More

    ಟೆರರ್​ ಫಂಡಿಂಗ್ ಕೇಸ್​- ಉಗ್ರ ಹಫೀಜ್​​ನ ಇಬ್ಬರು ಸಹಚರರನ್ನು ಜೈಲಿಗಟ್ಟಿದ ಪಾಕ್​ ಕೋರ್ಟ್​

    ಲಾಹೋರ್​: ಪಾಕಿಸ್ತಾನದ ಕೋರ್ಟ್ ಟೆರರ್​ ಫಂಡಿಂಗ್ ಕೇಸ್ ಒಂದರಲ್ಲಿ ಜಮಾತ್​ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಉಗ್ರ ಹಫೀಜ್​ ಸಯೀದ್​ನ ಇಬ್ಬರು ಸಹಚರರಿಗೆ ಜೈಲು ಶಿಕ್ಷೆ ವಿಧಿಸಿದೆ. ಲಾಹೋರ್​ನಲ್ಲಿರುವ ಆ್ಯಂಟಿ ಟೆರರಿಸಂ ಕೋರ್ಟ್ (ಎಟಿಸಿ) ಶುಕ್ರವಾರ ಈ ತೀರ್ಪು ನೀಡಿದೆ. ಜೆಯುಡಿ ನಾಯಕರಾದ ಮುಹಮ್ಮದ್​ ಅಶ್ರಫ್​ ಮತ್ತು ಲಕ್​ಮನ್ ಷಾ ಸಜೆಗೊಳಪಟ್ಟವರು.

    ಎಟಿಸಿ ಜಡ್ಜ್ ಅರ್ಶಾದ್ ಹುಸೇನ್​ ಭುಟ್ಟಾ ಅವರು ಅಶ್ರಫ್​ಗೆ 6 ವರ್ಷ, ಷಾಗೆ ಐದೂವರೆ ವರ್ಷ ಸಜೆ ನೀಡಿದ್ದಾರೆ. ಅಲ್ಲದೆ, ಇಬ್ಬರಿಗೂ ತಲಾ 10,00 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಗುರುವಾರವಷ್ಟೇ ಹಫೀಜ್ ಸಯೀದ್​ಗೂ 10 ವರ್ಷ ಸಜೆಯನ್ನು ಎರಡು ಟೆರರ್ ಫಂಡಿಂಗ್ ಕೇಸ್​ನಲ್ಲಿ ಎಟಿಸಿ ಪ್ರಕಟಿಸಿತ್ತು. ಈ ಕೇಸ್​ಗಳಲ್ಲಿ ಸಯೀದ್ ಅವರ ಆಪ್ತರಾದ ಝಫರ್ ಇಕ್ಬಾಲ್​​ ಮತ್ತು ಯಾಹ್ಯಾ ಮುಜಾಹಿದ್​​ಗೆ ತಲಾ 10 ವರ್ಷ ಸಜೆ ಪ್ರಕಟವಾಗಿದೆ. ಇದೇ ವೇಳೆ, ಹಫೀಜ್​ನ ಬಾಮೈದ ಅಬ್ದುಲ್​ ರೆಹ್ಮಾನ್ ಮಕ್ಕಿಗೆ ಆರು ತಿಂಗಳ ಸಜೆ ಸಿಕ್ಕಿದೆ.

    ಇದನ್ನೂ ಓದಿ :  ಯುವಕನ ವಿರುದ್ಧ ಸುಳ್ಳು ರೇಪ್​ ಕೇಸ್: ಕಾಲೇಜು ವಿದ್ಯಾರ್ಥಿನಿಗೆ ಕೋರ್ಟ್​ನಿಂದ ಬಿಗ್​ ಶಾಕ್​!

    ಹಫೀಜ್ ಸಯೀದ್ ಭಾರತದಲ್ಲಿ 2008ರ ಮುಂಬೈ ಉಗ್ರದಾಳಿ ಸೇರಿ ಪ್ರಮುಖ ಉಗ್ರದಾಳಿಗಳ ಸಂಚುಕೋರ. ವಿಶ್ವಸಂಸ್ಥೆಯೂ ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು, ಪಾಕಿಸ್ತಾನ ಸರ್ಕಾರದ ಆಶ್ರಯದಲ್ಲಿದ್ದಾನೆ. (ಏಜೆನ್ಸೀಸ್)

    ಚೆನ್ನೈ ರಸ್ತೆಗಿಳಿದು ಬೆಂಬಲಿಗರಿಗೆ ಸರ್​ಪ್ರೈಸ್ ಕೊಟ್ಟ ಅಮಿತ್ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts