More

    ಬೆಂ.ನಗರ ವಿವಿ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹ ಮೂರ್ತಿಗೆ ಬೀಳ್ಕೊಡುಗೆ

    ಬೆಂಗಳೂರು ಸುಮಾರು ಮೂರು ದಶಕಗಳ ಕಾಲ ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹ ಮೂರ್ತಿ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಇತಿಹಾಸ ವಿಭಾಗ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಮಂಗಳವಾರ (ಏ.30) ಸೇವೆಯ ಕೊನೆಯ ದಿನವಾಗಿದೆ.

    ಕುಲಸಚಿವ ಟಿ. ಜವರೇಗೌಡ ಮಾತನಾಡಿ, ನೇರ ನಡೆನುಡಿಯ ನಿಷ್ಠುರವಾದಿ ವ್ಯಕ್ತಿತ್ವದ ಪ್ರೊ. ನರಸಿಂಹ ಮೂರ್ತಿ ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಮಾಜಮುಖಿ ಚಿಂತನೆ, ಅನ್ಯಾಯದ ವಿರುದ್ಧ ದನಿ ಎತ್ತುವ ಮೂಲಕ ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಸದಾ ಶ್ರಮಿಸುವ ವ್ಯಕ್ತಿಯಾಗಿದ್ದಾರೆಂದು ಅವರು ನುಡಿದರು.

    ವಿವಿ ಹಂಗಾಮಿ ಕುಲಪತಿ, ಸಿಂಡಿಕೇಟ್ ಸದಸ್ಯ, ಕಲಾ ವಿಭಾಗದ ಡೀನ್ ಹಾಗೂ ಬೆಂಗಳೂರು ಉತ್ತರ ವಿವಿ ಕುಲಸಚಿವರಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿರುವ ಪ್ರೊ. ನರಸಿಂಹಮೂರ್ತಿ ಅವರು ಮಾದರಿ ಶಿಕ್ಷಕರಾಗಿ ಗುರು ಪರಂಪರೆಯ ಪ್ರತೀಕವಾಗಿದ್ದಾರೆಂದು ಹಿರಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್.ಎಸ್. ಈಶ್ವರ್ ಪ್ರಶಂಸಿಸಿದರು.

    ಬೆಂಗಳೂರು ಉತ್ತರ ವಿವಿ ಮಾಜಿ ಕುಲಪತಿ ಪ್ರೊ. ಟಿ.ಡಿ. ಕೆಂಪರಾಜು ಮಾತನಾಡಿ, ವಿವಿಧ ಉನ್ನತ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಅಧ್ಯಯನ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆಂದು ಬಣ್ಣಿಸಿದರು.

    ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ಸಿ.ಎಸ್. ಆನಂದ ಕುಮಾರ್, ವಿತ್ತಾಧಿಕಾರಿ ವಿಜಯಲಕ್ಷ್ಮಿ, ಇತಿಹಾಸ ವಿಭಾಗದ ಅಧ್ಯಾಪಕಿ ಡಾ. ಮಾಲಿನಿ, ಡಾ. ಪುರುಷೋತ್ತಮ ಸೇರಿ ಹಲವರು ಶುಭ ಹಾರೈಸಿದರು.

    ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಮತ್ತು ಆದರ್ಶದಂತೆ ಸಾಮಾಜಿಕ ಸಮಾನತೆಯ ಗುರಿ ಸಾಧನೆಗೆ ಪರಿಶ್ರಮಿಸುವ ಸಂಕಲ್ಪ ನನ್ನದು.
    – ಪ್ರೊ. ಎನ್. ನರಸಿಂಹಮೂರ್ತಿ, ಸಮೂಹ ಸಂವಹನ ವಿಭಾಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts