More

    ಎಸ್​ಎಸ್​ಎಲ್​ಸಿ, ಪಿಯುಸಿ, ಪದವೀಧರರಿಗೆ 1,355 ಕೇಂದ್ರ ಸರ್ಕಾರಿ ಹುದ್ದೆಗಳು: ಎಸ್​ಎಸ್​ಸಿಯಿಂದ ಅರ್ಜಿ ಆಹ್ವಾನ

    ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗವು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೇರಿ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ (8ನೇ ಹಂತ/2020 /ಸೆಲೆಕ್ಷನ್ ಹುದ್ದೆಗಳು) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಒಟ್ಟು 1355 ಹುದ್ದೆಗಳಿವೆ. ಮೆಟ್ರಿಕ್ಯೂಲೇಷನ್ ಪಾಸಾದವರಿಗೆ ಟೆಕ್ನಿಕಲ್ ಆಪರೇಟರ್ , ಲೈಬ್ರರಿ ಕ್ಲರ್ಕ್, ಆಫೀಸ್ ಅಟೆಂಡೆಂಟ್ (ಎಂಟಿಎಸ್) ಇತ್ಯಾದಿ ಹುದ್ದೆಗಳಿವೆ. ಪಿಯುಸಿ ಪಾಸಾದವರಿಗೆ ಲ್ಯಾಬ್ ಅಸಿಸ್ಟೆಂಟ್, ಫ್ಯೂಮಿಗೇಷನ್ ಅಸಿಸ್ಟೆಂಟ್, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್, ಕ್ಲರ್ಕ್ ಆಗಬಹುದು. ಪದವಿ ಮತ್ತು ಉನ್ನತ ಶಿಕ್ಷಣ ಪೂರೈಸಿದವರು ಸ್ಟೋರ್ ಕೀಪರ್ ಗ್ರೇಡ್ 2, ಜೂನಿಯರ್ ಇಂಜಿನಿಯರ್, ಸೈಂಟಿಫಿಕ್ ಅಸಿಸ್ಟೆಂಟ್, ಫೀಲ್ಡ್ ಅಸಿಸ್ಟೆಂಟ್ ಇತ್ಯಾದಿ ಹುದ್ದೆಗಳಿಗೆ ನೇಮಕಗೊಳ್ಳಬಹುದು.

    ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ ಹುದ್ದೆಗಳಿಗೆ ಅನುಗುಣವಾಗಿ 25/27/28/30 ವರ್ಷ ನಿಗದಿಪಡಿಸಲಾಗಿದ್ದು, ಎಸ್​ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋ ಸಡಿಲಿಕೆ ಇದೆ. ಅರ್ಜಿಶುಲ್ಕ 100 ರೂ. ಇದ್ದು, ಭಿಮ್ ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಎಸ್​ಬಿಐ ಚಲನ್ ಮೂಲಕ ಎಸ್​ಬಿಐನ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸಬಹುದು. ಮಹಿಳೆ, ಎಸ್​ಸಿ, ಎಸ್​ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಾತಿ ಹಾಗೂ ಶುಲ್ಕ ವಿನಾಯಿತಿ ಇರುತ್ತದೆ.

    ಕಂಪ್ಯೂಟರ್ ಆಧಾರಿತ ಪರೀಕ್ಷೆ: ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವೀಧರರಿಗೆ ಆಯಾ ಹುದ್ದೆಗಳಿಗೆ ಪ್ರತ್ಯೇಕ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದ್ದು, ವಸ್ತುನಿಷ್ಠ ಮಾದರಿ, ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ. ಜೂನ್ 10 ರಿಂದ 12ರ ವರೆಗೆ ಪರೀಕ್ಷೆ ನಡೆಯಲಿದೆ. ಅರ್ಹ ಮತ್ತು ಆಸಕ್ತ ಮಾರ್ಚ್ 20ರೊಳಗಾಗಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಕ್ಕೆ- https://ssc.nic.in

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts