More

    ಯೋಗಾಸನ ಇನ್ನು ಸ್ಪರ್ಧಾತ್ಮಕ ಕ್ರೀಡೆ, ಯೋಗಪಟುಗಳಿಗೆ ಏನೇನು ಲಾಭವಿದೆ ಗೊತ್ತೇ?

    ನವದೆಹಲಿ: ಯೋಗಪಟುಗಳ ಬಹುಕಾಲದ ಕನಸು ನನಸಾಗಿದೆ. ಪ್ರಾಚೀನ ದೈಹಿಕ ಕಲೆ ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಗುರುವಾರ ಅಧಿಕೃತವಾಗಿ ಮಾನ್ಯತೆ ನೀಡಿದೆ. ಇದರಿಂದ ಯೋಗಾಸನಕ್ಕೆ ಇನ್ನು ಸರ್ಕಾರದಿಂದ ಅನುದಾನದ ಸಹಿತ ಹಲವಾರು ಪ್ರೋತ್ಸಾಹಗಳು ಲಭಿಸಲಿದ್ದು, ಯೋಗಪಟುಗಳು ಇನ್ನು ಕ್ರೀಡಾಪಟುಗಳಾಗಿಯೂ ಪರಿಗಣಿಸಲ್ಪಡಲಿದ್ದಾರೆ.

    ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಆಯುಷ್ ಸಚಿವ ಶ್ರೀಪಾದ್ ನಾಯ್ಕ ಅವರಿಬ್ಬರು ಜಂಟಿಯಾಗಿ, ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ನೀಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ‘ಯೋಗಾಸನ ದೀರ್ಘಕಾಲದಿಂದಲೇ ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಆದರೆ ಇದು ಅಧಿಕೃತವಾಗಿ ಸ್ಪರ್ಧಾತ್ಮಕ ಕ್ರೀಡೆ ಎಂದು ಪರಿಗಣಿಸಲ್ಪಡಬೇಕಾದರೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಲಭಿಸುವುದು ಅಗತ್ಯವಾಗಿತ್ತು. ಇಂದು ಆ ದೊಡ್ಡ ದಿನ ಬಂದುಬಿಟ್ಟಿದೆ’ ಎಂದು ಕಿರಣ್ ರಿಜಿಜು ಹೇಳಿದ್ದಾರೆ. ‘ಸ್ಪರ್ಧಾತ್ಮಕ ಕ್ರೀಡೆಯಾಗಿರುವುದರಿಂದ ಯೋಗಾಸನವನ್ನು ಇನ್ನು ಮುಂದೆ ಒಲಿಂಪಿಕ್ಸ್‌ನಂಥ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೂ ಸೇರ್ಪಡೆಗೊಳಿಸುವ ಅವಕಾಶ ಸೃಷ್ಟಿಯಾಗಿದೆ. ಈ ಮೂಲಕ ಭಾರತೀಯ ಯೋಗದಿಂದ ಸಿಗುವ ಅಪಾರವಾದ ಆರೋಗ್ಯ ಲಾಭದ ಬಗ್ಗೆಯೂ ಜಾಗೃತಿ ಮೂಡಿಸಬಹುದು’ ಎಂದು ಶ್ರೀಪಾದ್ ನಾಯ್ಕ ತಿಳಿಸಿದ್ದಾರೆ.

    ಇದನ್ನೂ ಓದಿ: ಮಗುವಿಗೆ ಬಾಟಲಿ ಹಾಲುಣಿಸಿ ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ!

    ಯೋಗಗುರು ಬಾಬಾ ರಾವದೇವ್ ಅವರ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟ (ಎನ್‌ವೈಎಸ್‌ಎ್) ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಾಪನೆಯಾಗಿತ್ತು. ಭಾರತದಲ್ಲಿ ಸ್ಪರ್ಧಾತ್ಮಕ ಕ್ರೀಡೆಯಾಗಿ ಯೋಗದ ಬೆಳವಣಿಗೆಗಾಗಿ ರಾಷ್ಟ್ರೀಯ ಯೊಗಾಸನ ಕ್ರೀಡಾ ಒಕ್ಕೂಟವೂ (ಎನ್‌ವೈಎಸ್‌ಎ್ಐ) ಸ್ಥಾಪನೆಯಾಗಿದ್ದು, ಕಳೆದ ತಿಂಗಳು ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ (ಎನ್‌ಎಸ್‌ಎ್) ಅದಕ್ಕೆ ಮಾನ್ಯತೆ ಲಭಿಸಿತ್ತು.

    ಉದ್ದೇಶ
    ಯೋಗಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು ಈ ನಡೆಯ ಪ್ರಮುಖ ಉದ್ದೇಶವಾಗಿದೆ. ಜತೆಗೆ ಯೋಗದಿಂದ ಸಿಗುವ ಲಾಭದ ಬಗ್ಗೆ ಜಾಗೃತಿಯನ್ನು ಹರಡುವುದು ಮತ್ತು ದೈಹಿಕ-ಮಾನಸಿಕ ಆರೋಗ್ಯವನ್ನು ಸುಧಾರಿಸಲು ಜನರಿಗೆ ನೆರವಾಗುವುದು ಇದರ ಉದ್ದೇಶವಾಗಿದೆ.

    ಯೋಗ, ಯೋಗಪಟುಗಳಿಗೆ ಏನು ಲಾಭ?
    ಸ್ಪರ್ಧಾತ್ಮಕ ಕ್ರೀಡೆಯಾಗಿ ಮಾನ್ಯತೆ ಪಡೆದಿರುವುದರಿಂದ ಇನ್ನು ಯೋಗಾಸನಕ್ಕೆ ಇತರ ಕ್ರೀಡೆಗಳಂತೆ ಸರ್ಕಾರದಿಂದ ವಾರ್ಷಿಕ ಅನುದಾನ ಲಭಿಸಲಿದೆ. ರಾಷ್ಟ್ರೀಯ ಯೊಗಾಸನ ಕ್ರೀಡಾ ಒಕ್ಕೂಟಕ್ಕೆ (ಎನ್‌ವೈಎಸ್‌ಎ್ಐ) ಎಲ್ಲ ರೀತಿಯ ಆರ್ಥಿಕ ಬೆಂಬಲವನ್ನು ನೀಡಲಾಗುವುದು. ಇದರಿಂದ ಅದು ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳಲು, ಯೋಗ ಸ್ಪರ್ಧೆ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಲು ನೆರವಾಗಲಿದೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಇದರಿಂದ ಯೋಗಾಪಟುಗಳಿಗೆ ಇನ್ನು ಆರ್ಥಿಕ ಬಲವೂ ಸಿಗಲಿದೆ. ಇದಲ್ಲದೆ ಯೋಗಪಟುಗಳು ಇನ್ನು ಕ್ರೀಡಾಪಟುಗಳಾಗಿಯೂ ಪರಿಗಣಿಸಲ್ಪಡುವುದರಿಂದ, ಕ್ರೀಡಾ ಕೋಟಾದಡಿಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶವೂ ಸಿಗಲಿದೆ.

    ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ಖೇಲೋ ಇಂಡಿಯಾದಲ್ಲಿ ಸ್ಪರ್ಧೆ
    ಸ್ಪರ್ಧಾತ್ಮಕ ಕ್ರೀಡೆಯಾಗಿರುವುದರಿಂದ ಇನ್ನು ಮುಂದೆ ಖೇಲೋ ಇಂಡಿಯಾ ಗೇಮ್ಸ್‌ಗೆ ಸ್ಪರ್ಧಾ ವಿಭಾಗವಾಗಿಯೂ ಸೇರ್ಪಡೆಯಾಗಲಿದೆ. ಖೇಲೋ ಇಂಡಿಯಾ ಸ್ಕೂಲ್ ಮತ್ತು ಯುನಿವರ್ಸಿಟಿ ಗೇಮ್ಸ್‌ಗಳಲ್ಲಿ ಯೋಗಾಸನ ಸ್ಪರ್ಧೆಗಳು ನಡೆಯಲಿವೆ.

    ಯಾವೆಲ್ಲ ಪ್ರಕಾರಗಳು?
    ಯೋಗಾಸನದ 4 ವಿಭಾಗಗಳಲ್ಲಿ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಸಿಗಲಿದೆ. ಅವುಗಳೆಂದರೆ, ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಯೋಗಾಸನ (ಸಿಂಗಲ್ ಮತ್ತು ಜೋಡಿ), ಲಯಬದ್ಧ ಯೋಗಾಸನ (ಜೋಡಿ, ಫ್ರೀ ಫ್ಲೋ/ಗುಂಪು) ಮತ್ತು ವೈಯಕ್ತಿಕ ಆಲ್ರೌಂಡ್-ಟೀಮ್ ಚಾಂಪಿಯನ್‌ಷಿಪ್. ಕ್ರೀಡಾ ಮತ್ತು ಆಯುಷ್ ಸಚಿವಾಲಯಗಳು ಜಂಟಿಯಾಗಿ ಈ ಸ್ಪರ್ಧೆಗಳಿಗೆ ಅಧಿಕೃತ ಸ್ಕೋರಿಂಗ್ ಪದ್ಧತಿಯನ್ನು ರೂಪಿಸಲಿವೆ.

    ಫೆಬ್ರವರಿಯಲ್ಲಿ ಮೊದಲ ಚಾಂಪಿಯನ್‌ಷಿಪ್
    ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಷ್ಟ್ರೀಯ ವೈಯಕ್ತಿಕ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್ ಆಯೋಜಿಸಲು ಪ್ರಾಥಮಿಕ ಯೋಜನೆ ಹಾಕಿಕೊಳ್ಳಲಾಗಿದೆ. ಅನಂತರ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳು ನಡೆಯಲಿವೆ.

    ಇದನ್ನೂ ಓದಿ: ಕ್ರಿಕೆಟ್‌ಗೆ ಮರಳಲು ಸಜ್ಜಾದ ಯುವರಾಜ್, ಶ್ರೀಶಾಂತ್

    *ಯೋಗಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಸಿಕ್ಕಿರುವುದು ಸಂತೋಷದ ವಿಷಯ. ಆದರೆ, ಸೂಕ್ತ ರೀತಿಯಲ್ಲಿ ಜಾರಿಗೆ ತರಬೇಕು. ಜತೆಗೆ ಯೋಗದ ಮೂಲ ಉದ್ದೇಶದ ಕಡೆ ಸಾಗುವಂತಾಗಬೇಕು. ಯೋಗ ದೇಹದ ಆಂತರಿಕ ವಿದ್ಯೆಯಾಗಿರುವುದರಿಂದ ಸೂಕ್ಷ್ಮವಾಗಿ ನಡೆಯುವಂತಾಗಬೇಕು. ಜತೆಗೆ ಯೋಗ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು.
    ಜಯಕುಮಾರ್, ಯೋಗ ಶಿಕ್ಷಕರು, ಪ್ರಣವ ಯೋಗಧಾಮ, ಮೈಸೂರು

    *ಮಕ್ಕಳಲ್ಲಿ ಸ್ಪರ್ಧಾತ್ಮಕತೆ ತರುವ ದೃಷ್ಟಿಯಿಂದ ಇದು ಜಾರಿಗೆ ತಂದಿರುವುದು ಸಂತೋಷದ ವಿಷಯ. ಇತರ ಕ್ರೀಡೆಗಳೊಂದಿಗೆ ಯೋಗವನ್ನು ಸ್ಪರ್ಧಾತ್ಮಕವಾಗಿ ನೋಡಲು ಬಯಸುತ್ತೇವೆ. ಯೋಗ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರಿಸಲು ಇದು ಉತ್ತಮ ಬುನಾದಿಯಾಗಲಿದೆ.
    ಹರೀಶ್ ಹೆಚ್.ಕೆ. ಯೋಗಶಿಕ್ಷಕರು ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

    ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ವಾಪಸಾದ ಆಸ್ಟ್ರೇಲಿಯಾದ ಕೋಚ್..!

    ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!

    ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಜನ್ಮದಿನವನ್ನು ಸಂಭ್ರಮಿಸದೆ ರೈತರ ಪರ ನಿಂತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts