More

    ಐಪಿಎಲ್​ಗೆ ದಕ್ಷಿಣ ಆಫ್ರಿಕಾ ಆಟಗಾರರನ್ನು ಕರೆತರಲು ಸಿದ್ಧವಾಗಿದೆ ಪ್ಲ್ಯಾನ್​

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ಕರೊನಾ ವೈರಸ್​ ಹಾವಳಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ ವಿಮಾನ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಐಪಿಎಲ್​ 13ನೇ ಆವೃತ್ತಿಯಲ್ಲಿ ಆಡಲು ಬರುವ ಬಗ್ಗೆ ಅನುಮಾನಗಳು ಮೂಡಿವೆ. ಹೀಗಾಗಿ ದಕ್ಷಿಣ ಆಫ್ರಿಕಾ ಆಟಗಾರರನ್ನು ಐಪಿಎಲ್​ಗಾಗಿ ಯುಎಇಗೆ ಕರೆತರಲು ಫ್ರಾಂಚೈಸಿಗಳು ವಿಶೇಷ ಯೋಜನೆಯನ್ನು ರೂಪಿಸಿವೆ.

    ಆರ್​ಸಿಬಿಗೆ ಎಬಿ ಡಿವಿಲಿಯರ್ಸ್, ಡೇಲ್​ ಸ್ಟೈನ್​, ಚೆನ್ನೈ ಸೂಪರ್​ಕಿಂಗ್ಸ್​ಗೆ ಫಾಫ್​ ಡು ಪ್ಲೆಸಿಸ್​, ಮುಂಬೈ ಇಂಡಿಯನ್ಸ್​ಗೆ ಕ್ವಿಂಟನ್​ ಡಿಕಾಕ್​, ಡೆಲ್ಲಿ ಕ್ಯಾಪಿಟಲ್ಸ್​ಗೆ ಕಗಿಸೊ ರಬಾಡ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಈ ಆಟಗಾರರು ಇಲ್ಲದಿದ್ದರೆ ಈ ತಂಡಗಳು ಸಂಕಷ್ಟ ಎದುರಿಸಲಿವೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಒಟ್ಟಾಗಿ ಸೇರಿ ಬಾಡಿಗೆ ವಿಮಾನದ ಮೂಲಕ ಆಟಗಾರರನ್ನು ಕರೆಸಿಕೊಳ್ಳಲು ಯೋಜನೆ ಸಿದ್ಧಪಡಿಸಿವೆ. ಭಾನುವಾರ ನಡೆಯಲಿರುವ ಐಪಿಎಲ್​ ಆಡಳಿತ ಮಂಡಳಿ ಸಭೆಯ ಬಳಿಕ ಈ ಯೋಜನೆ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​ನಲ್ಲಿ ಮಹಿಳಾ ಕ್ರೀಡಾತಾರೆಯರು

    ಪ್ರತಿ ಫ್ರಾಂಚೈಸಿ ಬಾಡಿಗೆ ವಿಮಾನವನ್ನು ಪ್ರತ್ಯೇಕವಾಗಿ ಕಳುಹಿಸಿ ಆಟಗಾರರನ್ನು ಕರೆಸಿಕೊಳ್ಳುವುದಕ್ಕಿಂತ ಎಲ್ಲ ಫ್ರಾಂಚೈಸಿಗಳು ಒಟ್ಟಾಗಿ ಸೇರಿ ಒಂದೇ ವಿಮಾನದಲ್ಲಿ ಆಟಗಾರರನ್ನು ಕರೆಸಿಕೊಳ್ಳಲು ಬಯಸಿವೆ. ಈ ಬಗ್ಗೆ ಫ್ರಾಂಚೈಸಿಗಳ ನಡುವೆ ಔಪಚಾರಿಕವಾಗಿ ಮಾತುಕತೆಯೂ ನಡೆದಿದೆ. ‘ದಕ್ಷಿಣ ಆಫ್ರಿಕಾ ಆಟಗಾರರು ಇಕ್ಕಟ್ಟಿನಲ್ಲಿರುವ ಬಗ್ಗೆ ನಮಗೆ ತಿಳಿದಿದೆ. ಐಪಿಎಲ್​ ಆಡಳಿತ ಮಂಡಳಿ ಸಭೆಯ ಬಳಿಕ ಎಲ್ಲವನ್ನೂ ಅಂತಿಮಗೊಳಿಸಲಿದ್ದೇವೆ. ಬಹುತೇಕ ಎಲ್ಲ ಫ್ರಾಂಚೈಸಿಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಪ್ರಮುಖ ಆಟಗಾರರಿದ್ದಾರೆ. ಅವರನ್ನು ಈಗ ಬಾಡಿಗೆ ವಿಮಾನದ ಮೂಲಕ ಟೂರ್ನಿಗೆ ಕರೆಸಿಕೊಳ್ಳಲು ಸಾಧ್ಯ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಇದರ ಖರ್ಚಿನ ಹೊರೆಯನ್ನು ಹಂಚಿಕೊಳ್ಳಲು ಬಯಸಿವೆ’ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

    ಐಪಿಎಲ್​ನಲ್ಲಿ ದಕ್ಷಿಣ ಆಫ್ರಿಕಾದ 10 ಆಟಗಾರರು ಆಡಬೇಕಾಗಿದ್ದು, ಈ ಪೈಕಿ 6 ಆಟಗಾರರು ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಆರ್​ಸಿಬಿ ತಂಡಗಳಿಗೆ ಸೇರಿದವರಾಗಿದ್ದಾರೆ. ಎಬಿಡಿ ವಿಲಿಯರ್ಸ್‌ ಆರ್‌ಸಿಬಿ ತಂಡದ ಆಧಾರಸ್ತಂಭವಾಗಿದ್ದರೆ, ಕ್ರಿಸ್ ಮಾರಿಸ್, ಡೇಲ್ ಸ್ಟೇನ್ ಆರ್‌ಸಿಬಿ ತಂಡದಲ್ಲಿದ್ದಾರೆ. ಫಾಫ್ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್ ಸಿಎಸ್‌ಕೆ ಪರ ಆಡುತ್ತಿದ್ದರೆ, ವೇಗಿ ಕಗಿಸೊ ರಬಾಡ (ಡೆಲ್ಲಿ), ಕ್ವಿಂಟನ್ ಡಿ ಕಾಕ್ (ಮುಂಬೈ), ಡೇವಿಡ್ ಮಿಲ್ಲರ್ (ರಾಜಸ್ಥಾನ), ಹರ್ದೂಸ್ ವಿಲ್‌ಜಿಯೊನ್ (ಪಂಜಾಬ್) ಐಪಿಎಲ್‌ನಲ್ಲಿ ಕಣಕ್ಕಿಳಿಯಬೇಕಿರುವ ದ.ಆಫ್ರಿಕಾ ಆಟಗಾರರು.

    ಐಪಿಎಲ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಅನುಮಾನ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts