More

    ಹಾರ್ದಿಕ್​​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು… ಉರಿಯುವ ಬೆಂಕಿಗೆ ತುಪ್ಪ ಸುರಿದ ಸೂರ್ಯಕುಮಾರ್​ ಯಾದವ್​!

    ನವದೆಹಲಿ: ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಜಾಕ್ ಪಾಟ್ ಹೊಡೆದಿದೆ. ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು 4 ರನ್‌ಗಳ ಅಲ್ಪ ಅಂತರದಿಂದ ಎಸ್​ಆರ್​ಎಚ್​ ತಂಡ ಸೋತಿತ್ತು. ಆ ಬಳಿಕ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಎಸ್​ಆರ್​ಎಚ್​, ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್‌ಗಳಿಂದ ಸೋಲಿಸಿತು. ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬ್ಬರಿಸಿದ ಬೊಬ್ಬಿರಿದ ಎಸ್​ಆರ್​ಎಚ್​ 277 ರನ್​ ಗಳಿಸುವ ಮೂಲಕ ಆರ್​ಸಿಬಿ ಹೆಸರಿನಲ್ಲಿದ್ದ ಐಪಿಎಲ್​ ಗರಿಷ್ಠ ಸ್ಕೋರ್​ ದಾಖಲೆಯನ್ನು ಮುರಿದರು. ಎಸ್​​ಆರ್​ಎಚ್​ ಗೆಲುವಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ ತಂಡದ ಹಾರ್ದಿಕ್​ ಪಾಂಡ್ಯ ಅವರ ನಾಯಕತ್ವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಸೂರ್ಯ ಕುಮಾರ್​ ಯಾದವ್​ ಎಸ್​ಆರ್​ಎಚ್​ಗೆ ಅಭಿನಂದನೆ ಸಲ್ಲಿಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಸೂರ್ಯಕುಮಾರ್ ಯಾದವ್ ಅವರು ಕಾಲಿನ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಮುಂಬೈ ತಂಡವನ್ನು ಯಾದವ್​ ಸೇರಿಕೊಂಡಿಲ್ಲ. ಆದರೆ ಕಾಲಕಾಲಕ್ಕೆ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಬಹಿರಂಗಪಡಿಸುತ್ತಾರೆ. ರೋಹಿತ್​ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದಾಗ ಯಾದವ್​ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಮುರಿದ ಹೃದಯದ ಎಮೋಜಿ ಶೇರ್​ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದೀಗ ಮತ್ತೊಮ್ಮೆ ಅವರು ಅನಿರೀಕ್ಷಿತ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈ ತಂಡವು ಪಂದ್ಯದಲ್ಲಿ ಸೋತ ನಂತರ ಅವರು ಇನ್​ಸ್ಟಾಗ್ರಾಂನಲ್ಲಿ ಎಸ್​ಆರ್​ಎಚ್​ ತಂಡವನ್ನು ಅಭಿನಂದಿಸಿದ್ದಾರೆ.

    ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಶ್ರೇಷ್ಠ ಪಂದ್ಯ. ಪ್ರೇಕ್ಷಕರು ಸಂಪೂರ್ಣವಾಗಿ ಎಂಜಾಯ್ ಮಾಡಿದರು. ಸನ್ ರೈಸರ್ಸ್ ಆಟಗಾರರು ಸೂಪರ್ ಆಗಿ ಆಡಿದರು. ಮುಂಬೈ ಆಟಗಾರರು ಕೂಡ ಉತ್ತಮ ಹೋರಾಟ ನಡೆಸಿದರು. ಅಮೇಜಿಂಗ್ ಫೈಟ್” ಎಂದು ಇನ್​ಸ್ಟಾಗ್ರಾಂನಲ್ಲಿ ಸೂರ್ಯಕುಮಾರ್​ ಯಾದವ್​ ಬರೆದುಕೊಂಡಿದ್ದಾರೆ. ಇದೀಗ ಈ ಈ ಪೋಸ್ಟ್ ವೈರಲ್ ಆಗಿದೆ.

    ಅಂದಹಾಗೆ ಸೂರ್ಯಕುಮಾರ್​ಗೆ ಹಾರ್ದಿಕ್​ ಪಾಂಡ್ಯ ನಾಯಕತ್ವ ಇಷ್ಟವಿಲ್ಲ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಯಾದವ್​ ಈ ರೀತಿ ಪೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಹಾರ್ದಿಕ್​ ಮತ್ತು ರೋಹಿತ್​ ನಡುವೆ ಎರಡು ಬಣ ಸೃಷ್ಟಿಯಾಗಿದೆ. ಕೆಲವರು ಹಾರ್ದಿಕ್​ ಪರ ಇದ್ದರೆ, ಇನ್ನೂ ಕೆಲವರು ರೋಹಿತ್​ ಪರ ಇದ್ದಾರೆ. ಇನ್ನೂ ಸೂರ್ಯಕುಮಾರ್​ಗೆ ರೋಹಿತ್​ ಫೇವರಿಟ್​. ಹೀಗಾಗಿ ಹಾರ್ದಿಕ್​ ನಾಯಕತ್ವ ಇಷ್ಟವಿಲ್ಲ. ಸತತ ಸೋಲು ಹಾಗೂ ತೀವ್ರ ಟೀಕೆಗಳಿಂದ ಹಾರ್ದಿಕ್​ ಕಂಗೆಟ್ಟಿರುವ ಸಂದರ್ಭದಲ್ಲಿ ಯಾದವ್​ ಎಸ್​ಆರ್​ಎಚ್​ ತಂಡವನ್ನು ಅಭಿನಂದಿಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

    ಇನ್ನೂ ಸೂರ್ಯಕುಮಾರ್ ಗಾಯದ ಬಗ್ಗೆ ಎನ್ ಸಿಎಯಿಂದ ಇನ್ನೂ ಸ್ಪಷ್ಟತೆ ಇಲ್ಲ. ಸೂರ್ಯ ಅಲ್ಲಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಕ್ಕರೆ ತಂಡವನ್ನು ಸೇರಿಕೊಳ್ಳುತ್ತಾರೆ. (ಏಜೆನ್ಸೀಸ್​)

    ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ-ಕೆಕೆಆರ್ ಕಾದಾಟ: ಕೊಹ್ಲಿ-ಗಂಭೀರ್ ಮುಖಾಮುಖಿ

    ಕುಂದಾನಗರಿ ಅಖಾಡದಲ್ಲಿ ಮಾಜಿ ಸಿಎಂ vs ಸಚಿವೆ ಪುತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts