More

    ಮೂರೇ ತಿಂಗಳಲ್ಲಿ 1.32 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ ನೈಋತ್ಯ ರೈಲ್ವೆ; ಕಳೆದ ವರ್ಷಕ್ಕಿಂತ ಈ ಸಲ 1 ಕೋಟಿ ರೂ. ಹೆಚ್ಚಳ

    ಬೆಂಗಳೂರು: ಕಳೆದ ಮೂರು ತಿಂಗಳಲ್ಲಿ ನೈಋತ್ಯ ರೈಲ್ವೆ 1.32 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದೆ. ವಿಶೇಷವೆಂದರೆ ಇದು ಕಳೆದ ವರ್ಷಕ್ಕಿಂತ 1 ಕೋಟಿ ರೂ. ಹೆಚ್ಚಳ ಕಂಡಿದೆ ಎಂದು ಇಲಾಖೆ ತಿಳಿಸಿದೆ.

    ನೈಋತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿ 2021ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಟಿಕೆಟ್ ರಹಿತ ಪ್ರಯಾಣದ 1,16,521 ಪ್ರಕರಣಗಳನ್ನು ದಾಖಲಿಸಿ, 1,32,99,000 ರೂಪಾಯಿ ಮೊತ್ತದ ದಂಡ ಹಣವನ್ನು ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2,435 ಪ್ರಕರಣಗಳನ್ನು ದಾಖಲಿಸಲಾಗಿದ್ದು, ತಪ್ಪಿತಸ್ಥರಿಂದ ರೂ. 13.74 ಲಕ್ಷ ರೂಪಾಯಿ ಮೊತ್ತದ ದಂಡವನ್ನು ಸಂಗ್ರಹಿಸಲಾಗಿತ್ತು.

    ಪ್ರಯಾಣಿಕರು ಊರ್ಜಿತವಾದ ಪಾಸ್ ಅಥವಾ ಟಿಕೆಟ್ ಹೊಂದಿರದೇ ಪ್ರಯಾಣಿಸುತ್ತಿದ್ದಲ್ಲಿ, 250 ರೂಪಾಯಿ ದಂಡ ಅಥವಾ ಟಿಕೆಟ್ ದರಕ್ಕೆ ಸಮಾನವಾದ ಮೊತ್ತ (ಪ್ರಯಾಣಿಕನು ಪ್ರಯಾಣಿಸಿದ ದೂರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಕ್ರಮಿಸಿದ ದೂರಕ್ಕೆ ಅನುಗುಣವಾದ ಸಾಮಾನ್ಯ ಏಕ ದರ ಹಾಗೂ 250 ರೂ. ಹೆಚ್ಚುವರಿ ಶುಲ್ಕ) ಇವೆರಡರಲ್ಲಿ ಯಾವುದೋ ಹೆಚ್ಚೋ ಅದನ್ನು ದಂಡವಾಗಿ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ವಿಧಿಸಿದೆ.

    ನಾನು ಆರ್​ಎಸ್​ಎಸ್​ ಹಿಡಿತದಲ್ಲಿ ಇರುವುದಕ್ಕೆ ನನಗೆ ಬೇಸರವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts