More

    ಶ್ರೀಲಂಕಾದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟಿಗರಿಂದಲೇ ತಡೆ!

    ಕೊಲಂಬೊ: ಶ್ರೀಲಂಕಾ 1996ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ ಬಳಿಕ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ವರ್ಚಸ್ಸು ಪಡೆದುಕೊಂಡಿದೆ. ಕೆಲ ಐಸಿಸಿ ಟೂರ್ನಿಗಳಿಗೆ ಆತಿಥ್ಯ ವಹಿಸುವ ಮೂಲಕವೂ ಶ್ರೀಲಂಕಾ, ಕ್ರಿಕೆಟ್ ಜಗತ್ತಿನಲ್ಲಿ ತನ್ನ ಸಾಮರ್ಥ್ಯ ನಿರೂಪಿಸಿದೆ. ವಿಶ್ವ ಕ್ರಿಕೆಟ್‌ನಲ್ಲಿ ಇನ್ನಷ್ಟು ಗಮನ ಸೆಳೆಯುವ ಸಲುವಾಗಿ ಶ್ರೀಲಂಕಾ ಸರ್ಕಾರ, ತನ್ನ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ಇದೀಗ ಈ ನಿರ್ಣಯವನ್ನು ಕೈಬಿಟ್ಟಿದ್ದಾರೆ. ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ದೇಶದ ಸ್ಟಾರ್ ಕ್ರಿಕೆಟಿಗರಿಂದಲೇ ವಿರೋಧ ವ್ಯಕ್ತವಾದುದು ಇದಕ್ಕೆ ಕಾರಣ!

    ಇದನ್ನೂ ಓದಿ: ನನ್ನ ಬಯೋಪಿಕ್ ನೋಡಿ ಮಹಿಳೆಯರೂ ಬ್ಯಾಟ್ ಹಿಡಿಯಲಿ!

    ಪೂರ್ವ ಕೊಲಂಬೊದ ಹೊರವಲಯದ ಹೋಮಗಾಮದಲ್ಲಿ 26 ಎಕರೆ ಪ್ರದೇಶದಲ್ಲಿ 40 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು 303 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಶ್ರೀಲಂಕಾ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು. 2023ರಿಂದ 2031ರ ನಡುವೆ ನಡೆಯಲಿರುವ 2 ಐಸಿಸಿ ವಿಶ್ವಕಪ್ ಟೂರ್ನಿಗಳ ಆತಿಥ್ಯವನ್ನು ವಹಿಸಿಕೊಳ್ಳಲು ಇಂಥ ಸುಸಜ್ಜಿತ ಕ್ರೀಡಾಂಗಣ ಬೇಕೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬೇಡಿಕೆ ಇಟ್ಟಿದ್ದರಿಂದಾಗಿ ಈ ನಿರ್ಧಾರಕ್ಕೆ ಬರಲಾಗಿತ್ತು.

    ಶ್ರೀಲಂಕಾದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟಿಗರಿಂದಲೇ ತಡೆ!

    ಆದರೆ, ಕರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿರುವ ಇಂಥ ಸಮಯದಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸುವ ಅಗತ್ಯ ಏನಿದೆ? ಅಲ್ಲದೆ ದೇಶದಲ್ಲಿ ಈಗಿರುವ ಕ್ರೀಡಾಂಗಣಗಳಲ್ಲೇ ನಿರಂತರವಾಗಿ ಕ್ರಿಕೆಟ್ ಚಟುವಟಿಕೆಗಳು ನಡೆಯುವುದಿಲ್ಲ ಎಂದು ಮಾಜಿ ನಾಯಕರಾದ ಮಹೇಲ ಜಯವರ್ಧನೆ, ಸನತ್ ಜಯಸೂರ್ಯ ಸಹಿತ ಲಂಕಾದ ಹಲವು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಇದೇ ಮೊತ್ತವನ್ನು ಶಾಲಾ ಕ್ರಿಕೆಟ್ ಚಟುವಟಿಕೆಗಳಿಗೆ ವ್ಯಯಿಸಲಾಗುವುದು ಎಂದು ರಾಜಪಕ್ಷೆ ತಿಳಿಸಿದ್ದಾರೆ.

    ಇದನ್ನೂ ಓದಿ: ಚಂಡಮಾರುತದಲ್ಲಿ ಬುಡಮೇಲಾಗಿದ್ದ ಮರದ ಮರುನಾಟಿ, ಸೌರವ್​ ಗಂಗೂಲಿ ದಿ ಹೀರೋ!

    ಶ್ರೀಲಂಕಾದಲ್ಲಿ ಈಗಾಗಲೆ 10 ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ಈ ಪೈಕಿ ಗಾಲೆ, ಹಂಬಂತೋಟ, ಪಲ್ಲೆಕಿಲೆ ಮತ್ತು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣಗಳು ಗರಿಷ್ಠ ತಲಾ 35 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿವೆ. ಪಿ. ಸಾರಾ ಓವಲ್ ಸಹಿತ ಕೊಲಂಬೊದಲ್ಲಿ ಮತ್ತೆ 3 ಕ್ರೀಡಾಂಗಣಗಳಿವೆ. ಕ್ಯಾಂಡಿ, ಡಂಬುಲಾ, ಮೊರತುವಾದಲ್ಲೂ ಕ್ರೀಡಾಂಗಣಗಳಿವೆ. 2011ರ ವಿಶ್ವಕಪ್ ಆತಿಥ್ಯದ ಸಮಯದಲ್ಲಿ ಹಂಬಂತೋಟದಲ್ಲಿ ಹೊಸದಾಗಿ ಕ್ರೀಡಾಂಗಣ ನಿರ್ಮಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts