More

    ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

    ಥಾಣೆ: ಮುಂದಾಲೋಚನೆ ಇಲ್ಲದೆ ಯಾವುದೇ ಕೆಲಸ ಮಾಡಬಾರದು ಅನ್ನೋದಕ್ಕೆ ಇದೊಂದು ನಿದರ್ಶನ. ಕ್ರಿಶ್ಚಿಯನ್ ಧರ್ಮಕ್ಕೆ ಆ ತಾಯಿ ಮತಾಂತರಗೊಂಡರು. ಇಬ್ಬರು ಗಂಡು ಮಕ್ಕಳು. ಅವರ ಪೈಕಿ ಒಬ್ಬ ತಾಯಿಯ ಜತೆಗೆ ಮತಾಂತರವಾಗಿದ್ದ. ಇನ್ನೊಬ್ಬ ಹಿಂದು ಧರ್ಮದಲ್ಲೇ ಮುಂದುವರಿದ. ಸಮಸ್ಯೆ ಶುರುವಾಗಿದ್ದು ತಾಯಿ ಕೊನೆಯುಸಿರೆಳೆದಾಗ !

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಇದು ಎಂದು ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಶನಿವಾರ ಬಹಿರಂಗ ಪಡಿಸಿದ ಮಾಹಿತಿ ಹೀಗಿದೆ – ಪಾಲ್ಘರ್ ಜಿಲ್ಲೆಯ ವಾಡಾ ತಾಲೂಕಿನ ಅವಂದ ಗ್ರಾಮದ ಫುಲಾಯಿ ಧಾಬ್ಡೆ (65) ಮೃತ ಮಹಿಳೆ. ಆಕೆಯ ಪತಿ ಮಹದು ಮತ್ತು ಕಿರಿಯ ಮಗ ಸುಧಾನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಹಿರಿಯ ಮಗ ಸುಭಾಷ್​ ಹಿಂದು ಧರ್ಮದಲ್ಲೇ ಉಳಿದಿದ್ದ. ನವೆಂಬರ್ 18ರಂದು ರಾತ್ರಿ ಫುಲಾಯಿ ಧಾಬ್ಡೆ ಮೃತಳಾಗಿದ್ದಾಳೆ.

    ಇದನ್ನೂ ಓದಿ : ಟೆರರ್​ ಫಂಡಿಂಗ್ ಕೇಸ್​- ಉಗ್ರ ಹಫೀಜ್​​ನ ಇಬ್ಬರು ಸಹಚರರನ್ನು ಜೈಲಿಗಟ್ಟಿದ ಪಾಕ್​ ಕೋರ್ಟ್​

    ಸಹಜವಾಗಿಯೇ ಗ್ರಾಮಸ್ಥರೆಲ್ಲ ಅವರ ಮನೆಯ ಎದುರು ಸೇರಿದ್ದಾರೆ. ಅಂತ್ಯಸಂಸ್ಕಾರದ ವಿಚಾರ ಮಾತುಕತೆ ಶುರುವಾಯಿತು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾದ್ದರಿಂದ ಅದೇ ರೀತಿ ನಡೆಯಲಿ ಎಂದು ಕಿರಿಯ ಮಗ ಸುಧಾನ್ ಹೇಳಿದ. ಹಿರಿಯ ಮಗನಾದ ನಾನು ತಾಯಿಯ ಅಂತ್ಯಸಂಸ್ಕಾರ ನಡೆಸಬೇಕಾಗಿದ್ದು, ಹಿಂದು ಧರ್ಮದ ವಿಧಿ ಪ್ರಕಾರವೇ ನಡೆಸುವೆ ಎಂದು ಸುಭಾಷ್ ಹೇಳಿದ. ಇದು ವಾಕ್ಸಮರಕ್ಕೆ ಕಾರಣವಾಗಿ ಅಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿತ್ತು.

    ಇದನ್ನೂ ಓದಿ : ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತು. ಕೊನೆಗೆ ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ‘ಪೊಲೀಸ್ ಪಾಟೀಲ’ರಿಗೆ ಕರೆ ಕಳುಹಿಸಿದರು. (ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಧ್ಯಸ್ಥಿಕೆ ನಡೆಸುವವರನ್ನು ಪೊಲೀಸ್ ಪಾಟೀಲರು ಎನ್ನುತ್ತಾರೆ). ಆದಾಗ್ಯೂ ಕೊನೆಗೆ ಪೊಲೀಸ್ ಅಧಿಕಾರಿ ಸುಧೀರ್ ಸಂಖೆ ಗ್ರಾಮಕ್ಕೆ ತೆರಳಿ ಮೃತಳ ಕುಟುಂಬ ಸದಸ್ಯರೊಡನೆ ಸಂಧಾನ ನಡೆಸಿ ಕ್ರಿಶ್ಚಿಯನ್ ಧರ್ಮದ ಪ್ರಕಾರ ಆಕೆಯ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು. ಹಿರಿಯ ಮಗ ಅಸಮಾಧಾನಗೊಂಡು ತಾಯಿಯ ಗೊಂಬೆ ಮಾಡಿ ಸಾಂಕೇತಿಕವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ. (ಏಜೆನ್ಸೀಸ್)

    ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts