಶ ಸಂಖ್ಯೆ: ಆಕುಕ 1 ಸಿಸಿಆರ್​ 2020, ಬೆಂಗಳೂರು, ದಿನಾಂಕ 30.03.2020) ಹೊರಡಿಸಿದೆ. ತನ್ಮೂಲಕ 18 ಆಸ್ಪತ್ರೆಗಳಿಗೆ ಒಟ್ಟು 810 ಸಿಬ್ಬಂದಿ 6 ತಿಂಗಳ ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳಲಿದ್ದಾರೆ.

    ವೈದ್ಯರಿಗೆ ಮಾಸಿಕ 60 ಸಾವಿರ ರೂ., ಶುಶ್ರೂಷಕರಿಗೆ 20 ಸಾವಿರ ರೂ., ಪ್ರಯೋಗಶಾಲಾ ತಂತ್ರಜ್ಱರಿಗೆ 15 ಸಾವಿರ ರೂ. ಮತ್ತು ಗ್ರೂಪ್​ ಡಿ ಸಿಬ್ಬಂದಿಗೆ 12 ಸಾವಿರ ರೂ. ವೇತನ ನಿಗದಿಯಾಗಿದೆ.

    ಸ್ಯಾನಿಟೈಸರ್​ ಬಳಸಿದ ಬಳಿಕ ಬೆಂಕಿಯೊಂದಿಗೆ ಸರಸ ಆಡಿದರೆ ಅಪಾಯ ನಿಶ್ಚಿತ

    VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts