More

    ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ನಿಷ್ಠೆ ಪ್ರಶ್ನೆ; ಐಪಿಎಲ್ ಅಥವಾ ದೇಶದ ಪರ ಆಡುವ ಗೊಂದಲ!

    ಜೊಹಾನ್ಸ್‌ಬರ್ಗ್: ಮುಂಬರುವ ಐಪಿಎಲ್‌ನಲ್ಲಿ ಆಡಲು ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ರಾಷ್ಟ್ರನಿಷ್ಠೆಯ ಪ್ರಶ್ನೆ ಎದುರಾಗಿದೆ. ಐಪಿಎಲ್ ಮತ್ತು ರಾಷ್ಟ್ರೀಯ ತಂಡದ ಪೈಕಿ ಒಂದನ್ನು ಆಯ್ದುಕೊಳ್ಳಬೇಕಾದ ಸವಾಲು ಆಟಗಾರರ ಮುಂದಿದ್ದು, ಇದರಲ್ಲಿ ಯಾವುದನ್ನು ಆಯ್ದುಕೊಳ್ಳುವುದು ಎಂಬ ಗೊಂದಲ ಮೂಡಿದೆ.

    ಐಪಿಎಲ್ 15ನೇ ಆವೃತ್ತಿ ಮಾರ್ಚ್ 26ರಂದು ಆರಂಭಗೊಳ್ಳಲಿದ್ದರೆ, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 18ರಿಂದ ಏಪ್ರಿಲ್ 12ರವರೆಗೆ ನಡೆಯಲಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈಗಾಗಲೆ ಈ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಆಟಗಾರರಿಗೆ ಬಿಟ್ಟಿದೆ. ರಾಷ್ಟ್ರೀಯ ತಂಡದ ಪರ ಆಡಲು ಬಯಸಿದರೆ, ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಗೈರಾಗಬೇಕಾಗುತ್ತದೆ. ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದರೆ, ದೇಶದ ಪರ ಆಡುವುದಕ್ಕಿಂತ ಹಣವೇ ಮುಖ್ಯವಾಯಿತು ಎಂಬ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ರಾಷ್ಟ್ರೀಯ ತಂಡದ ಪರ ಆಡಲು ಆದ್ಯತೆ ನೀಡಿ ಎಂದು ಟೆಸ್ಟ್ ತಂಡದ ನಾಯಕ ಡೀನ್ ಎಲ್ಗರ್ ಈಗಾಗಲೆ ಸಹ-ಆಟಗಾರರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

    ದಕ್ಷಿಣ ಆಫ್ರಿಕಾ ಏಕದಿನ ಮತ್ತು ಟೆಸ್ಟ್ ತಂಡಗಳ ಭಾಗವಾಗಿರುವ ಒಟ್ಟು 11 ಆಟಗಾರರು ಐಪಿಎಲ್‌ನ ವಿವಿಧ ತಂಡಗಳ ಭಾಗವಾಗಿದ್ದಾರೆ. ಈ ಪೈಕಿ ದಕ್ಷಿಣ ಆಫ್ರಿಕಾ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸವಾಗಿರುವ ಕಗಿಸೊ ರಬಾಡ (ಪಂಜಾಬ್-₹9.25 ಕೋಟಿ), ಲುಂಗಿ ಎನ್‌ಗಿಡಿ (ಡೆಲ್ಲಿ-₹50 ಲಕ್ಷ), ಅನ್ರಿಚ್ ನೋಕಿಯ (ಡೆಲ್ಲಿ-₹6.5 ಕೋಟಿ) ಮತ್ತು ಮಾರ್ಕೋ ಜಾನ್ಸೆನ್ (ಸನ್‌ರೈಸರ್ಸ್‌-₹4.20 ಕೋಟಿ), ಅಗ್ರ ಬ್ಯಾಟರ್‌ಗಳಾದ ಏಡನ್ ಮಾರ್ಕ್ರಮ್ (ಸನ್‌ರೈಸರ್ಸ್‌-₹2.6 ಕೋಟಿ), ರಾಸೀ ವಾನ್ ಡರ್ ಡುಸೆನ್ (ರಾಜಸ್ಥಾನ-₹1 ಕೋಟಿ), ಡೇವಿಡ್ ಮಿಲ್ಲರ್ (ಗುಜರಾತ್-₹3 ಕೋಟಿ), ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ (ಸಿಎಸ್‌ಕೆ-₹50 ಲಕ್ಷ) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (ಲಖನೌ-₹6.75 ಕೋಟಿ) ಸೇರಿದ್ದಾರೆ. ಇವರೆಲ್ಲರೂ ಐಪಿಎಲ್‌ನಲ್ಲಿ ಆಡಲು ಆದ್ಯತೆ ನೀಡಿದರೆ, ಬಹುತೇಕ 2ನೇ ಸ್ತರದ ತಂಡದೊಂದಿಗೆ ಬಾಂಗ್ಲಾದೇಶ ವಿರುದ್ಧ ಆಡಬೇಕಾಗುತ್ತದೆ.

    ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts