More

    ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ-ಕೆಕೆಆರ್ ಕಾದಾಟ: ಕೊಹ್ಲಿ-ಗಂಭೀರ್ ಮುಖಾಮುಖಿ

    ಬೆಂಗಳೂರು: ತವರಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿರುವ ಆತಿಥೇಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-17ರಲ್ಲಿ ಶುಕ್ರವಾರ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಎದುರಿಸಲಿದೆ. ್ಾ ಡು ಪ್ಲೆಸಿಸ್ ಬಳಗ ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಜತೆಗೆ ಕಳೆದ ಆವೃತ್ತಿಯಲ್ಲಿ ಚಿನ್ನಸ್ವಾಮಿ ಅಂಗಣದಲ್ಲಿ ಕೆಕೆಆರ್ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ. ಆರ್‌ಸಿಬಿ ತಂಡ ಆಡಿರುವ 2 ಪಂದ್ಯಗಳಲ್ಲಿ ತಲಾ ಒಂದು ಸೋಲು-ಗೆಲುವು ಕಂಡಿದ್ದರೆ, ಕೆಕೆಆರ್ ಒಂದೇ ಪಂದ್ಯ ಆಡಿದ್ದು, ಗೆಲುವಿನ ಆರಂಭ ಕಂಡಿದೆ. ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿದ್ದು, ರನ್‌ಮಳೆ ಹರಿಯುವ ಸಾಧ್ಯತೆಗಳಿವೆ.

    ಮ್ಯಾಕ್ಸ್‌ವೆಲ್- ಗ್ರೀನ್ ಬ್ಯಾಟಿಂಗ್ ಚಿಂತೆ: ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವೆಂದರೆ 5 ಆಟಗಾರರ ತಂಡ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಬಾರಿ ನಾಯಕ ಪ್ಲೆಸಿಸ್, ವಿರಾಟ್ ಕೊಹ್ಲಿ ಜತೆಗೆ ವಿಕೆಟ್ ಕೀಪರ್‌ಗಳಾದ ಅನುಜ್ ರಾವತ್, ಅನುಭವಿ ದಿನೇಶ್ ಕಾರ್ತಿಕ್ ಉತ್ತಮ ಾರ್ಮ್‌ನಲ್ಲಿದ್ದು, ಫಿನಿಷರ್‌ಗಳ ಕೊರತೆ ನೀಗಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ 3 ಬ್ಯಾಟರ್‌ಗಳ ವೈಲ್ಯ ತಂಡಕ್ಕೆ ಸಂಕಷ್ಟ ತಂದಿದೆ. ದುಬಾರಿ ಆಲ್ರೌಂಡರ್ ಕ್ಯಾಮರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ಎರಡು ಪಂದ್ಯಗಳಲ್ಲಿ ರನ್‌ಬರ ಎದುರಿಸಿದ್ದಾರೆ. ಗ್ರೀನ್ ಆಗಮನ ತಂಡಕ್ಕೆ ಸಮತೋಲನ ನೀಡಿದರೂ ಪರಿಣಾಮಕಾರಿ ಎನಿಸಿಲ್ಲ. ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಿದ್ದಾರೆ. ರಜತ್ ಪಾಟೀದಾರ್ ಕಳಪೆ ಾರ್ಮ್‌ನಿಂದ ಹೊರಬರಬೇಕಿದೆ. ಮಹಿಪಾಲ್ ಲೊಮ್ರೊರ್ ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಬೌಲಿಂಗ್‌ನಲ್ಲಿ ಅಲ್ಜಾರಿ ಜೋಸ್ೆ ಬದಲಿಗೆ ರೀಸ್ ಟಾಪ್ಲೆ ಅವಕಾಶ ಪಡೆಯುವ ಸಾಧ್ಯತೆಗಳಿವೆ.

    ಕೆಕೆಆರ್‌ಗೆ ರಸೆಲ್ ಬಲ: ಕೆಕೆಆರ್ ತಂಡದ ಅಗ್ರ ಕ್ರಮಾಂಕ ಮೊದಲ ಪಂದ್ಯದಲ್ಲಿ ನೀರಸ ನಿರ್ವಹಣೆ ತೋರಿತು. ಆದರೆ ಆಲ್ರೌಂಡರ್ ಆಂಡ್ರೆ ರಸೆಲ್ ತಂಡದ ಪ್ರಮುಖ ಆಟಗಾರನಾಗಿದ್ದು, ಭರ್ಜರಿ ಾರ್ಮ್‌ನಲ್ಲಿದ್ದಾರೆ. ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್‌ರಂಥ ಸದೃಢ ಬ್ಯಾಟಿಂಗ್ ಲೈನ್ ಅಪ್ ಕೆಕೆಆರ್ ಹೊಂದಿದೆ. ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್, ಸುನೀಲ್ ನಾರಾಯಣ್ ಹಾಗೂ ವರುಣ್ ಚಕ್ರವರ್ತಿ ಸ್ಪಿನ್ ಬಲವಿದೆ. ಆರ್‌ಸಿಬಿ ಬ್ಯಾಟರ್‌ಗಳ ಎದುರು ಕೆಕೆಆರ್ ಸ್ಪಿನ್ನರ್‌ಗಳು ಉತ್ತಮ ದಾಖಲೆ ಹೊಂದಿರುವುದು ಪ್ಲಸ್ ಪಾಯಿಂಟ್. ಆರ್‌ಸಿಬಿ ವಿರುದ್ಧದ ಹಿಂದಿನ 2 ಕಾದಾಟದಲ್ಲಿ ಗೆಲುವು ದಾಖಲಿಸಿರುವುದು ಕೆಕೆಆರ್ ಆತ್ಮವಿಶ್ವಾಸ ಹೆಚ್ಚಿಸಿದೆ.

    ಕೊಹ್ಲಿ-ಗಂಭೀರ್ ಮುಖಾಮುಖಿ: ಲಖನೌ ಸೂಪರ್‌ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಈ ಬಾರಿ ಕೆಕೆಆರ್ ತಂಡ ಸೇರಿದ್ದಾರೆ. 2023ರ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ-ಲಖನೌ ಪಂದ್ಯ ಹಾಗೂ ಲಖನೌದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ-ಗಂಭೀರ್ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಜತೆಗೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಇಬ್ಬರು ಆಟಗಾರರು ಒಳಗೊಂಡ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿರುವುದು ಕೂತೂಹಲ ಮೂಡಿಸಿದೆ.

    ಮುಖಾಮುಖಿ: 32
    ಆರ್‌ಸಿಬಿ: 14
    ಕೆಕೆಆರ್: 18
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts