More

    VIDEO| 2018ರಲ್ಲೇ ಕರೊನಾ ಬಗ್ಗೆ ಮಾತನಾಡಿತ್ತು ಈ ಕೊರಿಯನ್ ವೆಬ್‌ಸಿರೀಸ್!

    ಇತ್ತೀಚಿನ ಒಂದು ತಿಂಗಳಿಂದ ಕರೊನಾ ವೈರಸ್ ಪದವನ್ನು ಕೇಳಿದವರೇ ಹೆಚ್ಚು. ಆದರೆ, ಇದೇ ಕರೊನಾ ಬಗ್ಗೆ 2018ರಲ್ಲೇ ನಾಟಕವೊಂದು ಮೂಡಿಬಂದಿತ್ತು ಎಂದರೆ ನೀವು ನಂಬಲೇಬೇಕು!

    ಹೌದು, ಕೊರಿಯನ್ ಭಾಷೆಯಲ್ಲಿ ‘ಮೈ ಸಿಕ್ರೇಟ್ ಟೆರಿಯಸ್’ ಎಂಬ ನಾಟಕ ಬಳಿಕ ವೆಬ್‌ಸರಣಿ ಯಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಮರ್ಡರ್ ಮಿಸ್ಟರಿ ಶೈಲಿಯಲ್ಲಿ ಮೂಡಿಬಂದಿದ್ದ ಈ ವೆಬ್‌ಸರಣಿಯನ್ನು ಪಾರ್ಕ್ ಸಂಗ್ ಹು ನಿರ್ದೇಶನ ಮಾಡಿದ್ದರು.

    ಪಕ್ಕದ ಮನೆಯ ವ್ಯಕ್ತಿಯ ಕೊಲೆಗೆ ಕಾರಣವೇನು? ಆ ರಹಸ್ಯವನ್ನು ಭೇದಿಸುವುದೇ ಇದರ ಕಥಾವಸ್ತುವಾಗಿತ್ತು. ಕೊನೆಗೆ ಆ ಸಾವು ಸಂಭವಿಸಿದ್ದು ಕರೊನಾದಿಂದ ಎಂದೂ ಕೊನೆಯ ಸಂಚಿಕೆಯ 53ನೇ ನಿಮಿಷದ ಅವಧಿಯಲ್ಲಿ ಪ್ರಸ್ತಾಪಿಸಲಾಗಿತ್ತು.

    ಇದೀಗ ಆವತ್ತು ಬಿಡುಗಡೆಯಾಗಿದ್ದ ‘ಮೈ ಸಿಕ್ರೇಟ್ ಟೆರಿಯಸ್’ ವೆಬ್‌ಸಿರೀಸ್ ಮತ್ತೆ ಟ್ರೆಂಡಿಂಗ್‌ನಲ್ಲಿದೆ. ಕರೊನಾ ಬಗ್ಗೆ ಮಾಹಿತಿ ಇದೆ ಎಂದಿದ್ದೇ ತಡ, ನೆಟ್‌ಫ್ಲಿಕ್ಸ್‌ನಲ್ಲಿ ಶೋಧಕ್ಕಿಳಿದಿದ್ದಾರೆ. ಸಿಕ್ರೇಟ್ ಏಜೆಂಟ್ ಆಗಿ ಸೋ ಜಿ ಸಬ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. (ಏಜೆನ್ಸೀಸ್)

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts